Breaking

Search

Tuesday, 21 July 2026

19 & 20 Current Affairs ಪ್ರಚಲಿತ ವಿದ್ಯಮಾನಗಳು

 



ರಾಜ್ಯ ಸುದ್ದಿಗಳು :



ಕರ್ನಾಟಕ ಸಾಫ್ಟ್‌ವೇರ್ ರಫ್ತುಗೆ ದೇಶದಲ್ಲಿಯೇ ಅಗ್ರಸ್ಥಾನ 

ದೇಶದ ಒಟ್ಟು ಸಾಫ್ಟ್‌ವೇರ್ ರಫ್ತಿನಲ್ಲಿ ಶೇಕಡಾ ೪೧ ಹಾಗೂ ಒಟ್ಟು ರಫ್ತು ಪ್ರಮಾಣದಲ್ಲಿ ಶೇಕಡಾ ೨೪ ರಷ್ಟು ಪಾಲು ಹೊಂದುವ ಮೂಲಕ ಭಾರತದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿರುವ ಕರ್ನಾಟಕವು, ರಾಜ್ಯ ಸರ್ಕಾರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅಧ್ಯಕ್ಷತೆಯ ರಾಜ್ಯಮಟ್ಟದ ರಫ್ತು ಉತ್ತೇಜನಾ ಸಮಿತಿ (SLEPC) ಸಭೆಯಲ್ಲಿ ಈ ಅಧಿಕೃತ ದತ್ತಾಂಶ ಹಂಚಿಕೊಂಡಿದ್ದು, ಕೇಂದ್ರದ 'ಡಿಸ್ಟ್ರಿಕ್ಟ್ ಆಸ್ ಎಕ್ಸ್‌ಪೋರ್ಟ್ ಹಬ್ (DEH)' ಯೋಜನೆಯಡಿ ರಾಜ್ಯದ ಪ್ರಮುಖ ಐದು ಜಿಲ್ಲೆಗಳು ಆಯ್ಕೆಯಾಗುವುದರ ಜೊತೆಗೆ ರಫ್ತು ವಹಿವಾಟು ಹೆಚ್ಚಿಸಲು ಇ-ಕಾಮರ್ಸ್ ನೆರವು, ಸಾಗಣೆ ವೆಚ್ಚ ಸಬ್ಸಿಡಿ, ಗೋದಾಮು ಸೌಲಭ್ಯ ಹಾಗೂ ತರಬೇತಿ ಕಾರ್ಯಾಗಾರಗಳಂತಹ ನೂತನ ಕಾರ್ಯಕ್ರಮಗಳನ್ನು ಘೋಷಿಸಿದೆ.


-----------------------------------


ಬಳ್ಳಾರಿಯ ಸಂಡೂರು ಗುಹೆಗಳಲ್ಲಿ 10,000 ವರ್ಷ ಹಳೆಯ ಆದಿಮಾನವ ನೆಲೆ ಪತ್ತೆ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸ್ವಾಮಿಮಲೈ ಬೆಟ್ಟಸಾಲಿನ ದೇವದಾರಿ ಗುಹೆಗಳಲ್ಲಿ ಲಭ್ಯವಾದ ಪಳೆಯುಳಿಕೆಗಳನ್ನು ಕಾರ್ಬನ್ ಡೇಟಿಂಗ್‌ಗೆ ಒಳಪಡಿಸಿದಾಗ, ಅವು ಸುಮಾರು 10,000 ವರ್ಷಗಳಷ್ಟು ಹಳೆಯ ಮಧ್ಯಶಿಲಾಯುಗ ಹಾಗೂ ಸುಮಾರು 5,000 ವರ್ಷಗಳಷ್ಟು ಹಳೆಯ ನವಶಿಲಾಯುಗದ ಮಾನವ ವಾಸಸ್ಥಾನವೆಂದು ದೃಢಪಟ್ಟಿದೆ. ಪ್ರಸಿದ್ಧ ಪ್ರಾಗೈತಿಹಾಸಿಕ ತಜ್ಞ ಪ್ರೊ. ರವಿ ಕೋರಿಶೆಟ್ಟರ್ ನೇತೃತ್ವದ ತಂಡ ನಡೆಸಿದ ಈ ಸಂಶೋಧನೆಯು ದಕ್ಷಿಣ ಭಾರತದಲ್ಲೇ ಅತಿ ಎತ್ತರದ ಪ್ರದೇಶದಲ್ಲಿ (ಸಮುದ್ರ ಮಟ್ಟದಿಂದ 850 ಮೀಟರ್) ಕಂಡುಬಂದ ಪ್ರಪ್ರಥಮ ಗುಹಾ ವಾಸಸ್ಥಳವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಲ್ಲಿ ಸೂಕ್ಷ್ಮ ಶಿಲಾ ಆಯುಧಗಳು ಹಾಗೂ ಸಾಕುಪ್ರಾಣಿಗಳ ಮೂಳೆಗಳು ದೊರೆತಿವೆ.


________________________________________________________________________________


ರಾಷ್ಟ್ರೀಯ ಸುದ್ದಿಗಳು :



ಯುರೋಪಿನ ಮೂರು ರಾಷ್ಟ್ರಗಳ ಐತಿಹಾಸಿಕ ಪ್ರವಾಸದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು

ಭಾರತ ಮತ್ತು ಪೂರ್ವ ಯುರೋಪಿಯನ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜುಲೈ 19 ರಿಂದ 25 ರವರೆಗೆ ಮೊಲ್ಡೋವಾ, ಉತ್ತರ ಮ್ಯಾಸಿಡೋನಿಯಾ ಹಾಗೂ ರೊಮೇನಿಯಾ ದೇಶಗಳಿಗೆ ಅಧಿಕೃತ ಭೇಟಿ ನೀಡುತ್ತಿದ್ದು, ಇದರಲ್ಲಿ ಮೊಲ್ಡೋವಾ ಮತ್ತು ಉತ್ತರ ಮ್ಯಾಸಿಡೋನಿಯಾಗಳಿಗೆ ಭಾರತದ ರಾಷ್ಟ್ರಪತಿಯೊಬ್ಬರು ಪ್ರಥಮ ಬಾರಿಗೆ ಭೇಟಿ ನೀಡುತ್ತಿರುವುದು ರಾಜತಾಂತ್ರಿಕ ಇತಿಹಾಸದಲ್ಲೇ ಮೈಲಿಗಲ್ಲಾಗಿದೆ ಎಂದು ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ.


----------------------------------


 'ಮಹಾಪ್ರಭು ಜಗನ್ನಾಥ್' ಸಿನಿಮಾ ಬಿಡುಗಡೆಗೆ ಸುಪ್ರೀಂ ಸೂಚನೆ

ವಿವಾದಕ್ಕೀಡಾಗಿದ್ದ 'ಮಹಾಪ್ರಭು ಜಗನ್ನಾಥ್' ಅನಿಮೇಟೆಡ್ ಚಲನಚಿತ್ರವನ್ನು ರಥಯಾತ್ರೆ ಮತ್ತು ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ನಂತರ ಅಂದರೆ ಜುಲೈ ೨೮ ರ ಬಳಿಕವಷ್ಟೇ ಪ್ರದರ್ಶಿಸಲು ಸುಪ್ರೀಂ ಕೋರ್ಟ್ ನಿಬಂಧನೆಗಳೊಂದಿಗೆ ಸಮ್ಮತಿಸಿದೆ.


-----------------------------------


ಚಂಡೀಗಢದಲ್ಲಿ ಚಾಲನೆಗೊಂಡ ಪ್ರಮುಖ ಅಭಿವೃದ್ಧಿ ಯೋಜನೆಗಳು ಮತ್ತು PGIMER ನವೀನ ಆರೋಗ್ಯ ಕೇಂದ್ರಗಳು

ದೇಶದ ಮೂಲಸೌಕರ್ಯ, ಶಿಕ್ಷಣ ಹಾಗೂ ಸಾರ್ವಜನಿಕ ಸೇವೆಗಳನ್ನು ಮತ್ತಷ್ಟು ಸುದೃಢಗೊಳಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಂಡೀಗಢದಲ್ಲಿ ಒಟ್ಟು ₹4,700 ಕೋಟಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ್ದು, ಇದರಲ್ಲಿ ಪ್ರಸಿದ್ಧ PGIMER ಸಂಸ್ಥೆಯ ಅತ್ಯಾಧುನಿಕ 300 ಹಾಸಿಗೆಗಳ ‘ಸುಧಾರಿತ ತಾಯಿ ಮತ್ತು ಮಗು ಕೇಂದ್ರ’ ಹಾಗೂ ನರರೋಗ ತಜ್ಞರ ವೈದ್ಯಕೀಯ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ‘ಸುಧಾರಿತ ನರವಿಜ್ಞಾನ ಕೇಂದ್ರ’ಗಳ ಉದ್ಘಾಟನೆಯೂ ಸೇರಿದೆ.


-------------------------------------------


ಭಾರತೀಯ ನೌಕಾಪಡೆಗೆ ಅಮೆರಿಕದಿಂದ ಅತ್ಯಾಧುನಿಕ 'MH-60R ಸಿಹಾಕ್' ಹೆಲಿಕಾಪ್ಟರ್ ಹಸ್ತಾಂತರ

ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು 2020ರಲ್ಲಿ ಅಮೆರಿಕದೊಂದಿಗೆ ಮಾಡಿಕೊಂಡಿದ್ದ 24 'MH-60R ಸಿಹಾಕ್' ಹೆಲಿಕಾಪ್ಟರ್‌ಗಳ ರಕ್ಷಣಾ ಒಪ್ಪಂದದ ಭಾಗವಾಗಿ, ಅಮೆರಿಕ ಸರ್ಕಾರವು ಇತ್ತೀಚೆಗೆ ಕೇರಳದ ಕೊಚ್ಚಿ ತೀರಕ್ಕೆ ಮತ್ತೊಂದು ಅತ್ಯಾಧುನಿಕ ಸಿಹಾಕ್ ಹೆಲಿಕಾಪ್ಟರ್ ಅನ್ನು ಯಶಸ್ವಿಯಾಗಿ ಹಸ್ತಾಂತರಿಸಿದ್ದು, ಇದು ಭಾರತೀಯ ನೌಕಾಪಡೆಯ ಜಲಸೇನಾ ಕ್ಷಮತೆಯನ್ನು ಗಮನಾರ್ಹವಾಗಿ ಬಲಪಡಿಸಲಿದೆ.


----------------------------------------------


ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು: 'ವಿಕ್ರಮ್-1' ರಾಕೆಟ್ ಯಶಸ್ವಿ ಉಡಾವಣೆ

ಹೈದರಾಬಾದ್‌ನ ನವೋದ್ಯಮ 'ಸ್ಕೈರೂಟ್ ಏರೋಸ್ಪೇಸ್' ಸಂಪೂರ್ಣ ದೇಸೀಯ ತಂತ್ರಜ್ಞಾನದಲ್ಲಿ ನಿರ್ಮಿಸಿದ, 22 ಮೀಟರ್ ಎತ್ತರ ಹಾಗೂ ಸಂಪೂರ್ಣ ಕಾರ್ಬನ್ ಕಾಂಪೋಸಿಟ್ ಕಾಯ ಮತ್ತು 3D-ಪ್ರಿಂಟೆಡ್ ಎಂಜಿನ್ ಒಳಗೊಂಡಿರುವ ಭಾರತದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1', ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 'ಮಿಷನ್ ಆಗಮನ್' ಮೂಲಕ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಕೇವಲ 17 ನಿಮಿಷಗಳಲ್ಲಿ 350 ಕೆಜಿ ತೂಕದ ಉಪಗ್ರಹಗಳನ್ನು 450 ಕಿ.ಮೀ ಎತ್ತರದ ಕೆಳ-ಭೂ ಕಕ್ಷೆಗೆ (LEO) ತಲುಪಿಸುವ ಸಾಮರ್ಥ್ಯ ಪ್ರದರ್ಶಿಸುವುದರೊಂದಿಗೆ, ಖಾಸಗಿ ರಾಕೆಟ್ ಅನ್ನು ಕಕ್ಷೆಗೆ ತಲುಪಿಸಿದ ಅಮೆರಿಕ ಮತ್ತು ಚೀನಾ ನಂತರದ ವಿಶ್ವದ 3ನೇ ದೇಶವಾಗಿ ಭಾರತ ಐತಿಹಾಸಿಕ ಸಾಧನೆಗೆ ಪಾತ್ರವಾಗಿದೆ.


-------------------------------------------


'ಅಮೃತ್ ಭಾರತ್ ಸ್ಟೇಷನ್ ಯೋಜನೆ' ಭಾರತೀಯ ರೈಲ್ವೆ ನಿಲ್ದಾಣಗಳ ಆಧುನಿಕರಣ :

ಭಾರತೀಯ ರೈಲ್ವೆಯ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಿ ಪ್ರಯಾಣಿಕರಿಗೆ ಜಾಗತಿಕ ಮಟ್ಟದ ಅನುಭವ ನೀಡಲು ಡಿಸೆಂಬರ್ 2022 ರಲ್ಲಿ ರೈಲ್ವೆ ಸಚಿವಾಲಯದಿಂದ ಆರಂಭಿಸಲಾದ ‘ಅಮೃತ್ ಭಾರತ್ ಸ್ಟೇಷನ್ ಯೋಜನೆ’ಯಡಿಯಲ್ಲಿ ದೇಶಾದ್ಯಂತ ಆಯ್ಕೆ ಮಾಡಲಾದ 1,338 ರೈಲು ನಿಲ್ದಾಣಗಳನ್ನು ಸುಸಜ್ಜಿತ ದೀರ್ಘಾವಧಿ ಮಾಸ್ಟರ್ ಪ್ಲಾನ್ ಮೂಲಕ ಆಧುನಿಕಗೊಳಿಸಲಾಗುತ್ತಿದ್ದು, ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 20 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 75 ಮರು-ಅಭಿವೃದ್ಧಿಗೊಂಡ ನಿಲ್ದಾಣಗಳನ್ನು ಉದ್ಘಾಟಿಸುವುದರೊಂದಿಗೆ, ಮಲ್ಟಿ-ಮೋಡಲ್ ಸಾರಿಗೆ ಸಂಪರ್ಕ, ಲಿಫ್ಟ್-ಎಸ್ಕಲೇಟರ್‌ಗಳು, ಉಚಿತ ವೈ-ಫೈ, 24/7 ಸಿಸಿಟಿವಿ ಭದ್ರತಾ ಕಣ್ಣಾವಲು ಹಾಗೂ ವಿಶೇಷಚೇತನ ಸ್ನೇಹಿ ವ್ಯವಸ್ಥೆಗಳನ್ನು ಒದಗಿಸುವ ಈ ಮಹತ್ವಾಕಾಂಕ್ಷಿ ಆಂದೋಲನಕ್ಕೆ ಮತ್ತಷ್ಟು ಗಣನೀಯ ವೇಗ ಮತ್ತು ಹೊಸ ಚೈತನ್ಯ ಲಭಿಸಿದಂತಾಗಿದೆ.


________________________________________________________________________________


ಅಂತಾರಾಷ್ಟ್ರೀಯ ಸುದ್ದಿಗಳು :


ಜಪಾನ್ ಓಪನ್ ಬ್ಯಾಡ್ಮಿಂಟನ್ ಸೂಪರ್ 750 ನಲ್ಲಿ 

ಪಿ. ವಿ. ಸಿಂಧು ಐತಿಹಾಸಿಕ ಜಯ

ಟೋಕಿಯೋದಲ್ಲಿ ನಡೆದ BWF ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ, ಭಾರತದ ತಾರಾ ಆಟಗಾರ್ತಿ ಹಾಗೂ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ. ವಿ. ಸಿಂಧು ಅವರು ಜಪಾನ್‌ನ ಪ್ರಬಲ ಸ್ಪರ್ಧಿ ಅಕಾನೆ ಯಮಗುಚಿ ವಿರುದ್ಧ 21-17, 21-17 ನೇರ ಗೇಮ್‌ಗಳಿಂದ 50 ನಿಮಿಷಗಳ ಕಾಲ ನಡೆದ ರೋಚಕ ಕದನದಲ್ಲಿ ಜಯ ಸಾಧಿಸಿ, ತಮ್ಮ ವೃತ್ತಿಜೀವನದ ಚೊಚ್ಚಲ ಸೂಪರ್ 750 ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಜಪಾನ್ ಓಪನ್ ಇತಿಹಾಸದಲ್ಲೇ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


------------------------------------


ಕಾಮನ್‌ವೆಲ್ತ್ ಕ್ರೀಡಾಕೂಟ 2026, ಭಾರತೀಯ ತಂಡವನ್ನು ಮುನ್ನಡೆಸಲಿರುವ ಒಲಿಂಪಿಕ್ ನಾಯಕಿಯರು

ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋ ನಗರದಲ್ಲಿ ಜುಲೈ 23ರಿಂದ ಆರಂಭವಾಗಲಿರುವ 2026ರ ಪ್ರತಿಷ್ಠಿತ ಕಾಮನ್‌ವೆಲ್ತ್ ಕ್ರೀಡಾಕೂಟದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಒಲಿಂಪಿಕ್ ಪದಕ ವಿಜೇತ ವೇಟ್‌ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಭಾರತದ ತ್ರಿವರ್ಣ ಧ್ವಜ ಹಾಗೂ ಬಾಕ್ಸಿಂಗ್ ತಾರೆ ಲವಿನಾ ಬೋರ್ಗೊಹೇನ್ ‘ಕಿಂಗ್ಸ್ ಬ್ಯಾಟನ್’ ಹಿಡಿಯುವ ಮೂಲಕ ದೇಶದ 124 ಕ್ರೀಡಾಪಟುಗಳ ಬೃಹತ್ ತಂಡಕ್ಕೆ ಧ್ವಜಧಾರಿಗಳಾಗಿ ನಾಯಕತ್ವ ವಹಿಸಿ ಯಶಸ್ವಿಯಾಗಿ ಮುನ್ನಡೆಸಲಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆ ತಂದಿರುವ ಈ ಇಬ್ಬರು ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿ ಭಾರತೀಯ ಒಲಿಂಪಿಕ್ ಸಂಸ್ಥೆಯ (IOA) ಅಧ್ಯಕ್ಷರಾದ ಪಿ.ಟಿ. ಉಷಾ ಅವರು ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ.



________________________________________________________________________________

No comments:

Post a Comment