1). ಕರ್ನಾಟಕ ಸರ್ಕಾರ ಇತ್ತೀಚೆಗೆ ಎಷ್ಟು ಮೊತ್ತದ ಕೈಗಾರಿಕಾ ಹೂಡಿಕೆಗೆ ಅನುಮೋದನೆ ನೀಡಿದೆ?
ಉತ್ತರ: ₹4,824 ಕೋಟಿ.
[ವಿವರಣೆ: ಸಚಿವ ಎಂ.ಬಿ. ಪಾಟೀಲ್ ನೇತೃತ್ವದಲ್ಲಿ ಈ ಹೂಡಿಕೆಗೆ ಅನುಮೋದನೆ ಸಿಕ್ಕಿದ್ದು, ಇದರಿಂದ ರಾಜ್ಯದಲ್ಲಿ ಸುಮಾರು 14,525 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.]
-------------------------------------------------------------------------------------------------------------------------
2) ಇತ್ತೀಚೆಗೆ ಕರ್ನಾಟಕದ ಯಾವ ಜಿಲ್ಲೆಯ ನ್ಯಾಯಾಲಯದಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ ಘೋಷಿಸಲಾಗಿದೆ?
ಉತ್ತರ: ಯಾದಗಿರಿ ಜಿಲ್ಲಾ ನ್ಯಾಯಾಲಯ.
[ವಿವರಣೆ: ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ಜಿಲ್ಲಾ ಮಟ್ಟದ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ.]
----------------------------------------------------------------------------------------------------------------------------
3) ಅಂಡಮಾನ್‌ನ ಸುಣ್ಣದ ಕಲ್ಲಿನ ಗುಹೆಗಳಲ್ಲಿ ಸುಮಾರು ಒಂದು ಶತಮಾನದ ನಂತರ ಪತ್ತೆಯಾದ ಅಪರೂಪದ ಕೀಟ ಯಾವುದು?
ಉತ್ತರ: ಮೈಯೋಫೇನ್ಸ್ ಕೆಂಪಿ (Myiophanes kempi).
ವಿವರಣೆ: ಇದು ಗುಹೆಗಳಲ್ಲಿ ವಾಸಿಸುವ 'ಅಸಾಸಿನ್ ಬಗ್' (Assassin Bug) ಜಾತಿಗೆ ಸೇರಿದ್ದು, 100 ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡಿದೆ.
----------------------------------------------------------------------------------------------------------------------------
4) ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಪತ್ತೆಯಾದ ಹೊಸ ಸಸ್ಯ ಪ್ರಭೇದದ ಹೆಸರೇನು?
ಉತ್ತರ: ಓಸ್ಬೆಕಿಯಾ ಜುಬೀನ್ ಗಾರ್ಗಿಯಾನ (Osbeckia zubeengargiana).
[ವಿವರಣೆ: ಗುವಾಹಟಿ ವಿಶ್ವವಿದ್ಯಾಲಯದ ಸಂಶೋಧಕರು ಈ ಹೊಸ ಸಸ್ಯವನ್ನು ಪತ್ತೆಹಚ್ಚಿದ್ದು, ಇದಕ್ಕೆ ಗಾಯಕ ಜುಬೀನ್ ಗಾರ್ಗ್ ಅವರ ಹೆಸರಿಡಲಾಗಿದೆ. ( ಅಸ್ಸಾಂನ ಪ್ರಸಿದ್ಧ ಗಾಯಕ )]
----------------------------------------------------------------------------------------------------------------------------
5) ಅಮೆರಿಕ ಇತ್ತೀಚೆಗೆ ಇರಾನ್‌ನ ಯಾವ ಆಯಕಟ್ಟಿನ ದ್ವೀಪದ ಮೇಲೆ ದಾಳಿ ನಡೆಸಿದೆ?
ಉತ್ತರ: ಖಾರ್ಗ್ ದ್ವೀಪ (Kharg Island).
ವಿವರಣೆ: ಇರಾನ್‌ನ ತೈಲ ರಫ್ತಿನ ಪ್ರಮುಖ ಕೇಂದ್ರವಾಗಿರುವ ಈ ದ್ವೀಪದ ಮೇಲೆ ಅಮೆರಿಕ ದಾಳಿ ಮಾಡಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.
---------------------------------------------------------------------------------------------------------------------------
6) ಅಂತರಾಷ್ಟ್ರೀಯ ಗಣಿತ ದಿನ (International Mathematics Day) 2026 ರ ಥೀಮ್ ಏನು?
ಉತ್ತರ: "Mathematics and Hope" (ಗಣಿತ ಮತ್ತು ಭರವಸೆ).
[ವಿವರಣೆ: ಮಾರ್ಚ್ 14 ರಂದು ಪೈ (Pi) ದಿನದಂದೇ ಈ ದಿನವನ್ನು ಆಚರಿಸಲಾಗುತ್ತಿದ್ದು, ಜಾಗತಿಕ ಸಮಸ್ಯೆಗಳಿಗೆ ಗಣಿತದ ಮೂಲಕ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿದೆ.]
---------------------------------------------------------------------------------------------------------------------------
7) ಉತ್ತರ ಸಮುದ್ರದಲ್ಲಿರುವ 'ಸಿಲ್ವರ್‌ಪಿಟ್ ಕ್ರೇಟರ್' (Silverpit Crater) ಸುದ್ದಿಯಲ್ಲಿರಲು ಕಾರಣವೇನು?
ಉತ್ತರ: ಇದು ಪ್ರಾಚೀನ ಕ್ಷುದ್ರಗ್ರಹ ಡಿಕ್ಕಿಯಿಂದ ಉಂಟಾದ ತಾಣ ಎಂದು ದೃಢಪಟ್ಟಿದೆ.
ವಿವರಣೆ: ಇತ್ತೀಚಿನ ಭೂವೈಜ್ಞಾನಿಕ ಸಂಶೋಧನೆಗಳು ಮಿಲಿಯನ್ ವರ್ಷಗಳ ಹಿಂದೆ ಕ್ಷುದ್ರಗ್ರಹ ಅಪ್ಪಳಿಸಿ ಈ ಕುಳಿ ನಿರ್ಮಾಣವಾಗಿದೆ ಎಂದು ಖಚಿತಪಡಿಸಿವೆ
-----------------------------------------------------------------------------------------------------------------------------
8)ಮಾರ್ಚ್ 15, 2026 ರಂದು ನವದೆಹಲಿಯಲ್ಲಿ ನಡೆಯಲಿರುವ 'ಬಿಸಿಸಿಐ ನಮನ್ ಪ್ರಶಸ್ತಿ' ಸಮಾರಂಭದಲ್ಲಿ ಪ್ರತಿಷ್ಠಿತ 'ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ'ಗೆ ಭಾಜನರಾದವರು ಯಾರು?
ಉತ್ತರ: ರಾಹುಲ್ ದ್ರಾವಿಡ್ ಮತ್ತು ರೋಚರ್ ಬಿನ್ನಿ.
[ವಿವರಣೆ: ಭಾರತೀಯ ಕ್ರಿಕೆಟ್‌ಗೆ ನೀಡಿದ ಅಪಾರ ಕೊಡುಗೆಗಾಗಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಮತ್ತು ಬಿಸಿಸಿಐ ಅಧ್ಯಕ್ಷ ರೋಚರ್ ಬಿನ್ನಿ ಅವರಿಗೆ ಈ ಅತ್ಯುನ್ನತ ಗೌರವ ನೀಡಲಾಗುತ್ತಿದೆ. ಇದೇ ಸಮಾರಂಭದಲ್ಲಿ ಶುಭಮನ್ ಗಿಲ್ ಅವರಿಗೆ 'ವರ್ಷದ ಅತ್ಯುತ್ತಮ ಅಂತಾರಾಷ್ಟ್ರೀಯ ಕ್ರಿಕೆಟಿಗ' (ಪೋಲಿ ಉಮ್ರಿಗರ್ ಪ್ರಶಸ್ತಿ) ಮತ್ತು ಸ್ಮೃತಿ ಮಂದಾನ ಅವರಿಗೆ ಮಹಿಳಾ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.]
------------------------------------------------------------------------------------------------------------------------
ರಾಜ್ಯ ವಿದ್ಯಮಾನಗಳ :
- ಚಾಮರಾಜನಗರ: ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯದ ವಾರ್ಷಿಕ ಆದಾಯ ಮೊದಲ ಬಾರಿಗೆ 100 ಕೋಟಿ ರೂ. ಗಡಿ ದಾಟಿದೆ.
- ಇತ್ತೀಚಿನ ಸುದ್ದಿಪತ್ರಿಕೆ ವರದಿಗಳ ಪ್ರಕಾರ ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳು (ESCOMs) ಒಟ್ಟು 42,000 ಕೋಟಿ ರೂ. ಸಾಲದ ಸುಳಿಯಲ್ಲಿವೆ ಎಂಬ ವರದಿ ಹೊರಬಿದ್ದಿದೆ.
- ಬಂಡೀಪುರ-ನಾಗರಹೊಳೆ: ಸಫಾರಿ ತಾತ್ಕಾಲಿಕ ಸ್ಥಗಿತದಿಂದಾಗಿ ರಾಜ್ಯ ಸರ್ಕಾರಕ್ಕೆ ಸುಮಾರು 6 ಕೋಟಿ ರೂ. ಆದಾಯ ನಷ್ಟವಾಗಿದೆ.
- ಹವಾಮಾನ: ಕರ್ನಾಟಕದಲ್ಲಿ ಬಿಸಿಲ ತಾಪ ಏರಿಕೆಯಾಗುತ್ತಿದ್ದು, ರಾಯಚೂರಿನಲ್ಲಿ ಗರಿಷ್ಠ 37°C ತಾಪಮಾನ ದಾಖಲಾಗಿದೆ.
- ಏಕಗವಾಕ್ಷಿ ಸಮಿತಿಯು 4,824 ಕೋಟಿ ರೂ. ಮೌಲ್ಯದ ಹೊಸ ಉದ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದೆ.
---------------------------------------------------------------------------------------------------------------------------
ರಾಷ್ಟ್ರೀಯ ವಿದ್ಯಮಾನಗಳ:
- ಜ್ಞಾನಪೀಠ ಪ್ರಶಸ್ತಿ: ಪ್ರಸಿದ್ಧ ತಮಿಳು ಸಾಹಿತಿ ಮತ್ತು ಗೀತರಚನೆಕಾರ 'ವೈರಮುತ್ತು ' ಅವರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿದೆ.
- ಮೆಟ್ರೋ ಜಾಲ: ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ಮೆಟ್ರೋ ರೈಲು ಜಾಲವನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
- ಇಸ್ರೋ (ISRO): ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು CE20 ಕ್ರಯೋಜೆನಿಕ್ ಎಂಜಿನ್ ಅನ್ನು ಯಶಸ್ವಿಯಾಗಿ ಭೂ-ಪರೀಕ್ಷೆ (Ground Test) ಮಾಡಿದೆ.
- ಗಣಿತ ದಿನ: ಮಾರ್ಚ್ 14 ರಂದು ವಿಶ್ವಾದ್ಯಂತ 'ಪೈ ದಿನ' (Pi Day) ಆಚರಿಸಲಾಗಿದ್ದು, 2026ರ ವಿಷಯ "Mathematics and Hope" ಆಗಿದೆ.
- ಕ್ರೀಡೆ: ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಭಾರತದ 'ಶೈಲೇಶ್ ಕುಮಾರ್' ಚಿನ್ನದ ಪದಕ ಗೆದ್ದಿದ್ದಾರೆ. ಅವರು ಮೆನ್ಸ್ ಹೈ ಜಂಪ್ T63 ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಗೋಲ್ಡ್ ಮೇಡಲ್ ಗೆದ್ದಿದ್ದಾರೆ. ಅವರು ಈ ಸ್ಪರ್ಧೆಯಲ್ಲಿ 1.84 ಮೀ ಮೀಟರ್ ಜಂಪ್ ಮಾಡಿ ಶ್ರೇಷ್ಠ ಸ್ಥಾನ ಪಡೆದರು.
- ರಾಜಕೀಯ: R. N. Ravi ಅವರು 12 ಮಾರ್ಚ್ 2026 ರಂದು ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಮತ್ತು ಕೋಲ್ಕತ್ತಾದಲ್ಲಿ ಚುನಾವಣಾ ರ‍್ಯಾಲಿಗಳ ಕಾವು ಹೆಚ್ಚಿದೆ.
- ರಕ್ಷಣೆ: ಭಾರತೀಯ ನೌಕಾಪಡೆಗೆ ಅತ್ಯಾಧುನಿಕ ಶತ್ರುನಾಶಕ 'ಐಎನ್ಎಸ್ ತಾರಗಿರಿ' (INS Taragiri) ಶೀಘ್ರವೇ ಸೇರ್ಪಡೆಗೊಳ್ಳಲಿದೆ..
----------------------------------------------------------------------------------------------------------------------------
ಅಂತರಾಷ್ಟ್ರೀಯ ವಿದ್ಯಮಾನಗಳ :
- ಆಸ್ಕರ್ 2026: ಭಾರತದ 'ಹೋಮ್‌ಬೌಂಡ್' (Homebound) ಚಿತ್ರವು ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಆಸ್ಕರ್‌ಗೆ ಶಾರ್ಟ್‌ಲಿಸ್ಟ್ ಆಗಿದೆ.
- ಮಧ್ಯಪ್ರಾಚ್ಯ ಉದ್ವಿಗ್ನತೆ: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.
- ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರವು ತನ್ನ ಸರ್ಕಾರಿ ನೌಕರರ ವೇತನದಲ್ಲಿ 5% ರಿಂದ 30% ರಷ್ಟು ಕಡಿತ ಘೋಷಿಸಿದೆ.
- ವಿಜ್ಞಾನ: ವಿಜ್ಞಾನಿಗಳು ಬೆಳಕಿನ ಕಿರಣಗಳಲ್ಲಿ (Entangled Light) ಸುಮಾರು 17,000 ಕ್ಕೂ ಹೆಚ್ಚು ಹೊಸ ಟೋಪೋಲಾಜಿಕಲ್ ಪ್ಯಾಟರ್ನ್‌ಗಳನ್ನು ಪತ್ತೆಹಚ್ಚಿದ್ದಾರೆ
- ಯುದ್ಧಪೀಡಿತ ಪ್ರದೇಶವಾದ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಭಾರತದ ಎರಡು ಎಲ್‌ಪಿಜಿ ಹಡಗುಗಳು ಯಶಸ್ವಿಯಾಗಿ ದಾಟಿವೆ. ಎಲ್‌ಪಿಜಿ ಹೊತ್ತು ತರುತ್ತಿರುವ ಭಾರತೀಯ ಹಡಗುಗಳ ಹೆಸರು 'ಶಿವಾಲಿಕ್' (Shivalik) ಮತ್ತು 'ನಂದಾದೇವಿ' (Nanda Devi) . 'ಶಿವಾಲಿಕ್' ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಮತ್ತು 'ನಂದಾದೇವಿ' ಹಡಗು ಕಾಂಡ್ಲಾ ಬಂದರಿಗೆ ತಲುಪಲಿವೆ.



No comments:
Post a Comment