Breaking

Search

Sunday, 2 August 2026

27 & 28 Current Affairs ಪ್ರಚಲಿತ ವಿದ್ಯಮಾನಗಳು

 


ರಾಜ್ಯ ಸುದ್ದಿಗಳು :




------------------------------





________________________________________________________________________________


ರಾಷ್ಟ್ರೀಯ ಸುದ್ದಿಗಳು :


ಜುಲೈ 26 : ಕಾರ್ಗಿಲ್ ವಿಜಯೋತ್ಸವ

27ನೇ ಕಾರ್ಗಿಲ್ ವಿಜಯೋತ್ಸವ: ಶೌರ್ಯದ ಸ್ಮರಣೆ ಹಾಗೂ ರಕ್ಷಣಾ ಸುಧಾರಣೆಗಳ ಸಮಗ್ರ ನೋಟ

1999ರಲ್ಲಿ ಶ್ರೀನಗರ-ಲೇಹ್ ಸಂಪರ್ಕವನ್ನು ತಡೆಯಲು ಯತ್ನಿಸಿದ ಪಾಕ್ ನುಸುಳುಕೋರರ ವಿರುದ್ಧ ಭಾರತೀಯ ಭೂಸೇನೆಯ ‘ಆಪರೇಷನ್ ವಿಜಯ್’ ಮತ್ತು ವಾಯುಪಡೆಯ ‘ಆಪರೇಷನ್ ಸಫೇದ್ ಸಾಗರ್’ ಜಂಟಿ ಕಾರ್ಯಾಚರಣೆಗಳ ಮೂಲಕ ತೋಲೋಲಿಂಗ್ ಹಾಗೂ ಟೈಗರ್ ಹಿಲ್ ಸೇರಿ ಪ್ರಮುಖ ಶಿಖರಗಳನ್ನು ಮರುವಶಪಡಿಸಿಕೊಂಡು ಸಾಧಿಸಿದ 27ನೇ ವರ್ಷದ ಕಾರ್ಗಿಲ್ ವಿಜಯದ ನೆನಪಿಗಾಗಿ ಜುಲೈ 26ರಂದು ಈ ದಿನವನ್ನು ಗೌರವಿಸಲಾಗುತ್ತಿದ್ದು, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಸೇರಿದಂತೆ ಪರಮವೀರ ಚಕ್ರ ಪುರಸ್ಕೃತ ರಣಧೀರರ ಅಪ್ರತಿಮ ತ್ಯಾಗವನ್ನು ಸ್ಮರಿಸುವುದರ ಜೊತೆಗೆ, ಕಾರ್ಗಿಲ್ ವಿಮರ್ಶಾ ಸಮಿತಿಯ ಶಿಫಾರಸಿನಂತೆ ಸಿಡಿಎಸ್ (CDS) ಹುದ್ದೆ, NTRO, DIA ಸಂಸ್ಥೆಗಳು ಹಾಗೂ ಆಧುನಿಕ ಸಮರ ತಂತ್ರಜ್ಞಾನಗಳ ಅಳವಡಿಕೆಯೊಂದಿಗೆ ದೇಶದ ರಕ್ಷಣಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ತರಲಾಯಿತು.



----------------------------------


ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್ 2026: ಮೀರಾಬಾಯಿ ಚಾನು ಐತಿಹಾಸಿಕ ಸಾಧನೆ

ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮಣಿಪುರದ 31 ವರ್ಷದ ಮೀರಾಬಾಯಿ ಚಾನು ಅವರು ಸ್ನ್ಯಾಚ್‌ನಲ್ಲಿ 85 ಕೆಜಿ ಹಾಗೂ ಕ್ಲೀನ್ ಅಂಡ್ ಜರ್ಕ್‌ನಲ್ಲಿ 105 ಕೆಜಿ ಸೇರಿ ಒಟ್ಟು 190 ಕೆಜಿ ತೂಕ ಎತ್ತುವ ಮೂಲಕ ಗೇಮ್ಸ್ ದಾಖಲೆಯೊಂದಿಗೆ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟಿದ್ದಲ್ಲದೆ, ಸತತ 3ನೇ ಬಾರಿ (ಹ್ಯಾಟ್ರಿಕ್) ಸ್ವರ್ಣ ಗೆದ್ದು ಒಟ್ಟಾರೆಯಾಗಿ ತಮ್ಮ 4ನೇ ಸಿಡಬ್ಲ್ಯೂಜಿ ಪದಕದೊಂದಿಗೆ ನೂತನ ಇತಿಹಾಸ ಬರೆದಿದ್ದಾರೆ.

(ರಜತ ಪದಕ ಗೆದ್ದ ನೈಜೀರಿಯಾದ ರಫ್ ಅಸುಕ್ವೋ ನಯಾಂಗ್ (168 ಕೆಜಿ) ಅವರಿಗಿಂತ 22 ಕೆಜಿ ಹೆಚ್ಚಿನ ತೂಕ ಎತ್ತಿ ಭರ್ಜರಿ ಜಯ ದಾಖಲಿಸಿದರು.)


ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೀರಾಬಾಯಿ ಚಾನು ಅವರ ಸಾಧನೆ (ಹ್ಯಾಟ್ರಿಕ್ ಚಿನ್ನ):

ಮೀರಾಬಾಯಿ ಚಾನು ಅವರು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸತತ ಮೂರನೇ ಬಾರಿ ಚಿನ್ನದ ಪದಕ ಗೆದ್ದು 'ಹ್ಯಾಟ್ರಿಕ್ ಸ್ವರ್ಣ' ಸಾಧನೆ ಮಾಡಿದ್ದಾರೆ. ಇದು ಕಾಮನ್‌ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಅವರ ಒಟ್ಟಾರೆ 4ನೇ ಪದಕವಾಗಿದೆ:

2014 (ಗ್ಲ್ಯಾಸ್ಗೋ): ಬೆಳ್ಳಿ ಪದಕ

2018 (ಗೋಲ್ಡ್ ಕೋಸ್ಟ್): ಚಿನ್ನದ ಪದಕ

2022 (ಬರ್ಮಿಂಗ್‌ಹ್ಯಾಮ್): ಚಿನ್ನದ ಪದಕ

2026 (ಗ್ಲ್ಯಾಸ್ಗೋ): ಚಿನ್ನದ ಪದಕ


-----------------------------------


ಭಾರತಕ್ಕೆ 45ನೇ ವಿಶ್ವ ಪಾರಂಪರಿಕ ತಾಣವಾಗಿ ಸಾರನಾಥ್ ಸೇರ್ಪಡೆ :

ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ನಡೆದ ಯುನೆಸ್ಕೋ ವಿಶ್ವ ಪಾರಂಪರಿಕ ಸಮಿತಿಯ 48ನೇ ಅಧಿವೇಶನದಲ್ಲಿ, ಗೌತಮ ಬುದ್ಧನು ಬೋಧಗಯೆಯಲ್ಲಿ ಜ್ಞಾನೋದಯ ಪಡೆದ ನಂತರ ತನ್ನ ಐವರು ಶಿಷ್ಯರಿಗೆ ಪ್ರಥಮ ಧರ್ಮೋಪದೇಶ ನೀಡಿದ (ಧಮ್ಮಚಕ್ಕಪ್ಪವತ್ತನ ಕೃತ್ಯ) ಹಾಗೂ ಚತುರಾರ್ಯ ಸತ್ಯಗಳು ಮತ್ತು ಅಷ್ಟಾಂಗ ಮಾರ್ಗಗಳನ್ನು ಬೋಧಿಸಿದ ಉತ್ತರ ಪ್ರದೇಶದ ವಾರಣಾಸಿ ಸಮೀಪದ ಐತಿಹಾಸಿಕ ಬೌದ್ಧ ಧಾರ್ಮಿಕ ಕ್ಷೇತ್ರವಾದ ಸಾರನಾಥ್ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಇದರೊಂದಿಗೆ ಭಾರತದಲ್ಲಿನ ಯುನೆಸ್ಕೋ ತಾಣಗಳ ಒಟ್ಟು ಸಂಖ್ಯೆ 45ಕ್ಕೆ ಏರಿಕೆಯಾಗಿ, ದೇಶದ ಸಾಂಸ್ಕೃತಿಕ ಪರಂಪರೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಗೌರವ ಪಾತ್ರವಾಗಿದೆ.


---------------------------------------


ಆರ್‌ಬಿಐನಿಂದ ಹೊಸ  ₹10 ಮತ್ತು ₹20 ಮುಖಬೆಲೆಯ ಸುಧಾರಿತ ಪಾಲಿಮರ್ ನೋಟುಗಳ ಪ್ರಾಯೋಗಿಕ ಬಳಕೆ

ಕಾಗದದ ನೋಟುಗಳಿಗಿಂತ ಮೂರರಿಂದ ಐದು ಪಟ್ಟು ಹೆಚ್ಚು ಬಾಳಿಕೆ ಬರುವ, ನೀರು ಹಾಗೂ ಕೊಳಕು ನಿರೋಧಕ ಶಕ್ತಿ ಹೊಂದಿರುವ ಮತ್ತು ನಕಲಿ ನೋಟುಗಳ ಹಾವಳಿ ತಡೆಯಲು ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡ ₹10 ಹಾಗೂ ₹20 ಮೌಲ್ಯದ ತಲಾ 100 ಕೋಟಿ ಪಾಲಿಮರ್ (ಪ್ಲಾಸ್ಟಿಕ್) ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಲ್ಲಿಸಿದ್ದ ಪ್ರಸ್ತಾಪಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದ್ದು, ಪ್ರಸ್ತುತ ಚಲಾವಣೆಯಲ್ಲಿರುವ ಕಾಗದದ ನೋಟುಗಳನ್ನು ಹಿಂಪಡೆಯದೆ ಇವೆರಡನ್ನೂ ಒಟ್ಟಿಗೆ ಚಲಾವಣೆಯಲ್ಲಿಡಲು ನಿರ್ಧರಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ, 1934 ರ ಸೆಕ್ಷನ್ 25 ರ (Section 25 of RBI Act, 1934) ಅಡಿಯಲ್ಲಿ ಈ ಪ್ರಸ್ತಾಪನೆಯನ್ನು ಆರ್‌ಬಿಐ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು.

ಆಸ್ಟ್ರೇಲಿಯಾ 1988 ರಲ್ಲೇ ಸಂಪೂರ್ಣವಾಗಿ ಪಾಲಿಮರ್ ನೋಟುಗಳನ್ನು ಅಳವಡಿಸಿಕೊಂಡ ಮೊದಲ ದೇಶವಾಗಿದೆ.

ಯುಕೆ (UK), ಕೆನಡಾ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ ಪ್ರಪಂಚದ ಹಲವು ಪ್ರಮುಖ ರಾಷ್ಟ್ರಗಳು ಪ್ರಸ್ತುತ ಪಾಲಿಮರ್ ಬ್ಯಾಂಕ್‌ನೋಟುಗಳನ್ನು ಯಶಸ್ವಿಯಾಗಿ ಚಲಾವಣೆಯಲ್ಲಿ ಬಳಸುತ್ತಿವೆ.


---------------------------------


ISSF ವಿಶ್ವಕಪ್ 2026 ಭಾರತೀಯ ಶೂಟರ್‌ಗಳಾದ 'ಈಶಾ ಸಿಂಗ್‌'ಗೆ ಸ್ವರ್ಣ ಹಾಗೂ 'ಮನು ಭಾಕರ್‌'ಗೆ ಕಾಂಸ್ಯ ಪದಕದ 


ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ISSF ವಿಶ್ವಕಪ್ 2026ರ ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ, 21 ವರ್ಷದ ಭಾರತೀಯ ಶೂಟರ್ ಈಶಾ ಸಿಂಗ್ ಫೈನಲ್‌ನಲ್ಲಿ 40 ಹಿಟ್‌ಗಳನ್ನು ಗಳಿಸಿ ಚಿನ್ನದ ಪದಕ ಗೆಲ್ಲುವ ಮೂಲಕ ಡಿಸೆಂಬರ್‌ನಲ್ಲಿ ಇಟಲಿಯ ರೋಮ್‌ನಲ್ಲಿ ನಡೆಯಲಿರುವ 'ISSF ವಿಶ್ವಕಪ್ ಫೈನಲ್ 2026'ಗೆ ನೇರ ಅರ್ಹತೆ ಪಡೆದಿದ್ದರೆ, ಮತ್ತೋರ್ವ ಖ್ಯಾತ ಶೂಟರ್ ಮನು ಭಾಕರ್ ತೀವ್ರ ಪೈಪೋಟಿಯ ಶೂಟ್-ಆಫ್ ಸುತ್ತಿನಲ್ಲಿ 28 ಹಿಟ್‌ಗಳೊಂದಿಗೆ ಕಾಂಸ್ಯ ಪದಕವನ್ನು ತಮ್ಮದಾಗಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ.


ISSF ಕುರಿತು ಸಾಮಾನ್ಯ ಜ್ಞಾನ :

ವಿಸ್ತೃತ ರೂಪ : International Shooting Sport Federation (ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಷನ್)

ಸ್ಥಾಪನೆ: 17 ಜುಲೈ 1907

ಪ್ರಧಾನ ಕಚೇರಿ (Headquarters): ಮ್ಯೂನಿಕ್ (Munich), ಜರ್ಮನಿ

ಕಾರ್ಯ: ಜಾಗತಿಕ ಮಟ್ಟದಲ್ಲಿ ರೈಫಲ್, ಪಿಸ್ತೂಲ್ ಮತ್ತು ಶಾಟ್‌ಗನ್ ವಿಭಾಗಗಳ ಒಲಿಂಪಿಕ್ ಹಾಗೂ ಇತರೆ ಅಂತರರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಗಳ ನಿಯಮಗಳನ್ನು ರೂಪಿಸಿ, ಆಯೋಜಿಸಿ ಮತ್ತು ನಿರ್ವಹಿಸುವ ವಿಶ್ವದ ಪ್ರಮುಖ ಶೂಟಿಂಗ್ ಕ್ರೀಡಾ ಸಂಸ್ಥೆಯಾಗಿದೆ.


-------------------------------------


BS-VI ವಾಹನಗಳ PUCC ಮಾನ್ಯತೆ ಅವಧಿ ವಿಸ್ತರಣೆ: ಕೇಂದ್ರ ಸರ್ಕಾರದ ಹೊಸ ಕರಡು ಅಧಿಸೂಚನೆ

PUCC : Pollution Under Control Certificate 


ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (MoRTH) ಜಾರಿಗೆ ತರಲು ಉದ್ದೇಶಿಸಿರುವ 'PUCC 3.0' ಯೋಜನೆಯ ಕರಡು ಅಧಿಸೂಚನೆಯ ಪ್ರಕಾರ, ಅತ್ಯಾಧುನಿಕ ಹಾಗೂ ಕಡಿಮೆ ಮಾಲಿನ್ಯ ಉಂಟುಮಾಡುವ 6 ವರ್ಷದೊಳಗಿನ BS-VI ಖಾಸಗಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUCC) ಸಿಂಧುತ್ವವನ್ನು ಪ್ರಸ್ತುತ ಇರುವ 1 ವರ್ಷದಿಂದ 3 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದ್ದು, 6 ರಿಂದ 10 ವರ್ಷದ BS-VI ವಾಹನಗಳಿಗೆ 1 ವರ್ಷ, ವಾಣಿಜ್ಯ ವಾಹನಗಳಿಗೆ 2 ವರ್ಷ ಹಾಗೂ ಹೆಚ್ಚು ಮಾಲಿನ್ಯ ಹೊರಸೂಸುವ ಹಳೆಯ BS-I ರಿಂದ BS-IV ವಾಹನಗಳಿಗೆ ಪ್ರತಿ 3 ರಿಂದ 6 ತಿಂಗಳಿಗೊಮ್ಮೆ ಕಡ್ಡಾಯ ತಪಾಸಣೆಯನ್ನು ನಿಗದಿಪಡಿಸುವ ಮೂಲಕ ಸಾರ್ವಜನಿಕರ ಮೇಲಿನ ಆರ್ಥಿಕ ಹಾಗೂ ಆಡಳಿತಾತ್ಮಕ ಹೊರೆಯನ್ನು ತಗ್ಗಿಸಲು ಮುಂದಾಗಿದೆ.


________________________________________________________________________________


ಅಂತಾರಾಷ್ಟ್ರೀಯ ಸುದ್ದಿಗಳು :


ಐಎನ್‌ಎಸ್ ಸುದರ್ಶಿನಿಯ ಮಹತ್ವದ ಜಾಗತಿಕ ಸಾಗರಯಾನ

ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ 'ಸೇಲ್ 250' ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯ ತರಬೇತಿ ಹಾಯಿದೋಣಿ 'ಐಎನ್‌ಎಸ್ ಸುದರ್ಶಿನಿ' (INS Sudarshini) ಯಶಸ್ವಿಯಾಗಿ ಪಾಲ್ಗೊಂಡು, ತನ್ನ 'ಲೋಕಾಯನ್ 26' ಸುದೀರ್ಘ ಸಾಗರಯಾನದ ಭಾಗವಾಗಿ ನಾರ್ಫೋಕ್, ನ್ಯೂಯಾರ್ಕ್ ಹಾಗೂ ಬಾಸ್ಟನ್ ಬಂದರುಗಳನ್ನು ಭೇಟಿ ಮಾಡಿ, ಭಾರತದ ಕಡಲ ಪರಂಪರೆ, ಸಾಹಸ ಸಾಮರ್ಥ್ಯ ಮತ್ತು ಸೌಹಾರ್ದತೆಯ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುತ್ತಾ ಇದೀಗ ಪೋರ್ಚುಗಲ್‌ನ ಪೋಂಟಾ ಡೆಲ್ಗಾಡಾ ಕಡೆಗೆ ಪ್ರಯಾಣ ಬೆಳೆಸಿದೆ.



------------------------------------


'ವಿಶ್ವ ನಿಸರ್ಗ ಸಂರಕ್ಷಣಾ ದಿನ' - ಜುಲೈ 28

ಪ್ರತಿ ವರ್ಷ ಜುಲೈ 28 ರಂದು ಆಚರಿಸಲಾಗುವ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಅಂಗವಾಗಿ, 2030 ರ '30×30' ಜಾಗತಿಕ ಜೀವವೈವಿಧ್ಯತೆಯ ಗುರಿಯ ಅರ್ಧದಾರಿಯ ಮೈಲಿಗಲ್ಲಾಗಿರುವ 2026 ನೇ ಸಾಲಿನಲ್ಲಿ, ನೀರು, ಗಾಳಿ, ಅರಣ್ಯದಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸುವುದು, ಅಳಿವಿನಂಚಿನಲ್ಲಿರುವ 48,000 ಕ್ಕೂ ಹೆಚ್ಚು ಪ್ರಭೇದಗಳನ್ನು ರಕ್ಷಿಸುವುದು, ಹಾಳಾಗಿರುವ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸುವುದು ಹಾಗೂ ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಚಕ್ರೀಯ ಅರ್ಥವ್ಯವಸ್ಥೆಯನ್ನು ಉತ್ತೇಜಿಸುವ ಮೂಲಕ ಭೂಮಿ ಮತ್ತು ಸಾಗರಗಳ ನೈಸರ್ಗಿಕ ಸಮತೋಲನ ಕಾಪಾಡುವ ಜಾಗತಿಕ ಜಾಗೃತಿ ಮೂಡಿಸಲಾಗುತ್ತಿದೆ.


------------------------------------


ಚೀನಾ ಕೃತಕ ಸೂರ್ಯನಿಗಾಗಿ ಜಗತ್ತಿನ ಅತಿದೊಡ್ಡ ಸೂಪರ್‌ಕಂಡಕ್ಟಿಂಗ್ ಮ್ಯಾಗ್ನೆಟ್ ಯಶಸ್ವಿ ಪರೀಕ್ಷೆ

ಚೀನಾದ 'ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಮಾ ಫಿಸಿಕ್ಸ್' (Chinese Academy of Sciences) ತನ್ನ ಕೃತಕ ಸೂರ್ಯ ಯೋಜನೆಯಲ್ಲಿ ಶೂನ್ಯ ವಿದ್ಯುತ್ ನಿರೋಧಕತೆಯ ತಂತ್ರಜ್ಞಾನವನ್ನು ಬಳಸಿ, 100 ಮಿಲಿಯನ್ °C ಗಿಂತಲೂ ಹೆಚ್ಚಿನ ಅತಿಯಾದ ತಾಪಮಾನದ ಪ್ಲಾಸ್ಮಾವನ್ನು ರಿಯಾಕ್ಟರ್ ಗೋಡೆಗಳಿಗೆ ಸ್ಪರ್ಶಿಸದಂತೆ ಸುರಕ್ಷಿತವಾಗಿ ನಿಯಂತ್ರಿಸಲು ಹಾಗೂ ಅನಂತ ಪರಿಶುದ್ಧ ವಿದ್ಯುತ್ ಉತ್ಪಾದಿಸುವ ನಿಟ್ಟಿನಲ್ಲಿ 582 ಟನ್ ತೂಕದ ಜಗತ್ತಿನ ಅತಿ ದೊಡ್ಡ D-ಆಕಾರದ 'ಟೋರಾಯ್ಡಲ್ ಫೀಲ್ಡ್ ಸೂಪರ್‌ಕಂಡಕ್ಟಿಂಗ್ ಮ್ಯಾಗ್ನೆಟ್' ಅನ್ನು ಸ್ವದೇಶಿ ತಂತ್ರಜ್ಞಾನದ ಮೂಲಕ ಯಶಸ್ವಿಯಾಗಿ ನಿರ್ಮಿಸಿ ಪರೀಕ್ಷಿಸಿದೆ.


________________________________________________________________________________

No comments:

Post a Comment