ರಾಜ್ಯ ಸುದ್ದಿಗಳು :
ಕರ್ನಾಟಕದಲ್ಲಿ ಉಚಿತ ವಿದ್ಯಾರ್ಥಿ ಬಸ್ ಪಾಸ್ ಯೋಜನೆಗೆ ಭಾರಿ ಸ್ಪಂದನೆ
ಕರ್ನಾಟಕ ಸರ್ಕಾರವು ಗಡಿ ರಾಜ್ಯಗಳ ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿಸ್ತರಿಸಿದ ಬೆನ್ನಲ್ಲೇ, ಕೇವಲ ಎರಡು ದಿನಗಳಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ (KSRTC, BMTC, NWKRTC, KKRTC) 2,700ಕ್ಕೂ ಹೆಚ್ಚು ಉಚಿತ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಅತ್ಯಧಿಕ ಪಾಸ್‌ಗಳನ್ನು ವಿತರಿಸಿ ಮೊದಲ ಸ್ಥಾನದಲ್ಲಿದೆ.
"ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್ ನೀಡಲಾಗುತ್ತದೆ; ಹೊರರಾಜ್ಯದವರಿಗೆ ಈ ಸೌಲಭ್ಯ ಇರುವುದಿಲ್ಲ."
------------------------------
ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ, ಕೇರಳ ಗಡಿಭಾಗದಲ್ಲಿ ಹರಡುತ್ತಿರುವ ಶಿ ಗೆಲ್ಲೋಸಿಸ್ ಬ್ಯಾಕ್ಟೀರಿಯಾ ಸೋಂಕು:
"ಶಿಗೆಲ್ಲಾ ಒಂದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕು (Shigellosis), ಇದು ಮಾನವನ ಜೀರ್ಣಾಂಗ ವ್ಯೂಹ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ ".
ನೆರೆಯ ಕೇರಳ ರಾಜ್ಯದ ಕೋಝಿಕ್ಕೋಡ್ ಮತ್ತು ವಯನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೀವ್ರವಾಗಿ ಹರಡುತ್ತಾ ಮಕ್ಕಳ ಜೀವಕ್ಕೆ ಸಂಚಕಾರ ತಂದೊಡ್ಡಿರುವ ಅತ್ಯಂತ ಸಾಂಕ್ರಾಮಿಕ 'ಶಿ ಗೆಲ್ಲೋಸಿಸ್' (Shigellosis) ಬ್ಯಾಕ್ಟೀರಿಯಾ ಸೋಂಕಿನ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲಿ ತೀವ್ರ ನಿಗಾ ಹಾಗೂ ಬಿಗಿ ತಪಾಸಣೆಯ ಕಟ್ಟೆಚ್ಚರ ವಹಿಸಿದೆ.
------------------------------------------------------------------------------------------------------
ರಾಷ್ಟ್ರೀಯ ಸುದ್ದಿಗಳು :
ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ಅವರಿಗೆ ಹೃದಯಾಘಾತ
ಭಾರತದ ಖ್ಯಾತ ಶೂಟಿಂಗ್ ತರಬೇತುದಾರ ಹಾಗೂ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ದಂತಕಥೆ ಜಸ್ಪಾಲ್ ರಾಣಾ ಅವರು ಜರ್ಮನಿಯ ಮ್ಯೂನಿಚ್ ವಿಶ್ವಕಪ್‌ನಿಂದ ಮರಳುವಾಗ ಉಂಟಾದ ತೀವ್ರ ಹೃದಯಾಘಾತದಿಂದಾಗಿ ನವದೆಹಲಿಯ ಆಸ್ಪತ್ರೆಯಲ್ಲಿ ತಮ್ಮ 49ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.
----------------------------------
ಭಾರತದ ಸ್ವದೇಶಿ ಕವಚ ಡಿಆರ್‌ಡಿಒದಿಂದ 'ಐರನ್ ಡೋಮ್' ಮಾದರಿಯ ಯಶಸ್ವಿ ಕ್ಷಿಪಣಿ ಪರೀಕ್ಷೆ
AD-1 / AD-2: ಶತ್ರುಗಳು ಉಡಾಯಿಸುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವಾತಾವರಣದ ಆಕಾಶದಲ್ಲೆ ತಡೆದು ನಾಶಪಡಿಸುವ ಭಾರತದ ಕ್ಷಿಪಣಿ ಪ್ರತಿರಕ್ಷಣಾ (Ballistic Missile Defence - BMD) ವ್ಯವಸ್ಥೆಯ ಪ್ರತಿಬಂಧಕ (Interceptor) ಕ್ಷಿಪಣಿಗಳು.
ಭಾರತದ ರಕ್ಷಣಾ ಸಂಶೋಧನಾ ಸಂಸ್ಥೆ (DRDO), ಒಡಿಶಾದ ಚಾಂಡಿಪುರದಲ್ಲಿ ಶತ್ರುಗಳ ದೀರ್ಘ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಬಹುಸ್ತರದ ರಕ್ಷಣಾ ವ್ಯವಸ್ಥೆಯ ಸತತ 3 ಪರೀಕ್ಷೆಗಳನ್ನು ಮತ್ತು ನೌಕಾದಳದ ಹೊಸ ಆಂಟಿ-ಶಿಪ್ ಕ್ಷಿಪಣಿ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ದೇಶದ ಗಡಿಗಳನ್ನು ಶತ್ರುಗಳ ಕ್ಷಿಪಣಿ ದಾಳಿಯಿಂದ ಸಂಪೂರ್ಣವಾಗಿ ರಕ್ಷಿಸಲು ಭಾರತವು ತನ್ನದೇ ಆದ 'ಐರನ್ ಡೋಮ್' ಮಾದರಿಯ ಭದ್ರತಾ ಕವಚವನ್ನು ಅಭಿವೃದ್ಧಿಪಡಿಸುವಲ್ಲಿ ದೈತ್ಯ ಹೆಜ್ಜೆ ಇಟ್ಟಿದೆ. ಒಡಿಶಾದ ಚಾಂಡಿಪುರ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ITR) ಡಿಆರ್‌ಡಿಒ ಮತ್ತು ಭಾರತೀಯ ಸೇನೆ ಜಂಟಿಯಾಗಿ ನಡೆಸಿದ 24 ಗಂಟೆಗಳ ಕಾರ್ಯಾಚರಣೆಯಲ್ಲಿ ಅತ್ಯಾಧುನಿಕ ರಕ್ಷಣಾ ತಂತ್ರಜ್ಞಾನಗಳು ಸಾಬೀತಾಗಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಜ್ಞಾನಿಗಳ ಈ ಮಹೋನ್ನತ ಸಾಧನೆಯನ್ನು ಹೋಗಳಿದರು, ಭಾರತ ಈಗ ಜಾಗತಿಕ ಮಟ್ಟದ ಅತ್ಯಂತ ಪ್ರಬಲ ರಾಷ್ಟ್ರಗಳ ಸಾಲಿಗೆ ಸೇರಿದೆ ಎಂದು ಘೋಷಿಸಿದ್ದಾರೆ.
ಈ ಪರೀಕ್ಷೆಯಲ್ಲಿ ಪ್ರಮುಖವಾಗಿ 2,000 ಕಿಲೋಮೀಟರ್‌ನಿಂದ 5,000 ಕಿಲೋಮೀಟರ್ ದೂರದ ಮಧ್ಯಂತರ ವ್ಯಾಪ್ತಿಯ (IRBM) ಹಾಗೂ ಖಂಡಾಂತರ (ICBM) ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವಾತಾವರಣದ ಒಳಗೆ (Endo) ಮತ್ತು ಬಾಹ್ಯಾಕಾಶದ ಅಂಚಿನಲ್ಲಿ (Exo) ಪತ್ತೆಹಚ್ಚಿ, ಹೊಡೆದುರುಳಿಸುವ ಇಂಟರ್‌ಸೆಪ್ಟರ್ ಕ್ಷಿಪಣಿಗಳು ನಿಖರವಾಗಿ ಗುರಿ ತಲುಪಿವೆ. ಇದರೊಂದಿಗೆ ಭೂಮಿ ಹಾಗೂ ಸಮುದ್ರದ ಮೇಲಿನ ಶತ್ರು ಯುದ್ಧನೌಕೆಗಳನ್ನು ಅತ್ಯಂತ ನಿಖರವಾಗಿ, ಸಮುದ್ರದ ಮಟ್ಟಕ್ಕೆ ಹತ್ತಿರವಾಗಿ ಹಾರುತ್ತಾ (Sea-skimming) ಧ್ವಂಸಗೊಳಿಸಬಲ್ಲ ಮಧ್ಯಮ ಶ್ರೇಣಿಯ 'ನೌಕಾ ಆಂಟಿ-ಶಿಪ್ ಕ್ಷಿಪಣಿ' (NASM-MR : Naval Anti-Ship Missile - Medium Range) ಮೊದಲ ಬಾರಿಗೆ ಯಶಸ್ವಿ ಉಡಾವಣೆ ಕಂಡಿದೆ. ಈ ಮಲ್ಟಿ-ಲೇಯರ್ ರಕ್ಷಣಾ ವ್ಯವಸ್ಥೆಯು ಭಾರತದ ವ್ಯೂಹಾತ್ಮಕ ಸಾರ್ವಭೌಮತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
----------------------------------
ಜಾಗತಿಕ ನಾಗರಿಕ ವಿಮಾನಯಾನದ ಮೂರನೇ ಅತಿ ದೊಡ್ಡ ದೇಶೀಯ ಮಾರುಕಟ್ಟೆಯಾಗಿ ಭಾರತವು ಹೋರಹೋಮ್ಮಿದೆ :
ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ದೇಶಗಳನ್ನು ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಅಮೆರಿಕ ಹಾಗೂ ಚೀನಾದ ನಂತರ ವಿಶ್ವದ 3ನೇ ಅತಿ ದೊಡ್ಡ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿ ಭಾರತವು ಹೊರಹೊಮ್ಮಿದ್ದು, ಈ ಐತಿಹಾಸಿಕ ಮೈಲಿಗಲ್ಲನ್ನು ರಾಜ್ಯಸಭೆಯಲ್ಲಿ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ್ ಮೋಹೋಲ್ ಅವರು ಅಧಿಕೃತವಾಗಿ ಶ್ಲಾಘಿಸಿದ್ದಾರೆ.
ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಅಭೂತಪೂರ್ವ ಮತ್ತು ಅತ್ಯಂತ ವೇಗದ ಬೆಳವಣಿಗೆಯನ್ನು ಸಾಧಿಸುವ ಮೂಲಕ ಹೊಸ ಇತಿಹಾಸ ಬರೆದಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಪ್ರಮುಖ ವಾಯುಯಾನ ಮಾರುಕಟ್ಟೆಗಳಾಗಿದ್ದ ಬ್ರೆಜಿಲ್ ಮತ್ತು ಇಂಡೋನೇಷ್ಯಾ ದೇಶಗಳನ್ನು ಬದಿಗೆ ಸರಿಸಿರುವ ಭಾರತ, ಈಗ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ದೇಶೀಯ ನಾಗರಿಕ ವಿಮಾನಯಾನ ಮಾರುಕಟ್ಟೆಯಾಗಿ ಹೆಮ್ಮೆಯಿಂದ ನಿಂತಿದೆ. ಪ್ರಸ್ತುತ ಈ ಪಟ್ಟಿಯಲ್ಲಿ ಅಮೆರಿಕ ಮತ್ತು ಚೀನಾ ದೇಶಗಳು ಮೊದಲ ಎರಡು ಸ್ಥಾನಗಳಲ್ಲಿದ್ದು, ಭಾರತವು ಅವುಗಳ ನಂತರದ ಅತ್ಯುನ್ನತ ಸ್ಥಾನವನ್ನು ಮುಟ್ಟಿದೆ.
------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು :
ವಿಶ್ವ ರಕ್ತದಾನಿಗಳ ದಿನ (World Blood Donor Day) - ಜೂನ್ 14 :
ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ರಕ್ತದಾನದ ಮಹತ್ವವನ್ನು ಮತ್ತು ಸುರಕ್ಷಿತ ರಕ್ತದ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.
2026ರ ಘೋಷವಾಕ್ಯ (Theme): “ಮಾನವೀಯತೆಯ ಒಂದು ಹನಿ. ರಕ್ತ ನೀಡಿ. ಜೀವಗಳನ್ನು ಉಳಿಸಿ.” ("A drop of humanity. Give blood. Save lives.")
------------------------------------
ಸುದರ್ಶನ್ ಪಟ್ನಾಯಕ್ ಮುಡಿಗೆ ರಷ್ಯಾದ ಗ್ರಾಂಡ್ ಸ್ಯಾಂಡ್ ಮಾಸ್ಟರ್ ಕಪ್ ಮುಕುಟ
ರಷ್ಯಾದ ಕಲಿನಿನ್‌ಗ್ರಾಡ್‌ನಲ್ಲಿ ನಡೆದ 2ನೇ ಅಂತರರಾಷ್ಟ್ರೀಯ ಮರಳು ಶಿಲ್ಪಕಲಾ ಉತ್ಸವದಲ್ಲಿ, ಭಾರತದ ಖ್ಯಾತ ಮರಳು ಶಿಲ್ಪಿ ಪದ್ಮಶ್ರೀ ಸುದರ್ಶನ್ ಪಟ್ನಾಯಕ್ ಅವರು ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಯ ಜ್ವಲಂತ ಸಮಸ್ಯೆಯನ್ನು ಬಿಂಬಿಸುವ 3 ಮೀಟರ್ ಎತ್ತರದ ಆಕರ್ಷಕ ಕಲಾಕೃತಿಯನ್ನು ಜೂನ್ 2026ರಲ್ಲಿ ರಚಿಸುವ ಮೂಲಕ, ಈ ಪ್ರತಿಷ್ಠಿತ 'ರಷ್ಯಾ ಗ್ರಾಂಡ್ ಸ್ಯಾಂಡ್ ಮಾಸ್ಟರ್ ಕಪ್ 2026' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಮೊದಲ ಭಾರತೀಯ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
------------------------------------------
ಜಿ-7 ಶೃಂಗಸಭೆಯ ಹಿನ್ನೆಲೆ ಪ್ರಧಾನಿ ಮೋದಿ ಯುರೋಪ್ ಪ್ರವಾಸ
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಯುರೋಪ್ ಪ್ರವಾಸವು ಫ್ರಾನ್ಸ್‌ನ ನೈಸ್ ನಗರದಿಂದ ಆರಂಭವಾಗಿದೆ. ಭಾರತ–ಫ್ರಾನ್ಸ್ ದ್ವಿಪಕ್ಷೀಯ ಸಂಬಂಧ, ತಂತ್ರಜ್ಞಾನ ಹಾಗೂ ನವೋದ್ಯಮ ಸಹಕಾರಕ್ಕೆ ಈ ಪ್ರವಾಸದಲ್ಲಿ ಆದ್ಯತೆ ನೀಡಲಾಗಿದೆ. ಬಳಿಕ ಫ್ರಾನ್ಸ್‌ನ ಎವಿಯನ್-ಲೆ-ಬೈನ್ಸ್ ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
------------------------------------------------------------------------------------------------------

No comments:
Post a Comment