1) ಇತ್ತೀಚೆಗೆ (ಮೇ 2026 ರಲ್ಲಿ) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹಿ ಹಾಕಿದ 'ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ-2026' ರ ಅನ್ವಯ, ಭಾರತದ ಮುಖ್ಯ ನ್ಯಾಯಮೂರ್ತಿಗಳು (CJI) ಸೇರಿದಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆಯನ್ನು ಎಷ್ಟಕ್ಕೆ ಹೆಚ್ಚಿಸಲಾಗಿದೆ?
ಉತ್ತರ: 38
[ವಿವರಣೆ :
1. ಪ್ರಸ್ತುತ ಪ್ರಚಲಿತ ಘಟನೆ (Current Context):
ಸುಪ್ರೀಂ ಕೋರ್ಟ್‌ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳ ಹೊರೆಯನ್ನು ಕಡಿಮೆ ಮಾಡಲು ಮತ್ತು ತ್ವರಿತ ನ್ಯಾಯದಾನವನ್ನು ಖಾತರಿಪಡಿಸಲು ಕೇಂದ್ರ ಸರ್ಕಾರವು ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಸಂಸತ್ತು ಸದ್ಯಕ್ಕೆ ಅಧಿವೇಶನದಲ್ಲಿ ಇಲ್ಲದ ಕಾರಣ, ಮೇ 16, 2026 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಸುಗ್ರೀವಾಜ್ಞೆ-2026’ ಕ್ಕೆ ಅನುಮೋದನೆ ನೀಡಿದ್ದಾರೆ.
2. ಸಂಖ್ಯೆಯಲ್ಲಿನ ಬದಲಾವಣೆ:
ಹಳೆಯ ಸಂಖ್ಯೆ: ಈ ಹಿಂದೆ ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ 33 ನ್ಯಾಯಮೂರ್ತಿಗಳಿದ್ದರು (ಒಟ್ಟು ಸಂಖ್ಯೆ: 33 + 1 = 34).
ಹೊಸ ಸಂಖ್ಯೆ: ಪ್ರಸ್ತುತ ಸುಗ್ರೀವಾಜ್ಞೆಯ ಮೂಲಕ ಇತರ ನ್ಯಾಯಮೂರ್ತಿಗಳ ಸಂಖ್ಯೆಯನ್ನು 37ಕ್ಕೆ ಏರಿಸಲಾಗಿದೆ. ಹೀಗಾಗಿ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ ಸುಪ್ರೀಂ ಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಸಂಖ್ಯೆ 38 ಕ್ಕೆ (37 + 1 = 38) ತಲುಪಿದೆ.]
------------------------------------------------------------------------------------------------
2) ಪ್ರತಿ ವರ್ಷ ಮೇ 18 ರಂದು ವಿಶ್ವದಾದ್ಯಂತ 'ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ'ವನ್ನು (International Museum Day) ಆಚರಿಸಲಾಗುತ್ತದೆ. ಹಾಗಾದರೆ, ಪ್ರಸ್ತುತ 2026 ರ ಸಾಲಿನ ವಿಶೇಷ ಧೇಯೋದ್ದೇಶ (Theme) ಏನು?
ಉತ್ತರ: ವಿಭಜಿತ ಜಗತ್ತನ್ನು ಒಟ್ಟುಗೂಡಿಸುವ ವಸ್ತುಸಂಗ್ರಹಾಲಯಗಳು (Museums Uniting a Divided World)
[ ವಿವರಣೆ :
ವಸ್ತುಸಂಗ್ರಹಾಲಯಗಳ ನೈಜ ಪಾತ್ರ: ವಸ್ತುಸಂಗ್ರಹಾಲಯಗಳು ಎಂದರೆ ಕೇವಲ ಧೂಳು ಹಿಡಿದ ಹಳೆಯ ವಸ್ತುಗಳನ್ನು ಪ್ರದರ್ಶಿಸುವ ನಾಲ್ಕು ಗೋಡೆಗಳ ಜಾಗವಲ್ಲ. ಅವು ಮಾನವ ವಿಕಾಸದ ಹೆಜ್ಜೆಗುರುತುಗಳನ್ನು, ಕಲೆ, ಸಂಸ್ಕೃತಿ ಮತ್ತು ಇತಿಹಾಸದ ಸತ್ವವನ್ನು ಜಾಗರೂಕತೆಯಿಂದ ಕಾಯ್ದಿರಿಸಿರುವ ಜೀವಂತ ತಾಣಗಳು. ಇವು ಗತಕಾಲದ ವೈಭವವನ್ನು ಇಂದಿನ ಪೀಳಿಗೆಗೆ ದಾಟಿಸುವ ಜ್ಞಾನದ ಗಣಿಗಳಾಗಿವೆ.
ಆಚರಣೆಯ ಹಿನ್ನೆಲೆ: ಜಾಗತಿಕ ಮಟ್ಟದಲ್ಲಿ ವಸ್ತುಸಂಗ್ರಹಾಲಯಗಳ ಮಹತ್ವವನ್ನು ಸಾರಲು, ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸಲು ಮತ್ತು ವಿವಿಧ ಸಮುದಾಯಗಳ ನಡುವೆ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸಲು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯಗಳ ಮಂಡಳಿ (ICOM - International Council of Museums) ಪ್ರತಿ ವರ್ಷ ಮೇ 18 ರಂದು ಈ ದಿನವನ್ನು ಆಚರಿಸುತ್ತದೆ.
2026ರ ಧೇಯೋದ್ದೇಶದ ಮಹತ್ವ: ಪ್ರಸ್ತುತ ಜಗತ್ತು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕವಾಗಿ ಧ್ರುವೀಕರಣ ಅಥವಾ ವಿಭಜನೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ, "Museums Uniting a Divided World" ಎಂಬ ವಿಷಯವು ಅತ್ಯಂತ ಪ್ರಸ್ತುತವಾಗಿದೆ. ವಸ್ತುಸಂಗ್ರಹಾಲಯಗಳು ಭಿನ್ನಾಭಿಪ್ರಾಯಗಳನ್ನು ಅಳಿಸದೆ, ವೈವಿಧ್ಯತೆಯನ್ನು ಗೌರವಿಸುತ್ತಾ, ವಿಭಿನ್ನ ಸಮಾಜಗಳನ್ನು ಸಂಸ್ಕೃತಿಯ ಮೂಲಕ ಒಟ್ಟುಗೂಡಿಸುವ ಮತ್ತು ಶಾಂತಿಯನ್ನು ಮೂಡಿಸುವ ಸೇತುವೆಯಾಗಿ ಕೆಲಸ ಮಾಡುತ್ತವೆ ಎಂಬುದನ್ನು ಈ ಧೀಮ್ ಎತ್ತಿ ತೋರಿಸುತ್ತದೆ.]
------------------------------------------------------------------------------------------------
3)


No comments:
Post a Comment