ರಾಜ್ಯ ಸುದ್ದಿಗಳು :
KIADB ಡಿಜಿಟಲೀಕರಣಕ್ಕೆ 100 ದಿನಗಳ ಗಡುವು
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB : Karnataka Industrial Areas Development Board ) ಯಲ್ಲಿ ಪಾರದರ್ಶಕತೆ ತರಲು ಮತ್ತು ಉದ್ಯಮಿಗಳಿಗೆ ಸುಲಭ ವಹಿವಾಟು ಕಲ್ಪಿಸಲು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಮಂಡಳಿಯ ಎಲ್ಲಾ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು 100 ದಿನಗಳ ಗಡುವನ್ನು ವಿಧಿಸಿದ್ದಾರೆ.
------------------------------
ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ 12ನೇ ಶತಮಾನದ ಹೊಸ ಅಪೂರ್ವ ದಾನ ಶಾಸನ ಪತ್ತೆ
ವಿಶ್ವಪ್ರಸಿದ್ಧ ಜೈನ ಕಾಶಿ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಕಾರ್ಯದ ವೇಳೆ, ಗಿಡ-ಗಂಟೆಗಳ ನಡುವೆ ಹನ್ನೆರಡನೇ ಶತಮಾನಕ್ಕೆ ಸೇರಿದ, 'ಕಬ್ಬಹಿನ ವೃತ್ತಿ'ಗೆ ನೀಡಲಾದ ದಾನದ ವಿವರಗಳನ್ನು ಒಳಗೊಂಡಿರುವ ಹಳಗನ್ನಡ ಲಿಪಿಯ ಮತ್ತೊಂದು ಅಪೂರ್ವ ಶಿಲಾ ಶಾಸನ ಪತ್ತೆಯಾಗಿದ್ದು, ಇದರೊಂದಿಗೆ ಈ ಕ್ಷೇತ್ರದಲ್ಲಿ ದಾಖಲಾದ ಒಟ್ಟು ಶಾಸನಗಳ ಸಂಖ್ಯೆ 574ಕ್ಕೆ ಏರಿಕೆಯಾಗಿ ದೇಶದಲ್ಲೇ ಅತ್ಯಧಿಕ ಶಿಲಾ ಶಾಸನಗಳಿರುವ ಐತಿಹಾಸಿಕ ಕ್ಷೇತ್ರ ಎಂಬ ಹೆಗ್ಗಳಿಕೆಯನ್ನು ಮತ್ತಷ್ಟು ಬಲಪಡಿಸಿದೆ.
----------------------------------------------------------------------------------------------------
ರಾಷ್ಟ್ರೀಯ ಸುದ್ದಿಗಳು :
ಭಾರತದ ರಕ್ಷಣಾ ನೀತಿಯಲ್ಲಿ ಮಹತ್ವದ ಬದಲಾವಣೆ
ಇತ್ತೀಚಿನ ವರದಿಯ ಪ್ರಕಾರ, ಜಾಗತಿಕ ಸಂಘರ್ಷಗಳ ನಡುವೆ ಭಾರತ ತನ್ನ ಪರಮಾಣು ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಿಕೊಂಡಿದ್ದು, ಒಟ್ಟು ಅಣ್ವಸ್ತ್ರ ಸಿಡಿತಲೆಗಳ (Warheads) ಸಂಖ್ಯೆಯನ್ನು 170 ರಿಂದ 190ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ವಿಶ್ವದಲ್ಲೇ ಆರನೇ ಅತಿ ದೊಡ್ಡ ಅಣ್ವಸ್ತ್ರ ಹೊಂದಿರುವ ದೇಶವಾಗಿ ಹೊರಹೊಮ್ಮಿದೆ. ತಂತ್ರಜ್ಞಾನ ಮತ್ತು ರಕ್ಷಣಾತ್ಮಕ ಸನ್ನದ್ಧತೆಯನ್ನು ಉನ್ನತೀಕರಿಸುತ್ತಿರುವ ಭಾರತ, ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ 12 ಅಣ್ವಸ್ತ್ರ ಸಿಡಿತಲೆಗಳನ್ನು ತಕ್ಷಣದ ಬಳಕೆಗೆ ಸೂಕ್ತವಾದ 'ಸನ್ನದ್ಧ ಸ್ಥಿತಿ'ಯಲ್ಲಿ (Deployed Status) ನಿಯೋಜಿಸಿದೆ. ಇದುವರೆಗೂ ತನ್ನ ಪರಮಾಣು ಸಿಡಿತಲೆಗಳನ್ನು ಮತ್ತು ಅವುಗಳನ್ನು ಉಡಾಯಿಸುವ ಕ್ಷಿಪಣಿ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಇಡುತ್ತಿದ್ದ ಭಾರತದ ಹಳೆಯ ರಕ್ಷಣಾ ನೀತಿಯಲ್ಲಿ ಇದೊಂದು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ಬದಲಾವಣೆಯಾಗಿದೆ.
----------------------------------
ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ನವ ದಾಖಲೆ: ನೆಹರೂ ಹಿಂದಿಕ್ಕಿದ ಪ್ರಧಾನಿ ಮೋದಿ
“2014ರ ಮೇ 26ರಂದು ಪ್ರಧಾನ ಸೇವಕನಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರು, 2026ರ ಜೂನ್ 10ರ ವೇಳೆಗೆ ಸತತ 4,399 ದಿನಗಳ ಕಾಲ ಜನರಿಂದ ಚುನಾಯಿತರಾದ ಪ್ರಧಾನಿಯಾಗಿ ನಿರಂತರ ಸೇವೆ ಸಲ್ಲಿಸುವ ಮೂಲಕ ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಸುದೀರ್ಘ ಅವಧಿಯ ‘ಚುನಾಯಿತ’ ಪ್ರಧಾನಿ ಎಂಬ ಅಭೂತಪೂರ್ವ ಮೈಲಿಗಲ್ಲು ಸ್ಥಾಪಿಸಿದ್ದಾರೆ.”
ಐತಿಹಾಸಿಕ ದಾಖಲೆ: ಈ ಸಾಧನೆಯ ಮೂಲಕ ಅವರು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರಲ್ಲಿದ್ದ 4,398 ದಿನಗಳ ನಿರಂತರ ಆಡಳಿತದ ದಶಕಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. (ನೆಹರೂ ಅವರ ಒಟ್ಟು ಅಧಿಕಾರಾವಧಿ ಹೆಚ್ಚಿದ್ದರೂ, 1952ರ ಮೊದಲ ಸಾರ್ವತ್ರಿಕ ಚುನಾವಣೆ ನಂತರದ ‘ಚುನಾಯಿತ’ ನಿರಂತರ ಅವಧಿಯ ಲೆಕ್ಕಾಚಾರದಲ್ಲಿ ಈ ಬದಲಾವಣೆ ದಾಖಲಾಗಿದೆ).
ಬದಲಾದ ರಾಜಕೀಯ ಪರಿಸರ: ಏಕಪಕ್ಷದ ಪ್ರಾಬಲ್ಯವಿದ್ದ ಕಾಲದಲ್ಲಿ ನೆಹರೂ ಅವರು ಆಡಳಿತ ನಡೆಸಿದ್ದರೆ, ಪ್ರಧಾನಿ ಮೋದಿಯವರು ಪ್ರಾದೇಶಿಕ ಪಕ್ಷಗಳ ಪೈಪೋಟಿ ಮತ್ತು ಸಮ್ಮಿಶ್ರ ಸರ್ಕಾರದ ಇಂದಿನ ಕಠಿಣ ಸವಾಲುಗಳ ಯುಗದಲ್ಲಿ ಸತತವಾಗಿ 2014, 2019 ಮತ್ತು 2024ರ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಜನಾಶೀರ್ವಾದ ಪಡೆದು ಈ ಐತಿಹಾಸಿಕ ಮೈಲಿಗಲ್ಲು ತಲುಪಿದ್ದಾರೆ.
ಅಭಿವೃದ್ಧಿಯ ಪಥ: ಕಳೆದ 12 ವರ್ಷಗಳ ಈ ನಿರಂತರ ಆಡಳಿತಾವಧಿಯಲ್ಲಿ ಭಾರತವು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಬೃಹತ್ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಡಿಜಿಟಲ್ ಕ್ರಾಂತಿ (UPI), ಆಯುಷ್ಮಾನ್ ಭಾರತ್, ಜಿಎಸ್‌ಟಿ ಹಾಗೂ ಮೂಲಸೌಕರ್ಯ ವಲಯಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದೆ.
---------------------------------
ವೀರಯೋಧರ ಶೌರ್ಯಕ್ಕೆ ನಮನ: ರಾಷ್ಟ್ರಪತಿ ಭವನದಲ್ಲಿ ಮಿಲಿಟರಿ ಪುರಸ್ಕಾರಗಳ ಪ್ರದಾನ
ದೇಶದ ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪ್ರತಿಮ ಸಾಹಸ ಹಾಗೂ ಅಸಾಧಾರಣ ಕರ್ತವ್ಯನಿಷ್ಠೆ ತೋರಿದ ಸಶಸ್ತ್ರ ಪಡೆಗಳ ಒಟ್ಟು 51 ವೀರರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ 7 ಕೀರ್ತಿ ಚಕ್ರ, 15 ವೀರ ಚಕ್ರ ಹಾಗೂ 29 ಶೌರ್ಯ ಚಕ್ರ ಪದಕಗಳನ್ನು ನೀಡಿ ಗೌರವಿಸಿದರು.
ಭಾರತದ ಸಾರ್ವಭೌಮತ್ವವನ್ನು ಎತ್ತಿಹಿಡಿಯಲು ಮತ್ತು ಪ್ರಾಣದ ಹಂಗು ತೊರೆದು ಹೋರಾಡಿದ ವೀರ ಚೇತನಗಳ ಸಾಹಸಗಾಥೆಯನ್ನು ಕೊಂಡಾಡುವ ರಕ್ಷಣಾ ಪದಕ ಪ್ರದಾನ ಸಮಾರಂಭವು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ನಡೆದ ಈ ಹೆಮ್ಮೆಯ ಕಾರ್ಯಕ್ರಮವು ದೇಶದ ರಕ್ಷಣಾ ಪಡೆಗಳ ಶಕ್ತಿಯನ್ನು ಜಗತ್ತಿಗೆ ಸಾರಿತು.
--------------------------------------------
ಭಾರತೀಯ ವಿದ್ಯಾ ಭವನಕ್ಕೆ ಹೊಸ ಸಾರಥ್ಯ: ಬನ್ವಾರಿಲಾಲ್ ಪುರೋಹಿತ್ ಅಧ್ಯಕ್ಷರಾಗಿ ಆಯ್ಕೆ
ದೇಶದ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಭಾರತೀಯ ವಿದ್ಯಾ ಭವನದ (BVB : Bharatiya Vidya Bhavan) ನೂತನ ಅಧ್ಯಕ್ಷರಾಗಿ ಪಂಜಾಬ್‌ನ ಮಾಜಿ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ ಹಾಗೂ ಉಪಾಧ್ಯಕ್ಷರಾಗಿ ಎಚ್‌ಡಿಎಫ್‌ಸಿ (HDFC) ಸಂಸ್ಥೆಯ ಮಾಜಿ ಮುಖ್ಯಸ್ಥರಾದ ದೀಪಕ್ ಪರೇಖ್ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು :
ಭಾರತದ ನೇತೃತ್ವದಲ್ಲಿ 16ನೇ ಬ್ರಿಕ್ಸ್ (BRICS) ಬ್ರಿಕ್ಸ್ (BRICS) ಕೃಷಿ ಮಂತ್ರಿಗಳ ಶೃಂಗಸಭೆ ಆರಂಭ :
ಭಾರತದ ಅಧ್ಯಕ್ಷತೆಯಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ ಜೂನ್ 9, 2026 ರಂದು ಯಶಸ್ವಿಯಾಗಿ ಚಾಲನೆ ಪಡೆದುಕೊಂಡ ಐದು ದಿನಗಳ ಈ ಅತ್ಯುನ್ನತ ಬ್ರಿಕ್ಸ್ (BRICS) ಕೃಷಿ ಮಂತ್ರಿಗಳ ಹಾಗೂ ಕಾರ್ಯನಿರತ ಗುಂಪಿನ ಸಮ್ಮೇಳನವು, ಜಾಗತಿಕ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಪ್ರತಿನಿಧಿಸುವ ಸದಸ್ಯ ರಾಷ್ಟ್ರಗಳ ನಡುವೆ ಆಹಾರ ಭದ್ರತೆ, ಹವಾಮಾನ ಸ್ನೇಹಿ ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ರೈತರ ಕಲ್ಯಾಣವನ್ನು ಬಲಪಡಿಸುವ ಮಹತ್ವದ ಉದ್ದೇಶವನ್ನು ಹೊಂದಿದೆ.
-----------------------------------
ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಭೂಕಂಪ
ಫಿಲಿಪೈನ್ಸ್‌ನ ದಕ್ಷಿಣ ಭಾಗದ ಮಿಂಡನಾವೊ (Mindanao) ಪ್ರದೇಶದ ಸಮೀಪ 2026 ಜೂನ್ 8 ರಂದು ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತು. ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿತ್ತು, ಆದರೆ ನಂತರ ಅದನ್ನು ಹಿಂಪಡೆಯಲಾಯಿತು. ಈ ಘಟನೆಯಿಂದ ಪ್ರಾಣಹಾನಿ ಹಾಗೂ ಆಸ್ತಿ ನಷ್ಟವೂ ಉಂಟಾಗಿದೆ
------------------------------------------------------------------------------------------------------

No comments:
Post a Comment