________________________________________________________
17 & 18 ಜುಲೈ 2026
1) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೂತನ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ಯಾರು ನೇಮಕಗೊಂಡಿದ್ದಾರೆ?
ಉತ್ತರ: ಸುನಿಲ್ ರಾಮಗೋಪಾಲ್ ಅಗರ್ವಾಲ್.
2) ಭಾರತದಲ್ಲಿ ಫ್ಯಾಟಿ ಲಿವರ್ (MASH) ಕಾಯಿಲೆ ಚಿಕಿತ್ಸೆಗಾಗಿ CDSCO ಇತ್ತೀಚೆಗೆ ಅನುಮೋದಿಸಿದ ಮೊದಲ GLP-1 ರಿಸೆಪ್ಟರ್ ಅಗೋನಿಸ್ಟ್ ಔಷಧ ಯಾವುದು?
ಉತ್ತರ: ವೆಗೋವಿ (Wegovy - Semaglutide 2.4 mg).
(ನೋವೋ ನಾರ್ಡಿಸ್ಕ್ ಸಂಸ್ಥೆಯ ಈ ಚುಚ್ಚುಮದ್ದನ್ನು ಈ ಹಿಂದೆ ತೂಕ ಇಳಿಕೆಗಾಗಿ (Obesity) ಬಳಸಲಾಗುತ್ತಿತ್ತು.)
3) ಪ್ರಧಾನಿ ನರೇಂದ್ರ ಮೋದಿಯವರು 'ಅಮೃತ್ ಭಾರತ್ ಸ್ಟೇಷನ್ ಯೋಜನೆ' ಅಡಿಯಲ್ಲಿ ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ರೈಲಿಗೆ ಯಾವ ಸ್ಥಳದಿಂದ ಯಾವ ಸ್ಥಳದವರೆಗೆ ಚಾಲನೆ ನೀಡಿದ್ದಾರೆ?
ಉತ್ತರ: ಹರಿಯಾಣದ ಜಿಂದ್ (Jind) ನಿಂದ ಸೋನಿಪತ್ (Sonipat) ವರೆಗೆ.
( ಇದು ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ರೈಲಾಗಿದ್ದು, ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ಹರಿಯಾಣದ ಜಿಂದ್–ಸೋನಿಪತ್ ಮಾರ್ಗದಲ್ಲಿ ಆರಂಭಿಸಲಾಗಿದೆ.)
4) ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿರುವ ಸಂಪೂರ್ಣ ದೇಶೀಯ ತಂತ್ರಜ್ಞಾನದ ಅತ್ಯಾಧುನಿಕ ಸಬ್‌ಮರಿನ್ ನಿರೋಧಕ ಯುದ್ಧನೌಕೆ ಯಾವುದು?
ಉತ್ತರ: 'ಮಾಲ್ವನ' (INS Malvan).
( ಇದು 'ಮಾಹೆ' ಕ್ಲಾಸ್‌ನ ಎರಡನೇ ನೌಕೆಯಾಗಿದ್ದು, ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಿರ್ಮಾಣಗೊಂಡಿದೆ.)
5) ಆಸ್ಟ್ರೇಲಿಯಾದಲ್ಲಿ ನಡೆಯುವ 'ಪಿಚ್ ಬ್ಲಾಕ್ - 2026' ಬಹುರಾಷ್ಟ್ರೀಯ ವಾಯು ಸಮರಾಭ್ಯಾಸದಲ್ಲಿ ಭಾಗವಹಿಸಲು ಭಾರತದ ಯಾವ ಅತ್ಯಾಧುನಿಕ ಯುದ್ಧವಿಮಾನಗಳು ತೆರಳಿವೆ?
ಉತ್ತರ: ರಫೇಲ್ (Rafale) ಯುದ್ಧವಿಮಾನಗಳು.
(20 ದೇಶಗಳ ವಾಯುಸೇನೆಗಳ ನಡುವೆ ಪರಸ್ಪರ ಕಾರ್ಯಚರಣಾ ದಕ್ಷತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.)
6) ಇತ್ತೀಚೆಗೆ ಅಮೆರಿಕ ಸರ್ಕಾರವು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದ ಅತ್ಯಾಧುನಿಕ ಹೆಲಿಕಾಪ್ಟರ್ ಯಾವುದು?
ಉತ್ತರ: MH-60R ಸೀಹಾಕ್ (MH-60R Seahawk).
(ಭಾರತ ಮತ್ತು ಅಮೆರಿಕ ನಡುವಿನ ಒಪ್ಪಂದದ ಅಡಿಯಲ್ಲಿ ಒಟ್ಟು 24 ಹೆಲಿಕಾಪ್ಟರ್‌ಗಳನ್ನು ಖರೀದಿಸಲು 2020ರಲ್ಲಿ ಒಪ್ಪಂದ ನಡೆದಿತ್ತು.)
______________________________________________________
15 & 16 ಜುಲೈ 2026
1) ಇತ್ತೀಚೆಗೆ ಕರ್ನಾಟಕದ ನಾಡಗೀತೆಯಲ್ಲಿ ಯಾವ ಪದವನ್ನು ಸೇರಿಸಲು ತಜ್ಞರ ಸಮಿತಿ ಶಿಫಾರಸು ಮಾಡಿದೆ?
ಉತ್ತರ: 'ಬೌದ್ಧ' ಪದ.
(ನಾಡಗೀತೆಯ "ಪಾರಸಿಕ ಜೈನರುದ್ಯಾನ್" ಎಂಬ ಸಾಲನ್ನು ಪರಿಷ್ಕರಿಸಿ, ಬೌದ್ಧ ಧರ್ಮದ ಐತಿಹಾಸಿಕ ಮಹತ್ವಕ್ಕಾಗಿ ಇನ್ನು ಮುಂದೆ "ಪಾರಸಿಕ ಜೈನ ಬೌದ್ಧರುದ್ಯಾನ್" ಎಂದು ಬದಲಾಯಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.)
2) ಇತ್ತೀಚೆಗೆ GI ಟ್ಯಾಗ್ ಪಡೆದ ಗುಜರಾತ್‌ನ ಪ್ರಸಿದ್ಧ ಕೃಷಿ ಉತ್ಪನ್ನಗಳು ಯಾವುವು?
ಉತ್ತರ: ಉಂಜಾ ಜೀರಿಗೆ (Unjha Cumin) ಮತ್ತು ಉಂಜಾ ಸೋಂಪು (Unjha Fennel).
3) ಭಾರತದ ಮೊದಲ ಸರ್ಕಾರಿ ಸ್ವಾಮ್ಯದ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ?
ಉತ್ತರ: ಕರ್ನಾಟಕ.
( ಬೆಂಗಳೂರಿನಲ್ಲಿ ನಡೆದ 'ಗೂಗಲ್ ಐ/ಒ ಕನೆಕ್ಟ್ ಇಂಡಿಯಾ 2026' ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ.)
4) ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದ 'ಸೆಮಿಕಾನ್ 2.0' ಯೋಜನೆಯ ಒಟ್ಟು ಬಜೆಟ್ ಎಷ್ಟು?
ಉತ್ತರ: ₹1,27,500 ಕೋಟಿ.
5) ಇತ್ತೀಚೆಗೆ ಸುಮಾರು 60 ವರ್ಷಗಳ ನಂತರ 'ಚಿಲೋ' ಎಂದು ಕರೆಯಲಾಗುವ ಭಾರತೀಯ ಬೂದು ಹಾರ್ನ್‌ಬಿಲ್ (Indian Grey Hornbill) ಪಕ್ಷಿಗಳನ್ನು ಯಶಸ್ವಿಯಾಗಿ ಎಲ್ಲಿ ಮರುಪರಿಚಯಿಸಲಾಗಿದೆ?
ಉತ್ತರ: ಗುಜರಾತ್‌ನ ಗಿರ್ ಅರಣ್ಯಕ್ಕೆ (Gir National Park).
6 ) 'ಬ್ರ್ಯಾಂಡ್ ಫೈನಾನ್ಸ್ ಇಂಡಿಯಾ 100 - 2026' ವರದಿಯ ಪ್ರಕಾರ ಭಾರತದ ಅತ್ಯಂತ ಬಲವಾದ ಟೈರ್ ಬ್ರ್ಯಾಂಡ್ ಯಾವುದು?
ಉತ್ತರ: MRF ಲಿಮಿಟೆಡ್ (Madras Rubber Factory).
( ಈ ವರದಿಯ ಪ್ರಕಾರ MRF ಭಾರತದಲ್ಲಿ ನಂಬರ್ 1 ಸ್ಥಾನ ಪಡೆದಿದೆ ಮತ್ತು ಜಾಗತಿಕ ಮಟ್ಟದಲ್ಲಿ ವಿಶ್ವದ 3ನೇ ಅತ್ಯಂತ ಬಲವಾದಟೈರ್ ಬ್ರ್ಯಾಂಡ್ ಆಗಿದೆ.)
______________________________________________________________
13 & 14 ಜುಲೈ 2026
1) ಕೇಂದ್ರ ಶಿಕ್ಷಣ ಸಚಿವಾಲಯದ AISHE 2023-24 ವರದಿ ಪ್ರಕಾರ, ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ಅತಿ ಹೆಚ್ಚು ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸಿದ ಪ್ರಥಮ ರಾಜ್ಯ ಯಾವುದು?
ಉತ್ತರ: ಕರ್ನಾಟಕ.
2) ಭಾರತದ ಗ್ರಾಮೀಣ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ಇಂಟರ್ನೆಟ್ ವೇಗದ ಸಮಸ್ಯೆ ನಿವಾರಿಸಲು ಯಾವ ಇಲಾಖೆಗಳು ಜಂಟಿಯಾಗಿ ದೇಶದ ಅತಿ ದೊಡ್ಡ ಸಮೀಕ್ಷೆ ಆರಂಭಿಸಿವೆ?
ಉತ್ತರ: ಅಂಚೆ ಇಲಾಖೆ ಮತ್ತು ಟ್ರಾಯ್ (TRAI).
(ಡಿಜಿಟಲ್ ಇಂಡಿಯಾ ಯೋಜನೆಯನ್ನು ಹಳ್ಳಿಗಳಿಗೂ ತಲುಪಿಸಲು 'ಗ್ರಾಮೀಣ ಟೆಲಿಕಾಂ ನೆಟ್‌ವರ್ಕ್ ಕಾರ್ಯಕ್ಷಮತೆ ಸಮೀಕ್ಷೆ'ಗೆ ಅಧಿಕೃತ ಚಾಲನೆ ನೀಡಲಾಗಿದೆ.)
3) ಭಾರತೀಯ ಕೃಷಿ ವಲಯವನ್ನು ಆಧುನೀಕರಿಸಲು ಮತ್ತು ರೈತರ ಆದಾಯ ಹೆಚ್ಚಿಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಚಾಲನೆ ನೀಡಿದ ಯೋಜನೆ ಯಾವುದು?
ಉತ್ತರ: ಪ್ರಗತಿ (PRAGATI) ಯೋಜನೆ.
4) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಅತ್ಯಾಧುನಿಕ 'ಜಯಪ್ರಕಾಶ್ ನಾರಾಯಣ್ ಸಾರ್ವಜನಿಕ ಗ್ರಂಥಾಲಯ'ವನ್ನು ಎಲ್ಲಿ ಉದ್ಘಾಟಿಸಿದರು?
ಉತ್ತರ: ನವದೆಹಲಿಯ ಎನ್‌ಡಿಎಂಸಿ (NDMC) ಪ್ರದೇಶದ ಮಂದಿರ್ ಮಾರ್ಗ್‌ನಲ್ಲಿ.
( ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜ ಸುಧಾರಕ 'ಲೋಕನಾಯಕ' ಜಯಪ್ರಕಾಶ್ ನಾರಾಯಣ್ ಅವರ ಸ್ಮರಣಾರ್ಥ ಈ ಆಧುನಿಕ ಡಿಜಿಟಲ್ ಗ್ರಂಥಾಲಯವನ್ನು ನಿರ್ಮಿಸಲಾಗಿದೆ.)
5) ಜುಲೈ 14, 2026 ರಂದು ರಷ್ಯಾದ ಸೋಯುಜ್ MS-29 ಬಾಹ್ಯಾಕಾಶ ನೌಕೆಯ ಮೂಲಕ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) 8 ತಿಂಗಳ ಸುದೀರ್ಘ ಯಾನ ಆರಂಭಿಸಿದ ಭಾರತೀಯ ಮೂಲದ ನಾಸಾ ಗಗನಯಾತ್ರಿ ಯಾರು?
ಉತ್ತರ: ಡಾ. ಅನಿಲ್ ಮೆನನ್.
( ಇವರು ಕಜಕಿಸ್ತಾನದ ಬೈಕನೂರ್‌ನಿಂದ ರಷ್ಯಾದ ಗಗನಯಾತ್ರಿಗಳೊಂದಿಗೆ ತಮ್ಮ ಚೊಚ್ಚಲ ಬಾಹ್ಯಾಕಾಶ ಯಾನವನ್ನು ಆರಂಭಿಸಿದ್ದಾರೆ.)
____________________________________________________________
11 & 12 ಜುಲೈ 2026
1) ಇತ್ತೀಚೆಗೆ 'ಟೈಮ್ ಔಟ್' ನಿಯತಕಾಲಿಕೆ ಬಿಡುಗಡೆ ಮಾಡಿದ 'ವಿಶ್ವದ ಅತ್ಯಂತ ಸಂತೋಷದಾಯಕ ನಗರಗಳು 2026' ರ ಸಮೀಕ್ಷೆಯಲ್ಲಿ ಭಾರತದ ಯಾವ ನಗರವು 6ನೇ ಸ್ಥಾನವನ್ನು ಪಡೆದುಕೊಂಡಿದೆ?
ಉತ್ತರ: ಜೈಪುರ (ರಾಜಸ್ಥಾನ)
2) ಇತ್ತೀಚೆಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರು ಬಿಡುಗಡೆ ಮಾಡಿದ EPFO ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಅತ್ಯಾಧುನಿಕ ತಂತ್ರಜ್ಞಾನದ ಡಿಜಿಟಲ್ ಪ್ಲಾಟ್‌ಫಾರ್ಮ್ ಹೆಸರೇನು?
ಉತ್ತರ: CITES 2.01 (Centralised IT Enabled Services)
( EPFO ಸೇವೆಗಳನ್ನು ವೇಗವಾಗಿ ಮತ್ತು ಸುಲಭಗೊಳಿಸಲು CITES 2.01 ಡಿಜಿಟಲ್ ವೇದಿಕೆಯನ್ನು ಬಿಡುಗಡೆ ಮಾಡಲಾಗಿದೆ.)
3) WDMMA 2026ರ ಗ್ಲೋಬಲ್ ಏರ್ ಪವರ್ ಶ್ರೇಯಾಂಕದಲ್ಲಿ ಭಾರತೀಯ ವಾಯುಪಡೆಯು (IAF) ವಿಶ್ವದಲ್ಲೇ ಎಷ್ಟನೇ ಅತ್ಯಂತ ಬಲಿಷ್ಠ ವಾಯುಪಡೆಯಾಗಿ ಸ್ಥಾನ ಪಡೆದಿದೆ?
ಉತ್ತರ: 3ನೇ ಸ್ಥಾನ
( ಭಾರತೀಯ ವಾಯುಪಡೆಯು ಅಮೆರಿಕಾ ಮತ್ತು ರಷ್ಯಾ ನಂತರ 3ನೇ ಸ್ಥಾನ ಪಡೆದಿದೆ )
4) ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸಾಲದ ಮೇಲೆ ಗಮನಹರಿಸುವ ಪ್ರಮುಖ ಬ್ಯಾಂಕ್ ಆದ 'ನಬಾರ್ಡ್' (NABARD) ಅನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು?
ಉತ್ತರ: 12 ಜುಲೈ 1982
( ಪ್ರತಿ ವರ್ಷ ಜುಲೈ 12 ರಂದು ನಬಾರ್ಡ್ ಸಂಸ್ಥಾಪನಾ ದಿನವನ್ನು ಆಚರಿಸಲಾಗುತ್ತಿದ್ದು, ಇದು ಗ್ರಾಮೀಣ ಭಾರತದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.)
5) ಪ್ರತಿ ವರ್ಷ ಜುಲೈ 11 ರಂದು ಆಚರಿಸಲಾಗುವ 'ವಿಶ್ವ ಜನಸಂಖ್ಯಾ ದಿನ 2026' ರ ಅಧಿಕೃತ ಧ್ಯೇಯವಾಕ್ಯ (Theme) ಏನು?
ಉತ್ತರ: "ಯುವಜನರ ಆಸೆ ಮತ್ತು ಆಕಾಂಕ್ಷೆಗಳನ್ನು ಸಾಕಾರಗೊಳಿಸುವುದು: ಇಂದು ಮತ್ತು ಭವಿಷ್ಯದಲ್ಲಿ" (Realizing the hopes and aspirations of young people – today and for the future).
6) ಇತ್ತೀಚೆಗೆ ನಿಧನರಾದ 'ದಕ್ಷಿಣ ಭಾರತದ ಕೋಗಿಲೆ' ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ಹಿನ್ನೆಲೆ ಗಾಯಕಿ ಯಾರು?
ಉತ್ತರ: ಎಸ್. ಜಾನಕಿ (S. Janaki).
( ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಎಸ್. ಜಾನಕಿ ಅವರು ಜುಲೈ 11, 2026 ರಂದು ತಮ್ಮ 88ನೇ ವಯಸ್ಸಿನಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯ ಮತ್ತು ಹೃದಯಾಘಾತದಿಂದ ನಿಧನರಾದರು.)
_______________________________________________________
09 & 10 ಜುಲೈ 2026
1) 2025ರ 'ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ'ಕ್ಕೆ ಭಾಜನರಾದವರು ಯಾರು?
ಉತ್ತರ: ಆಚಾರ್ಯ ರಣಛೋಡಲಾಲ್ ಗೋಸ್ವಾಮಿ.
(ಅಹಮದಾಬಾದ್‌ನ ಪ್ರಸಿದ್ಧ ವಿದ್ವಾಂಸ ಮತ್ತು ಸಂಗೀತಗಾರರಾದ ಇವರಿಗೆ ಸಂಗೀತ ನಾಟಕ ಅಕಾಡೆಮಿಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರಕಟಿಸಿದೆ.)
2) "ಮಾನಸ್ ಮತ್ತು ಮಹಾಭಾರತ" ಅಂತರರಾಷ್ಟ್ರೀಯ ನಾಗರಿಕತೆಗಳ ಅಧ್ಯಯನ ಕೇಂದ್ರವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಯಿತು?
ಉತ್ತರ: ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ.
( ಭಾರತ ಮತ್ತು ಕಿರ್ಗಿಸ್ತಾನ್ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸಲು ಕಿರ್ಗಿಸ್ತಾನ್‌ನ 'ಮಾನಸ್ ನ್ಯಾಷನಲ್ ಅಕಾಡೆಮಿ' ಮತ್ತು ನವದೆಹಲಿಯ 'CSIR' ಸಂಸ್ಥೆಗಳು ಜಂಟಿಯಾಗಿ ಈ ಕೇಂದ್ರವನ್ನು ಸ್ಥಾಪಿಸಿವೆ.)
3) ಇತ್ತೀಚೆಗೆ DRDO ಯಶಸ್ವಿಯಾಗಿ ಪರೀಕ್ಷಿಸಿದ 'ಪಿನಾಕಾ' (Pinaka) ಎಂದರೇನು?
ಉತ್ತರ: ಇದು ಭಾರತೀಯ ಸೇನೆಯ ದಾಳಿ ಸಾಮರ್ಥ್ಯ ಹೆಚ್ಚಿಸುವ 'ಲಾಂಗ್ ರೇಂಜ್ ಗೈಡೆಡ್ ರಾಕೆಟ್ ಲಾಂಚರ್' ವ್ಯವಸ್ಥೆಯಾಗಿದೆ.
4) ಇತ್ತೀಚೆಗೆ ಭಾರತದ ಪ್ರಧಾನಿ ಭೇಟಿ ನೀಡಿದ ಜಗತ್ಪ್ರಸಿದ್ಧ 'ಪ್ರಂಬನನ್' ಹಿಂದೂ ದೇವಸ್ಥಾನ ಎಲ್ಲಿದೆ?
ಉತ್ತರ: ಇಂಡೋನೇಷ್ಯಾ.
(ಪ್ರಧಾನಿ ನರೇಂದ್ರ ಮೋದಿ ಹಾಗೂ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂತೊ ಅವರು ಯುನೆಸ್ಕೋ ವಿಶ್ವ ಪರಂಪರೆ ತಾಣವಾದ ಇಂಡೋನೇಷ್ಯಾದ ಪ್ರಂಬನನ್ ಹಿಂದೂ ದೇವಾಲಯದ ಸಂರಕ್ಷಣೆ ಮತ್ತು ಪುನಃಸ್ಥಾಪನೆ ಯೋಜನೆಗೆ ಚಾಲನೆ ನೀಡಿದರು.)
5) ಭಾರತದ 98ನೇ ಚೆಸ್ ಗ್ರಾಂಡ್‌ಮಾಸ್ಟರ್ (GM) ಆಗಿ ಹೊರಹೊಮ್ಮಿದ 17 ವರ್ಷದ ಯುವ ಆಟಗಾರ ಯಾರು?
ಉತ್ತರ: ಎಸ್. ಅಶ್ವತ್ (S. Aswath) - ತಮಿಳುನಾಡು.
(ಜುಲೈ 2026ರಲ್ಲಿ ಪುಣೆಯಲ್ಲಿ ನಡೆದ ಅಂತರರಾಷ್ಟ್ರೀಯ ರೌಂಡ್ ರಾಬಿನ್ ಚೆಸ್ ಟೂರ್ನಮೆಂಟ್‌ನಲ್ಲಿ ಅಮೆರಿಕದ ಕಣ್ಣನ್ ವೈದ್ಯನಾಥನ್ ವಿರುದ್ಧ ಜಯಗಳಿಸಿ ಅಶ್ವತ್ ಈ ಸಾಧನೆ ಮಾಡಿದ್ದಾರೆ.)
______________________________________________
07 / 08 ಜುಲೈ 2026
1) ಬ್ರಿಕ್ಸ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BRICS CCI) ನೂತನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ (Executive Director) ಯಾರು ನೇಮಕಗೊಂಡಿದ್ದಾರೆ?
ಉತ್ತರ: ಶರ್ಮಿಷ್ಠಾ ಘೋಷ್.
( 2026ರಲ್ಲಿ ಭಾರತವು ಬ್ರಿಕ್ಸ್ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಪ್ರಮುಖ ಅವಧಿಯಲ್ಲಿ ಈ ಮಹತ್ವದ ನೇಮಕಾತಿ ನಡೆದಿದೆ.)
2) ಭಾರತ ಮತ್ತು ಇಸ್ರೇಲ್ ನಡುವಿನ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (India–Israel BIA) ಯಾವಾಗ ಅಧಿಕೃತವಾಗಿ ಜಾರಿಗೆ ಬಂದಿದೆ?
ಉತ್ತರ: ಜುಲೈ 4, 2026
(BIA : Bilateral Investment Agreement)
3) ಇಸ್ರೋ ಇತ್ತೀಚೆಗೆ ಗಗನಯಾನ ಯೋಜನೆಗಾಗಿ ಯಶಸ್ವಿಯಾಗಿ ಪರೀಕ್ಷಿಸಿದ ರಾಕೆಟ್ ಮೋಟಾರ್ ಯಾವುದು?
ಉತ್ತರ: SOLVE ಮೋಟಾರ್
(ಗಗನಯಾತ್ರಿಗಳು ಭೂಮಿಗೆ ಮರಳುವಾಗ ಸುರಕ್ಷಿತವಾಗಿ ಪ್ಯಾರಾಚೂಟ್ ವ್ಯವಸ್ಥೆಯನ್ನು ನಿಯೋಜಿಸಲು (Apex Cover Separation) ಈ ಮೋಟಾರ್ ನೆರವಾಗುತ್ತದೆ.)
4) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಚಿತಾ ಆಂದೋಲನ' ಯಾವ ಯೋಜನೆಗೆ ಸಂಬಂಧಿಸಿದೆ?
ಉತ್ತರ: ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ.
( ಮಧ್ಯಪ್ರದೇಶದ ಛತ್ತರಪುರ ಮತ್ತು ಪನ್ನಾ ಜಿಲ್ಲೆಗಳಲ್ಲಿ ಈ ನದಿ ಜೋಡಣೆ ಯೋಜನೆ ವಿರುದ್ಧ ಸ್ಥಳೀಯ ಬುಡಕಟ್ಟು ಮಹಿಳೆಯರು ನಡೆಸುತ್ತಿರುವ ತೀವ್ರ ಪ್ರತಿಭಟನೆಯೇ 'ಚಿತಾ ಆಂದೋಲನ'.)
5) ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ (BSG) ನ ನೂತನ ಉಪ ರಾಷ್ಟ್ರೀಯ ಕಮಿಷನರ್ ಯಾರು?
ಉತ್ತರ: ಎಂ. ವಿವೇಕ್ ಆಳ್ವ.
ವಿವರಣೆ: ಕರ್ನಾಟಕದ ಎಂ. ವಿವೇಕ್ ಆಳ್ವ ಅವರನ್ನು BSG ನ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಕಮಿಷನರ್ ಆಗಿ ಮುಖ್ಯ ಕಮಿಷನರ್ ಕೆ. ಕೆ. ಖಂಡೇಲ್ವಾಲ್ ನೇಮಿಸಿದ್ದಾರೆ.
6) ಭಾರತೀಯ ನೌಕಾಪಡೆಗೆ ಜುಲೈ 11 ರಂದು ಸೇರ್ಪಡೆಯಾಗಲಿರುವ ಅತ್ಯಾಧುನಿಕ ಸ್ವದೇಶಿ ಯುದ್ಧನೌಕೆ ಯಾವುದು?
ಉತ್ತರ: ಐಎನ್‌ಎಸ್ ಮಹೇಂದ್ರಗಿರಿ (INS Mahendragiri - F38).
( ಈ ಯುದ್ಧನೌಕೆಯನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರಿಸಲಾಗುತ್ತಿದೆ.)
______________________________________________
06 July
1) 2026ರ 10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದ ತಂಡ ಯಾವುದು?
ಉತ್ತರ: ಆಸ್ಟ್ರೇಲಿಯಾ (ರನ್ನರ್-ಅಪ್: ಇಂಗ್ಲೆಂಡ್).
2) 2026ರ ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ (Global Passport Index 2026) ಭಾರತವು ಎಷ್ಟನೇ ಸ್ಥಾನ ಪಡೆದಿದೆ?
ಉತ್ತರ: 125ನೇ ಸ್ಥಾನ.
(GCS ಸಂಸ್ಥೆ ಬಿಡುಗಡೆ ಮಾಡಿದ ಈ ಸೂಚ್ಯಂಕದಲ್ಲಿ ಒಟ್ಟು 197 ದೇಶಗಳ ಪೈಕಿ ಭಾರತಕ್ಕೆ 125ನೇ ಸ್ಥಾನ ಸಿಕ್ಕಿದ್ದು, ಕಳೆದ ವರ್ಷಕ್ಕಿಂತ 1 ಸ್ಥಾನ ಕುಸಿತ ಕಂಡಿದೆ)
3) ಇತ್ತೀಚೆಗೆ ಸುದ್ದಿಯಲ್ಲಿದ್ದ 'E20 ಪೆಟ್ರೋಲ್' ಎಂದರೇನು?
ಉತ್ತರ: ಶೇಕಡಾ 20 ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ ಇಂಧನ.
(ವಿವರಣೆ: ಇದು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಕಚ್ಚಾ ತೈಲ ಆಮದನ್ನು ತಗ್ಗಿಸುವ ಪರಿಸರ ಸ್ನೇಹಿ ಇಂಧನವಾಗಿದೆ.)
4) ಭಾರತೀಯರಿಗೆ ಕೆನಡಾ 'ಸೂಪರ್ ವೀಸಾ' ಪ್ರೊಸೆಸಿಂಗ್ ಅವಧಿಯನ್ನು ಎಷ್ಟು ದಿನಗಳಿಗೆ ಕಡಿತಗೊಳಿಸಲಾಗಿದೆ?
ಉತ್ತರ: 50 ದಿನಗಳಿಗೆ.
(66 ದಿನಗಳ ಪ್ರೊಸೆಸಿಂಗ್ ಅವಧಿಯನ್ನು 16 ದಿನಗಳಷ್ಟು ಕಡಿಮೆ ಮಾಡಿದೆ)
5) ಇತ್ತೀಚೆಗೆ 'ಆಪರೇಷನ್ ಸುರಕ್ಷಿತ್ ಸೈಬರ್‌ಸ್ಪೇಸ್' ಅಭಿಯಾನವನ್ನು ಪ್ರಾರಂಭಿಸಿದ ರಾಜ್ಯ ಯಾವುದು?
ಉತ್ತರ: ಗುಜರಾತ್.
( ಮಹಿಳೆಯರು ಮತ್ತು ಮಕ್ಕಳ ಆನ್‌ಲೈನ್ ಸುರಕ್ಷತೆಗಾಗಿ ಗುಜರಾತ್ ಪೊಲೀಸರು ಈ 28 ದಿನಗಳ ವಿಶೇಷ ಸೈಬರ್ ಜಾಗೃತಿ ಅಭಿಯಾನವನ್ನು ಜಾರಿಗೆ ತಂದಿದ್ದಾರೆ.)
_____________________________________________
July 04 / 05
1) ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ತನ್ನ 64 ಸ್ಥಳಗಳ ಇಂಗ್ಲಿಷ್ ಕಾಗುಣಿತವನ್ನು ಅಧಿಕೃತವಾಗಿ ಬದಲಾಯಿಸಿದೆ?
ಉತ್ತರ: ಒಡಿಶಾ ಸರ್ಕಾರ.
ಹಳೆಯ ಇಂಗ್ಲಿಷ್ ಹೆಸರು ಬದಲಾದ ಹೊಸ ಇಂಗ್ಲಿಷ್ ಹೆಸರು
Cuttack - Kataka
Balasore - Baleshwar
Rourkela - Raurkela
2) ಭಾರತದ ಮೊದಲ ಖಾಸಗಿ ರಾಕೆಟ್ ಯಾವುದು ಮತ್ತು ಅದನ್ನು ಅಭಿವೃದ್ಧಿಪಡಿಸಿದ ಸಂಸ್ಥೆ ಯಾವುದು?
ಉತ್ತರ: 'ವಿಕ್ರಮ್-1' (ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ).
3) ಶುಭಾಂಶು ಶುಕ್ಲಾ ಆತ್ಮಚರಿತ್ರೆಯ ಹೆಸರೇನು?
ಉತ್ತರ: 'ದಿ ಸೆಕೆಂಡ್ ಆರ್ಬಿಟ್' (The Second Orbit).
4) ಇತ್ತೀಚೆಗೆ ಕೇಂದ್ರ ಸರ್ಕಾರವು ಜಾರಿಗೆ ತಂದ 'EPF ಯೋಜನೆ 2026' ರ ಪ್ರಮುಖ ಉದ್ದೇಶವೇನು?
ಉತ್ತರ: ನಿವೃತ್ತಿ ಉಳಿತಾಯವನ್ನು ರಕ್ಷಿಸುವುದು ಮತ್ತು ಡಿಜಿಟಲ್ ಸೇವೆಗಳನ್ನು ಸುಧಾರಿಸುವುದು.
(ಯಾವುದೇ ಚಂದಾದಾರರು ತಮ್ಮ ಇಪಿಎಫ್ ಖಾತೆಯಿಂದ ಭಾಗಶಃ ಹಣವನ್ನು (Partial Withdrawal) ಹಿಂಪಡೆಯುವಾಗ, ಖಾತೆಯಲ್ಲಿ ಕಡ್ಡಾಯವಾಗಿ ಶೇಕಡಾ 25 ರಷ್ಟು ಕನಿಷ್ಠ ಬ್ಯಾಲೆನ್ಸ್ ಉಳಿಸಿಕೊಳ್ಳಬೇಕಾಗುತ್ತದೆ.)
5) ಇತ್ತೀಚೆಗೆ ಮರುನಾಮಕರಣಗೊಂಡ ಪ್ರಸಿದ್ಧ ಅಂತರರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಯಾವುದು?
ಉತ್ತರ: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ (ಹೊಸ ಹೆಸರು: ಬುಖ್ನಿನ್ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ).
6) ಪ್ರಧಾನಿ ಮೋದಿ ಮತ್ತು ಜಪಾನ್ ಪ್ರಧಾನಿ ಸನಾಯಿ ತಕಾಯಿಚು ಎಷ್ಟು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ?
ಉತ್ತರ: 120 ಒಪ್ಪಂದಗಳು.
(ಭಾರತ ಮತ್ತು ಜಪಾನ್ ನಡುವೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ 16ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ)
___________________________________
July 2/3
ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಜುಲೈ 3. (ಥೀಮ್: "Breaking Free from Single-Use Plastics: Towards a Sustainable Future" )
2) 2026ರಲ್ಲಿ ನವದೆಹಲಿಯಲ್ಲಿ ಯಶಸ್ವಿಯಾಗಿ ಜರುಗಿದ 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಿದ ಜಪಾನ್‌ನ ನೂತನ ಪ್ರಧಾನಿ ಯಾರು?
ಉತ್ತರ: ಸನಾಯ್ ತಕ್ಕೈಚಿ (Sanae Takaichi).
3) ಇತ್ತೀಚೆಗೆ ಸಿಂಗಾಪುರದ ಚಾಂಗಿ ನೌಕಾನೆಲೆಗೆ ಯಶಸ್ವಿಯಾಗಿ ಭೇಟಿ ನೀಡಿದ ಭಾರತೀಯ ನೌಕಾಪಡೆಯ ಪೂರ್ವ ನೌಕಾಪಡೆಯ (Eastern Fleet) ಮೂರು ಪ್ರಮುಖ ಯುದ್ಧನೌಕೆಗಳು ಯಾವುವು?
ಉತ್ತರ: ಐಎನ್‌ಎಸ್ ಉದಯಗಿರಿ (INS Udaygiri), ಐಎನ್‌ಎಸ್ ಕವರಟ್ಟಿ (INS Kavaratti) ಮತ್ತು ಐಎನ್‌ಎಸ್ ಶಕ್ತಿ (INS Shakti).
4) ಇತ್ತೀಚೆಗೆ 'ಸ್ವಿಫ್ಟ್ ಬಾಹ್ಯಾಕಾಶ ದೂರದರ್ಶಕ'ವನ್ನು (Swift Observatory) ಭೂಮಿಯ ವಾತಾವರಣಕ್ಕೆ ಬಿದ್ದು ನಾಶವಾಗದಂತೆ ತಡೆಯಲು ನಾಸಾ ಹಮ್ಮಿಕೊಂಡಿರುವ ರೋಬೋಟಿಕ್ ರಕ್ಷಣಾ ಕಾರ್ಯಾಚರಣೆಯ ಹೆಸರೇನು?
ಉತ್ತರ: ಸ್ವಿಫ್ಟ್ ಬೂಸ್ಟ್ ಮಿಷನ್ (Swift Boost Mission).
5)2026-27ರ ಮೊದಲ ಎರಡು ತಿಂಗಳಲ್ಲಿ ಭಾರತದ ಹಣಕಾಸು ಕೊರತೆ (Fiscal Deficit) ಎಷ್ಟಾಗಿದೆ?
ಉತ್ತರ: ₹1.62 ಲಕ್ಷ ಕೋಟಿ.
ವಿವರಣೆ: ಇದು ವಾರ್ಷಿಕ ಗುರಿಯ 9.6% ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 12 ಪಟ್ಟು ಹೆಚ್ಚಾಗಿದೆ.
6) ಭಾರತದ ಸ್ವದೇಶಿ ಸ್ಯಾಟಲೈಟ್ ಆಧಾರಿತ ನ್ಯಾವಿಗೇಶನ್ ವ್ಯವಸ್ಥೆಯಾದ GAGAN ಅನ್ನು ಯಾವ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ?
ಉತ್ತರ: ಗಗನ್ (GAGAN) ಎಂಬುದು ವಿಮಾನಗಳ ಸುರಕ್ಷಿತ ಸಂಚಾರ ಮತ್ತು ನಿಖರ ಸ್ಥಳ ಮಾಹಿತಿಗಾಗಿ ISRO ಮತ್ತು AAI ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಭಾರತದ ಸ್ವದೇಶಿ ಸ್ಯಾಟಲೈಟ್ ಆಧಾರಿತ ನ್ಯಾವಿಗೇಶನ್ ವ್ಯವಸ್ಥೆಯಾಗಿದೆ.
--------------------------------------------------------
01 July
1) ಭಾರತೀಯ ಸೇನೆಯ (Indian Army) ನೂತನ ಉಪಮುಖ್ಯಸ್ಥರು (VCOAS) ಯಾರು?
ಉತ್ತರ: ಲೆಫ್ಟಿನೆಂಟ್ ಜನರಲ್ ಸಂದೀಪ್ ಜೈನ್.
(ಅವರು 2026ರ ಜುಲೈ 1ರಂದು ಭಾರತೀಯ ಸೇನೆಯ Vice Chief of the Army Staff (VCOAS) ಆಗಿ ಅಧಿಕಾರ ಸ್ವೀಕರಿಸಿದರು)
2) ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಜುಲೈ 1. ( Theme : "Behind the Mask: Who Heals the Healers?" (ಮುಖವಾಡದ ಹಿಂದೆ: ಗುಣಪಡಿಸುವವರನ್ನು ಗುಣಪಡಿಸುವವರು ಯಾರು?).
3) ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು (National CA Day) ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಜುಲೈ 1. (ನೆನಪಿರಲಿ : 1949ರ ಚಾರ್ಟರ್ಡ್ ಅಕೌಂಟೆಂಟ್ಸ್ ಕಾಯ್ದೆ (Chartered Accountants Act, 1949) ಅಡಿಯಲ್ಲಿ ಸ್ಥಾಪಿತವಾದ Institute of Chartered Accountants of India ದೇಶದಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ವೃತ್ತಿಯನ್ನು ನಿಯಂತ್ರಿಸುವ ಸಾಂವಿಧಾನಿಕ ಸಂಸ್ಥೆಯಾಗಿದೆ.)
4) ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ 2024ರ ವರದಿ ಪ್ರಕಾರ, ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ?
ಉತ್ತರ: ಎರಡನೇ ಸ್ಥಾನ (ಮೊದಲ ಸ್ಥಾನ: ದೆಹಲಿ).
---------------------------------------------------------------------------------------------------------
18 June
1) 'ಜಾಗತಿಕ ಮರುಭೂಮೀಕರಣ ಮತ್ತು ಬರಗಾಲ ವಿರೋಧಿ ದಿನ'ವನ್ನು (World Day to Combat Desertification and Drought) ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಪ್ರತಿವರ್ಷ ಜೂನ್ 17 ರಂದು.
2) ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದ (CETA) ಯಾವಾಗ ಜಾರಿಗೆ ಬರಲಿದೆ?
ಉತ್ತರ: ಜುಲೈ 15, 2026 ರಿಂದ.
(ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಭಾರತ–ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ (Comprehensive Economic and Trade Agreement – CETA) 2026ರ ಜುಲೈ 15ರಿಂದ ಜಾರಿಗೆ ಬರಲಿದೆ ಎಂದು ಅಧಿಕೃತವಾಗಿ ಘೋಷಿಸಿದೆ)
3) ಇತ್ತೀಚೆಗೆ ಭಾರತ ಮತ್ತು ಥೈಲ್ಯಾಂಡ್ ನಡುವಿನ 10ನೇ ರಕ್ಷಣಾ ಸಂವಾದ (10th Defence Dialogue) ಎಲ್ಲಿ ಜರುಗಿತು?
ಉತ್ತರ: ಬ್ಯಾಂಕಾಕ್ (ಥೈಲ್ಯಾಂಡ್).
4) ಇತ್ತೀಚೆಗೆ 'ರಷ್ಯಾ-ಆಸಿಯಾನ್ ಶೃಂಗಸಭೆ' (Russia-ASEAN Summit) ಎಲ್ಲಿ ಆರಂಭವಾಯಿತು?
ಉತ್ತರ: ರಷ್ಯಾದ ಕಜಾನ್ (Kazan) ನಗರದಲ್ಲಿ.
------------------------------------------------------------------------------------------------------
17 June
1) RBI ಇತ್ತೀಚೆಗೆ ಸೈಬರ್ ವಂಚನೆ ಬಗ್ಗೆ ಜಾಗೃತಿ ಮೂಡಿಸಲು ಯಾವ ಅಭಿಯಾನವನ್ನು ಆರಂಭಿಸಿದೆ?
ಉತ್ತರ: RBI Reelathon 2026.
2) 2026ರ 'ಟೈಮ್' (TIME) ನಿಯತಕಾಲಿಕೆಯ ಜಗತ್ತಿನ 100 ಅತ್ಯಂತ ಪ್ರಭಾವಶಾಲಿ ಕ್ರೀಡಾಪಟುಗಳ ಪಟ್ಟಿಗೆ ಆಯ್ಕೆಯಾದ ಏಕೈಕ ಭಾರತೀಯ ಯಾರು?
ಉತ್ತರ: ಸ್ಮೃತಿ ಮಂಧಾನ (ಕ್ರಿಕೆಟ್ ಆಟಗಾರ್ತಿ).
3) ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6) ವರದಿ ಪ್ರಕಾರ, ಭಾರತದಲ್ಲೇ ಅತ್ಯಂತ ಕಡಿಮೆ ಒಟ್ಟು ಜನನ ಪ್ರಮಾಣ (TFR - 0.9) ದಾಖಲಿಸಿದ ಪ್ರದೇಶ ಯಾವುದು?
ಉತ್ತರ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.
4) ಪ್ರಧಾನಿ ನರೇಂದ್ರ ಮೋದಿ ಅವರ 12 ವರ್ಷಗಳ ಅಧಿಕಾರಾವಧಿಯ 100ನೇ ವಿದೇಶಿ ಪ್ರವಾಸದ ಭಾಗವಾಗಿ ಭೇಟಿ ನೀಡಿದ ದೇಶ ಯಾವುದು?
ಉತ್ತರ: ಸ್ಲೋವಾಕಿಯಾ.
---------------------------------------------------------------------------
16 June
1) ಇತ್ತೀಚೆಗೆ 'ನೂತನ ಕೈಗಾರಿಕಾ ನೀತಿ-2026' ಅನ್ನು ಬಿಡುಗಡೆ ಮಾಡಿದ ರಾಜ್ಯ ಯಾವುದು?
ಉತ್ತರ: ಗುಜರಾತ್.(Gujarat Industrial Policy 2026)
2) ಇತ್ತೀಚಿನ NFHS-6 ವರದಿಯ ಪ್ರಕಾರ, ಭಾರತದಲ್ಲೇ ಅತ್ಯಂತ ಕಡಿಮೆ ಒಟ್ಟು ಜನನ ಪ್ರಮಾಣ (TFR - 0.9) ದಾಖಲಿಸಿದ ಪ್ರದೇಶ ಯಾವುದು?
ಉತ್ತರ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.
(NFHS ಎಂದರೆ National Family Health Survey)
3) NEET UG ಮರುಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ತಾತ್ಕಾಲಿಕವಾಗಿ ನಿಷೇಧಿಸಿರುವ ಮೆಸೇಜಿಂಗ್ ಆ್ಯಪ್ ಯಾವುದು?
ಉತ್ತರ: ಟೆಲಿಗ್ರಾಮ್ (Telegram). (22 ಜೂನ್ 2026ರವರೆಗೆ ತಾತ್ಕಾಲಿಕ)
4) ಇತ್ತೀಚೆಗೆ ಪ್ರಧಾನಿ ಮೋದಿಯವರಿಗೆ 'ದಿ ಆರ್ಡರ್ ಆಫ್ ದಿ ವೈಟ್ ಡಬಲ್ ಕ್ರಾಸ್' (ಫಸ್ಟ್ ಕ್ಲಾಸ್) ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ ದೇಶ ಯಾವುದು?
ಉತ್ತರ: ಸ್ಲೋವಾಕಿಯಾ (ರಾಜಧಾನಿ: ಬ್ರಟಿಸ್ಲಾವಾ (Bratislava),
ಕರೆನ್ಸಿ : ಯೂರೋ (Euro, €)
----------------------------------------------------------------------------------------------------------------
June 14
1) ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು (World Blood Donor Day) ಪ್ರತಿವರ್ಷ ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಜೂನ್ 14. (2026 ಥೀಮ್: One Drop of Humanity. Give Blood. Save Lives." (ಒಂದು ಹನಿ ಮಾನವೀಯತೆ. ರಕ್ತದಾನ ಮಾಡಿ. ಜೀವಗಳನ್ನು ಉಳಿಸಿ.)
2) ಇತ್ತೀಚೆಗೆ ಡಿಆರ್‌ಡಿಒ (DRDO) ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಪರೀಕ್ಷಿಸಿದ, ಭಾರತದ ಸ್ವದೇಶಿ 'ಐರನ್ ಡೋಮ್' ಮಾದರಿಯ ರಕ್ಷಣಾ ವ್ಯವಸ್ಥೆ ಮತ್ತು ಹೊಸ ನೌಕಾದಳ ವಿರೋಧಿ ಕ್ಷಿಪಣಿ ಯಾವುದು?
ಉತ್ತರ: ಬಿಎಂಡಿ (BMD - ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣೆ) ವ್ಯವಸ್ಥೆ ಮತ್ತು NASM-MR (ಮಧ್ಯಮ ಶ್ರೇಣಿಯ ನೌಕಾ ವಿರೋಧಿ ಕ್ಷಿಪಣಿ).
( BDM : ಶತ್ರು ಕ್ಷಿಪಣಿ ಆಕಾಶದ ತುತ್ತತುದಿಯಲ್ಲಿದ್ದರೂ (ಎಕ್ಸೋ-ವಾತಾವರಣ) ಅಥವಾ ಭೂಮಿಯ ಹತ್ತಿರ ಬಂದಿದ್ದರೂ (ಎಂಡೋ-ವಾತಾವರಣ), ಭಾರತದ ಮಣ್ಣನ್ನು ಮುಟ್ಟುವ ಮುನ್ನವೇ ಗಾಳಿಯಲ್ಲೇ ಹೊಡೆದುರುಳಿಸುತ್ತದೆ.)
(NASM-MR : ಇದು ರೇಡಾರ್‌ಗಳ ಕಣ್ಣಿಗೆ ಬೀಳದಂತೆ ಸಮುದ್ರದ ಅಲೆಗಳ ಮಟ್ಟದಲ್ಲೇ ಕೆಳಗಡೆ ಹಾರಿಕೊಂಡು ಹೋಗಿ (ಸೀ-ಸ್ಕಿಮ್ಮಿಂಗ್), ಶತ್ರುಗಳ ಹಡಗಿಗೆ ನಿಖರವಾಗಿ (ಪಿನ್‌ಪಾಯಿಂಟ್) ಡಿಕ್ಕಿ ಹೊಡೆದು ಧ್ವಂಸ ಮಾಡುತ್ತದೆ.)
3) ಭಾರತದ ಭೂಸೇನೆಯ ಮುಂದಿನ ನೂತನ ಮುಖ್ಯಸ್ಥರಾಗಿ (Chief of the Army Staff) ಯಾರು ನೇಮಕಗೊಂಡಿದ್ದಾರೆ?
ಉತ್ತರ: ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ( ಪ್ರಸ್ತುತ ಭೂಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು ಜೂನ್ 30 ರಂದು ನಿವೃತ್ತರಾಗಲಿದ್ದಾರೆ, ಅಂದೇ ಇವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.)
4) ಇತ್ತೀಚೆಗೆ ಭಾರತೀಯ ಸೇನಾ ಅಕಾಡೆಮಿ (IMA) ಇತಿಹಾಸದಲ್ಲೇ ಮೊದಲ ಬಾರಿಗೆ ತರಬೇತಿ ಮುಗಿಸಿ ಸೇನೆಗೆ ಸೇರಿದ ಮಹಿಳಾ ಅಧಿಕಾರಿಗಳ ಸಂಖ್ಯೆ ಎಷ್ಟು?
ಉತ್ತರ: 9 ಮಹಿಳಾ ಕೆಡೆಟ್‌ಗಳು. ( 1932 ರಲ್ಲಿ ಭಾರತೀಯ ಸೇನಾ ಅಕಾಡೆಮಿ (IMA) ಅಸ್ತಿತ್ವಕ್ಕೆ ಬಂದಿತ್ತು. ಅಂದಿನಿಂದಲೂ ಕೇವಲ ಪುರುಷ ಅಧಿಕಾರಿಗಳು ಮಾತ್ರ ತರಬೇತಿ ಪಡೆಯುತ್ತಿದ್ದರು ಇದೇ ಮೋದಲ ಬಾರಿಗೆ ಮಹಿಳಾ ಸೇನಾಧಿಕಾರಿಗಳು ತರಬೇತಿ ಪಡೆದಿದ್ದಾರೆ.)
-----------------------------------------------------------------------------------------------------------------------------
June 13
1) ಇತ್ತೀಚೆಗೆ ನಿಧನರಾದ ಜಸ್ಪಾಲ್ ರಾಣಾ ಅವರು ಯಾವ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
ಉತ್ತರ: ಶೂಟಿಂಗ್ (Shooting).(ಹೃದಯಾಘಾತದಿಂದ ನಿಧನರಾದ ಭಾರತದ ಶೂಟಿಂಗ್ ಕ್ಷೇತ್ರದ ದಂತಕಥೆ ಮತ್ತು ಪ್ರಸಿದ್ಧ ತರಬೇತುದಾರ (Coach))
2) ಇತ್ತೀಚೆಗೆ ಚರ್ಚೆಯಲ್ಲಿರುವ ಶಿಗೆಲ್ಲಾ ಸೋಂಕು ಮಾನವನ ಯಾವ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ?
ಉತ್ತರ: ಜೀರ್ಣಾಂಗ ವ್ಯೂಹ.(ಶಿಗೆಲ್ಲಾ ಒಂದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು (Shigellosis)
3) ಇತ್ತೀಚಿನ (ಏಪ್ರಿಲ್ 2026) ಮೂರನೇ ಜಂಟಿ (Synchronised) ಸಮೀಕ್ಷೆಯ ವರದಿ ಪ್ರಕಾರ ಯಾವ ವನ್ಯಜೀವಿ ಸಂತತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ?
ಉತ್ತರ: ನೀಲಗಿರಿ ತಹರ್ (Nilgiri Tahr).
(ನೀಲಗಿರಿ ತಹರ್ ತಮಿಳುನಾಡಿನ ರಾಜ್ಯ ಪ್ರಾಣಿ.
ಇದು ಪಶ್ಚಿಮ ಘಟ್ಟಗಳಲ್ಲಿ (Western Ghats) ಮಾತ್ರ ಕಂಡುಬರುವ (Endemic) ಅಪರೂಪದ ಪ್ರಾಣಿ.
ತಮಿಳುನಾಡು ಸರ್ಕಾರವು 2022ರಲ್ಲಿ ಇದರ ಸಂರಕ್ಷಣೆಗಾಗಿ Project Nilgiri Tahr ಅನ್ನು ಆರಂಭಿಸಿತು. )
4) ₹3.25 ಲಕ್ಷ ಕೋಟಿ ಮೌಲ್ಯದ 114 ರಫೇಲ್ ಯುದ್ಧವಿಮಾನಗಳ ಪ್ರಸ್ತಾವಿತ ಒಪ್ಪಂದದಲ್ಲಿ 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ತಂತ್ರಜ್ಞಾನ ವರ್ಗಾವಣೆ ಮತ್ತು ಭಾರತದಲ್ಲೇ ಉತ್ಪಾದನೆಗೆ ಯಾವ ದೇಶ ಸಮ್ಮತಿಸಿದೆ?
ಉತ್ತರ: ಫ್ರಾನ್ಸ್.
---------------------------------------------------------------------------------------------------------------------------
June 12
1) "ವಿಶ್ವ ಬಾಲಕಾರ್ಮಿಕ ವಿರೋಧಿ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ ?
ಉತ್ತರ : ಪ್ರತಿ ವರ್ಷ ಜೂನ್ 12.
2) ಇತ್ತೀಚೆಗೆ ಟರ್ಕಿಗೆ (Türkiye) ಭಾರತದ ನೂತನ ರಾಯಭಾರಿಯಾಗಿ (Ambassador) ಯಾರು ನೇಮಕಗೊಂಡಿದ್ದಾರೆ?
ಉತ್ತರ: ರುದ್ರ ಗೌರವ್ ಶ್ರೇಷ್ಠ್ (Rudra Gaurav Shresth).
3) ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ನೀತಿ ಆಯೋಗದ (NITI Aayog) ಎಷ್ಟನೇ ಆಡಳಿತ ಮಂಡಳಿ ಸಭೆ ಜರುಗಿತು?
ಉತ್ತರ: 11ನೇ ಸಭೆ (11 ಜೂನ್ 2026).
( 'ವಿಕಸಿತ ಭಾರತ 2047ಗುರಿ' ತಲುಪಲು "ಯುವಶಕ್ತಿ" ಮತ್ತು "ಕೇಂದ್ರ-ರಾಜ್ಯಗಳ ಸಾಮೂಹಿಕ ಜವಾಬ್ದಾರಿ"ಗೆ ಈ ಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ.)
4) ಇತ್ತೀಚೆಗೆ ಗ್ರಾಹಕರಿಗೆ ಎಂಟರ್‌ಪ್ರೈಸ್ AI ಪರಿಹಾರಗಳನ್ನು ಒದಗಿಸಲು ಜಾಗತಿಕ AI ಕಂಪನಿಯಾದ Anthropic ಜೊತೆಗೆ ಪಾಲುದಾರಿಕೆ ಮಾಡಿಕೊಂಡ ಭಾರತೀಯ ಐಟಿ ಸಂಸ್ಥೆ ಯಾವುದು?
ಉತ್ತರ : ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS).
----------------------------------------------------------------------------------------------------------------------------
June 11
1) ರಾಷ್ಟ್ರೀಯ ಗಿಡಮೂಲಿಕೆಗಳು ಮತ್ತು ಮಸಾಲೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಪ್ರತಿ ವರ್ಷ ಜೂನ್ 10 ರಂದು. ( 'ಮಸಾಲೆಗಳ ರಾಜ' ಎಂದು ಕರಿಮೆಣಸ (ಕಾಳುಮೆಣಸು)ನ್ನು ಕರೆಯಲಾಗುತ್ತದೆ)
2) ಉತ್ತರ ಪ್ರದೇಶದ ಗ್ರಾಮೀಣ ಭಾಗಗಳಿಗೆ ಹೈ-ಸ್ಪೀಡ್ ಇಂಟರ್ನೆಟ್ ಒದಗಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿರುವ ಯೋಜನೆ ಯಾವುದು?
ಉತ್ತರ: ಪ್ರಾಜೆಕ್ಟ್ ಗಂಗಾ (Project GANGA - Government Assisted Network for Growth and Advancement).
3)ಇತ್ತೀಚೆಗೆ ರಕ್ಷಣಾ ಸಚಿವಾಲಯವು 250 ಮೆಗಾವ್ಯಾಟ್ ಸಾಮರ್ಥ್ಯದ ಬೃಹತ್ ಸೌರ ವಿದ್ಯುತ್ ಯೋಜನೆಗೆ ಎಲ್ಲಿ ಅನುಮೋದನೆ ನೀಡಿದೆ?
ಉತ್ತರ: ಸೀತಾಪುರ, ಉತ್ತರ ಪ್ರದೇಶ.
4) 2026ರ ಫಿಫಾ ವಿಶ್ವಕಪ್‌ನ ವಿಶೇಷತೆ ಏನು ಮತ್ತು ಇದನ್ನು ಯಾರು ಆಯೋಜಿಸುತ್ತಿದ್ದಾರೆ?
ಉತ್ತರ: ಇದು ಇದುವರೆಗಿನ ಅತಿ ದೊಡ್ಡ ಫಿಫಾ ವಿಶ್ವಕಪ್ ಟೂರ್ನಮೆಂಟ್ ಆಗಿದ್ದು, ಇದನ್ನು ಉತ್ತರ ಅಮೆರಿಕಾದ ಮೂರು ದೇಶಗಳು (ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಮೆಕ್ಸಿಕೋ) ಜಂಟಿಯಾಗಿ ಆಯೋಜಿಸುತ್ತಿವೆ.
( ಈ ಬಾರಿ ಒಟ್ಟು 48 ತಂಡಗಳು ಭಾಗವಹಿಸುತ್ತಿದ್ದು, 16 ವಿವಿಧ ನಗರಗಳಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಇದು ಜೂನ್ 11, 2026 ರಿಂದ ಜುಲೈ 19, 2026 ರವರೆಗೆ ನಡೆಯಲಿದೆ (ಭಾರತೀಯ ಕಾಲಮಾನದ ಪ್ರಕಾರ ಜೂನ್ 12 ರಿಂದ ಜುಲೈ 20)
----------------------------------------------------------------------------------------------------------------------------
10 June
1) ಪ್ರತಿ ವರ್ಷ 'ವಿಶ್ವ ನೇತ್ರದಾನ ದಿನ'ವನ್ನು (World Eye Donation Day) ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಪ್ರತಿ ವರ್ಷ ಜೂನ್ 10 ರಂದು.
2) ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಗೆ ನಿರಂತರವಾಗಿ ಸೇವೆ ಸಲ್ಲಿಸಿದ 'ಚುನಾಯಿತ' ಪ್ರಧಾನ ಮಂತ್ರಿ ಯಾರು?
ಉತ್ತರ: ನರೇಂದ್ರ ಮೋದಿ. (ಜೂನ್ 10, 2026 ಕ್ಕೆ ಒಟ್ಟು 4,399 ದಿನಗಳು. (ಪಂಡಿತ್ ಜವಾಹರಲಾಲ್ ನೆಹರು 4,398 ದಿನಗಳು ಚುನಾಯಿತ).
3) ಭಾರತದಲ್ಲಿ BRICS ಕೃಷಿ ಸಚಿವರ ಸಮ್ಮೇಳನ 2026 ಅನ್ನು ಯಾವ ನಗರದಲ್ಲಿ ಆಯೋಜಿಸಲಾಯಿತು?
ಉತ್ತರ: ಇಂದೋರ್ (ಮಧ್ಯಪ್ರದೇಶ).
(ಜೂನ್ 09 ರಿಂದ 11 ವರೆಗೆ)
( ಉದ್ದೇಶ : ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ, ಆಹಾರ ಭದ್ರತೆ ಹಾಗೂ ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಬಲಪಡಿಸುವುದು.)
4) ಭಾರತದ ಮೊದಲ ಬೃಹತ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಆಧಾರಿತ 'ಬಿಲ್ಟ್-ಟು-ಸೂಟ್' (Built-to-suit) ಡೇಟಾ ಸೆಂಟರ್ ಅನ್ನು ಎಲ್ಲಿ ಸ್ಥಾಪಿಸಲಾಗುತ್ತಿದೆ?
ಉತ್ತರ: ಗುಜರಾತ್‌ನ ಜಾಮ್‌ನಗರದಲ್ಲಿ.( ಈ ಬೃಹತ್ AI ಡೇಟಾ ಸೆಂಟರ್ ಸ್ಥಾಪಿಸಲು ಮೆಟಾ (Meta Platforms) ಮತ್ತು ರಿಲಯನ್ಸ್ ಇಂಡಸ್ಟ್ರೀಸ್ (RIL). ಸಹಭಾಗಿತ್ವದಲ್ಲಿ)
5) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೂನ್ 9, 2026 ರಂದು ನವದೆಹಲಿಯಲ್ಲಿ ಉದ್ಘಾಟಿಸಿದ ಅತ್ಯಾಧುನಿಕ ಭೂ ಬಂದರು ನಿರ್ವಹಣಾ ವ್ಯವಸ್ಥೆಯ (LPMS) ಹೆಸರೇನು?
ಉತ್ತರ: 'ವಿನಿಮಯ' (VINIMAY).
(ಭಾರತದ ಭೂ ಬಂದರುಗಳಲ್ಲಿ (Land Ports) ಸರಕು ಸಾಗಣೆ, ವಾಹನ ಮತ್ತು ಪ್ರಯಾಣಿಕರ ಸಂಚಾರವನ್ನು ಸುಲಭ ಹಾಗೂ ಡಿಜಿಟಲೀಕರಣಗೊಳಿಸುವುದು.
ಪ್ರಧಾನಿ ನರೇಂದ್ರ ಮೋದಿಯವರ 'ಸ್ಮಾರ್ಟ್ ಬಾರ್ಡರ್ಸ್' (Smart Borders) ಮತ್ತು 'ವಿಕಸಿತ್ ಭಾರತ 2047' ದೃಷ್ಟಿಕೋನಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ.)
-----------------------------------------------------------------------------------------------------------------------------
09 June
1) ಮೊದಲ 'ವಿಶ್ವ ಯೋಗಾಸನ ಚಾಂಪಿಯನ್‌ಷಿಪ್ 2026' ಎಲ್ಲಿ ನಡೆಯಿತು?
ಉತ್ತರ: ಗುಜರಾತ್‌ನ ಅಹಮದಾಬಾದ್ (ಟ್ರಾನ್ಸ್‌ಸ್ಟೇಡಿಯಾ).(2026ರ ಜೂನ್ 4 ರಿಂದ 8 ರವರೆಗೆ. ಈ ಕ್ರೀಡಾ ಕೂಟದಲ್ಲಿ 79 ದೇಶಗಳು ಭಾಗವಹಿಸಿದ್ದವು. ಭಾರತ ತಂಡವು ಒಟ್ಟು 114 ಪದಕ (102 ಚಿನ್ನದ ಪದಕಗಳು ಸೇರಿದಂತೆ)ಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ)
2) ಇತ್ತೀಚೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಚಾಲನೆ ನೀಡಿದ 'ಭವ್ಯ' ಪೋರ್ಟಲ್‌ನ ಪೂರ್ಣ ಹೆಸರು ಏನು?
ಉತ್ತರ: ಭವ್ಯ - ಭಾರತ್ ಔದ್ಯೋಗಿಕ್ ವಿಕಾಸ್ ಯೋಜನೆ (BHAVYA - Bharat Audyogik Vikas Yojana).
(ಉದ್ದೇಶ: ದೇಶಾದ್ಯಂತ ಹೂಡಿಕೆಗೆ ಸಿದ್ಧವಿರುವ 100 ಸಂಯೋಜಿತ ಕೈಗಾರಿಕಾ ಪಾರ್ಕ್‌ಗಳನ್ನು (Industrial Parks) ತ್ವರಿತವಾಗಿ ಅಭಿವೃದ್ಧಿಪಡಿಸುವುದು.)
3) ಇತ್ತೀಚಿನ ವರದಿಯಂತೆ ದೇಶಾದ್ಯಂತ ಒಟ್ಟು ಎಷ್ಟು 'ಜನ ಧನ್' (PMJDY) ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ?
ಉತ್ತರ: 58.15 ಕೋಟಿ. (ಒಟ್ಟು ಜನ ಧನ್ ಖಾತೆಗಳಲ್ಲಿ ಶೇಕಡಾ 56 ರಷ್ಟು ಮಹಿಳೆಯರ ಹೆಸರಿನಲ್ಲಿವೆ)
4) ಇತ್ತೀಚಿನ 'ಮಾದರಿ ನೋಂದಣಿ ಸಮೀಕ್ಷೆ' (SRS 2024) ವರದಿ ಪ್ರಕಾರ ದೇಶದಲ್ಲೇ ಅತ್ಯಂತ ಹೆಚ್ಚು 'ಏಕಾಂಗಿ' ಮಹಿಳೆಯರಿರುವ (ವಿಚ್ಛೇದಿತರು/ವಿಧವೆಯರು) ಮೊದಲ ಮೂರು ರಾಜ್ಯಗಳು ಯಾವುವು?
ಉತ್ತರ: ತಮಿಳುನಾಡು (11.6%), ಕೇರಳ (10.4%) ಮತ್ತು ಕರ್ನಾಟಕ (8.6%).
5) ಇತ್ತೀಚೆಗೆ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಟ್ರೋಫಿ ಗೆದ್ದು, ತನ್ನ ಚೊಚ್ಚಲ ಗ್ರಾಂಡ್ ಸ್ಲ್ಯಾಮ್ ಕಿರೀಟ ಮುಡಿಗೇರಿಸಿಕೊಂಡ ಟೆನ್ನಿಸ್ ಆಟಗಾರ ಯಾರು?
ಉತ್ತರ: ಅಲೆಕ್ಸಾಂಡರ್ ಜ್ವೆರೆವ್ (ಜರ್ಮನಿ).
-----------------------------------------------------------------------------------------------------------------------------
08 June
1) ವಿಶ್ವ ಸಾಗರ ದಿನ (World Oceans Day)ವನ್ನು ಪ್ರತಿ ವರ್ಷ ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಜೂನ್ 8. (Theme : "Reimagine")
2) ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು ಮುರಿದು, ಅತ್ಯಂತ ಕಿರಿಯ ವಯಸ್ಸಿಗೆ (15 ವರ್ಷ) ಭಾರತ ಟಿ20 (T20) ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬಿಹಾರದ ಎಡಗೈ ಬ್ಯಾಟರ್ ಯಾರು?
ಉತ್ತರ: ವೈಭವ್ ಸೂರ್ಯವಂಶಿ (Vaibhav Suryavanshi).
3) ಭಾರತದ 100ನೇ ರಾಮ್ಸರ್ ತಾಣವಾಗಿ (Ramsar Site) ಇತ್ತೀಚೆಗೆ ಘೋಷಣೆಯಾದ ಸ್ಥಳ ಯಾವುದು?
ಉತ್ತರ: ಜಯಪ್ರಕಾಶ್ ನಾರಾಯಣ್ ಪಕ್ಷಿಧಾಮ (ಸುಹಾರ್ ತಾಲ್ / Surha Tal).ಉತ್ತರ ಪ್ರದೇಶ (ಬಲ್ಲಿಯಾ ಜಿಲ್ಲೆ).
4) U-18 ಏಷ್ಯಾ ಕಪ್ ಹಾಕಿ ಟೂರ್ನಿ 2026ರ ಚಾಂಪಿಯನ್ ಪಟ್ಟ ಗೆದ್ದ ದೇಶ ಯಾವುದು?
ಉತ್ತರ: ಭಾರತ. ( ಈ ಟೂರ್ನಿ ಜಪಾನ್‌ನ ಕಾಕಾಮಿಗಹರಾ (Kakamigahara). ಎಂಬಲ್ಲಿ ನಡೆದಿದೆ)
5) 2026ರ ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಟೆನ್ನಿಸ್ ಪ್ರಶಸ್ತಿಯನ್ನು ಗೆದ್ದವರು ಯಾರು?
ಉತ್ತರ: ಮಿರಾ ಆಂಡ್ರೀವಾ (ರಷ್ಯಾ).
6) ಫ್ರೆಂಚ್ ಓಪನ್ 2026ರ ಮಹಿಳಾ ಡಬಲ್ಸ್ ಚಾಂಪಿಯನ್ಸ್ ಯಾರು?
ಉತ್ತರ: ಕ್ಯಾಟರಿನಾ ಸಿನಿಯಕೋವಾ (ಚೆಕ್ ರಿಪಬ್ಲಿಕ್) ಮತ್ತು ಟೇಲರ್ ಟೌನ್‌ಸೆಂಡ್ (ಅಮೆರಿಕ).

No comments:
Post a Comment