Pra-gk-daily, ದಿನನಿತ್ಯದ ಪ್ರಚಲಿತ ವಿದ್ಯಮಾನಗಳು, daily current affairs, General Studies for KAS PSI PC FDA SDA SSC-GD RRB-NTPC & RRB GROUP D EXAMS, Current affairs in kannada, the news of the day is told in short

ದಿನನಿತ್ಯದ ಪ್ರಚಲಿತ ವಿದ್ಯಮಾನಗಳು

https://youtube.com/@praveensindhoor?si=E2Bz_69H3ZmTwNA4

Breaking

Search

Friday, 13 March 2026

14 March 2026 Current Affairs ಪ್ರಚಲಿತ ವಿದ್ಯಮಾನಗಳು,


 1) ಇತ್ತೀಚೆಗೆ ಯಾವ ರಾಜ್ಯವು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ (Responsible AI) ಸಮಿತಿಯನ್ನು ರಚಿಸಿದೆ?

ಉತ್ತರ: ಕರ್ನಾಟಕ

[ವಿವರಣೆ: ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಸರ್ಕಾರವು ಜವಾಬ್ದಾರಿಯುತ AI ನೀತಿಯನ್ನು ರೂಪಿಸಲು ಸಮಿತಿಯನ್ನು ರಚಿಸಿದೆ.]

--------------------------------------------------------------------------------------------------------------------------

2) ಭಾರತದ ರೈಲ್ವೆ ಸಚಿವರು ಇತ್ತೀಚೆಗೆ ಯಾವ ಮಾರ್ಗದಲ್ಲಿ 'ಕವಚ 4.0' (Kavach 4.0) ಯಶಸ್ವಿಯಾಗಿ ಅಳವಡಿಸಲಾಗಿದೆ ಎಂದು ಘೋಷಿಸಿದ್ದಾರೆ?

ಉತ್ತರ: 'ದೆಹಲಿ - ಮುಂಬೈ' ಮತ್ತು 'ದೆಹಲಿ - ಹೌರಾ' ಮಾರ್ಗಗಳು.

[ವಿವರಣೆ: ಕವಚ ಎಂಬುದು ಸ್ವದೇಶಿ ನಿರ್ಮಿತ ರೈಲು ರಕ್ಷಣಾ ವ್ಯವಸ್ಥೆಯಾಗಿದ್ದು, ಅಪಘಾತಗಳನ್ನು ತಡೆಯಲು ಸಹಾಯ ಮಾಡುತ್ತದೆ.]

--------------------------------------------------------------------------------------------------------------------------

3) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಪರ್ಪ್ಲೆಕ್ಸಿಟಿ' (Perplexity) ಬಿಡುಗಡೆ ಮಾಡಿದ AI ಏಜೆಂಟ್ ಹೆಸರೇನು?

ಉತ್ತರ: ಪರ್ಸನಲ್ ಕಂಪ್ಯೂಟರ್ (Personal Computer)

[ವಿವರಣೆ: ಇದು ದೈನಂದಿನ ಕೆಲಸಗಳನ್ನು ಸ್ವಯಂಚಾಲಿತಗೊಳಿಸಲು ವಿನ್ಯಾಸಗೊಳಿಸಲಾದ AI ಸಹಾಯಕರ].

-------------------------------------------------------------------------------------------------------------------------

4) ISRO ಇತ್ತೀಚೆಗೆ ಯಶಸ್ವಿಯಾಗಿ ಪರೀಕ್ಷಿಸಿದ ಇಂಜಿನ್ ಯಾವುದು?

ಉತ್ತರ: CE-20 ಕ್ರಯೋಜನಿಕ್ ಇಂಜಿನ್.

[ವಿವರಣೆ: ಭವಿಷ್ಯದ ಗಗನಯಾನ ಮತ್ತು ಭಾರಿ ಉಪಗ್ರಹ ಉಡಾವಣೆಗಳಿಗಾಗಿ ಈ ಇಂಜಿನ್‌ನ ನೆಲದ ಪರೀಕ್ಷೆಯನ್ನು (Ground Test) ಯಶಸ್ವಿಯಾಗಿ ನಡೆಸಲಾಗಿದೆ.]

--------------------------------------------------------------------------------------------------------------------------

5) ಇತ್ತೀಚಿನ ವರದಿಯ ಪ್ರಕಾರ ವಿಶ್ವದ 3ನೇ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್ ಹೊಂದಿರುವ ದೇಶ ಯಾವುದು?

ಉತ್ತರ: ಭಾರತ.

[ವಿವರಣೆ: ಭಾರತದ ಮೆಟ್ರೋ ರೈಲು ಜಾಲವು 1000 ಕಿ.ಮೀ ಗಿಂತ ಹೆಚ್ಚು ಉದ್ದವನ್ನು ತಲುಪಿದೆ. ಇದು 23 ನಗರಗಳು ಮತ್ತು 11 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಚೀನಾ ಮತ್ತು ಅಮೆರಿಕದ ನಂತರ ಭಾರತ 3ನೇ ಸ್ಥಾನದಲ್ಲಿದೆ.]

------------------------------------------------------------------------------------------------------------------------

6) 2027ರ ವಿಶ್ವ ಕಪ್ ಆರ್ಚರಿ (Archery) ಪಂದ್ಯಾವಳಿಯನ್ನು ಆಯೋಜಿಸುವ ನಗರ ಯಾವುದು?

ಉತ್ತರ: ದೆಹಲಿ.

[ವಿವರಣೆ: ವಿಶ್ವ ಕಪ್ ಆರ್ಚರಿ 2027 ಆತಿಥ್ಯವನ್ನು ಭಾರತ ಪಡೆದಿದೆ. ಈ ಸ್ಪರ್ಧೆಯನ್ನು Archery Association of India ಆಯೋಜಿಸುತ್ತದೆ.]

------------------------------------------------------------------------------------------------------------------------

​7) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕದಂಬ ದೊರೆ ‘ಹೆಮ್ಮಾಡಿ ದೇವ’ ಕಾಲದ ವೀರಗಲ್ಲು ಪತ್ತೆಯಾಗಿದೆ?

​ಉತ್ತರ: ಹಾವೇರಿ ಜಿಲ್ಲೆಯ ಹಾನಗಲ್ಲು (ಕನವಳ್ಳಿ).

​[ವಿವರಣೆ: ಪುರಾತತ್ವ ಇಲಾಖೆಯ ಸಂಶೋಧನೆಯಲ್ಲಿ ಕದಂಬರ ಇತಿಹಾಸಕ್ಕೆ ಸಾಕ್ಷಿಯಾಗಿರುವ ಈ ವೀರಗಲ್ಲು ಬೆಳಕಿಗೆ ಬಂದಿದೆ.]

-------------------------------------------------------------------------------------------------------------------------

​8) ಇತ್ತೀಚೆಗೆ ‘ನಾಗೋರಿ ಪಾನ್ ಮೆಥಿ’ ಗೆ ಯಾವ ಮಾನ್ಯತೆ ಸಿಕ್ಕಿದೆ?

​ಉತ್ತರ: Patent (ಪೇಟೆಂಟ್).

[​ವಿವರಣೆ: ಪೇಟೆಂಟ್ ಎಂದರೆ ಹೆಚ್ಚು ವೈಜ್ಞಾನಿಕ ಅಥವಾ ಹೊಸ ತಂತ್ರಜ್ಞಾನ / ವೈಶಿಷ್ಟ್ಯವಿರುವ ಕೃಷಿ ಉತ್ಪನ್ನಕ್ಕೆ ಕಾನೂನು ರಕ್ಷಣೆ ನೀಡುವುದು.]

----------------------------------------------------------------------------------------------------------------------------


ರಾಜ್ಯ ವಿದ್ಯಮಾನಗಳು (Karnataka)

  • ​ಪ್ರವಾಸೋದ್ಯಮ ನೆರವು: ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಿಲುಕಿರುವ ಅಂತರಾಷ್ಟ್ರೀಯ ಪ್ರವಾಸಿಗರಿಗೆ ವೀಸಾ ಮತ್ತು ವಾಸ್ತವ್ಯದ ನೆರವು ನೀಡಲು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಘೋಷಣೆ.
  • ​ಲಕ್ಕುಂಡಿ ಮ್ಯೂಸಿಯಂ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಬೃಹತ್ ಮುಕ್ತ ಮ್ಯೂಸಿಯಂ ಸ್ಥಾಪನೆಗೆ ಚಾಲನೆ; ಇಲ್ಲಿ ಸುಮಾರು 1,500 ಪುರಾತತ್ವ ವಸ್ತುಗಳನ್ನು ಪ್ರದರ್ಶಿಸಲಾಗುವುದು.
  • ​ತುಂಗಭದ್ರಾ ಅಣೆಕಟ್ಟು: ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಕ್ರೆಸ್ಟ್ ಗೇಟ್‌ಗಳನ್ನು ಮೇ ತಿಂಗಳೊಳಗೆ ಬದಲಾಯಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ.
  • ​ಹೈಕೋರ್ಟ್ ನೋಟಿಸ್: ಪಶುವೈದ್ಯಕೀಯ ವಿಶ್ವವಿದ್ಯಾಲಯದ ಜಾಗವನ್ನು ನ್ಯಾಯಾಧೀಶರ ವಸತಿಗೃಹಗಳಿಗೆ ಬಳಸಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿ ವಿಚಾರಣೆ ನಡೆಸುತ್ತಿದೆ.
  • ​ಐಪಿಎಲ್ ಭದ್ರತೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳ ಪರಿಶೀಲನೆಯ ನಂತರ ಬೆಂಗಳೂರಿನಲ್ಲಿ ಐಪಿಎಲ್ 2026 ಪಂದ್ಯಗಳ ಆಯೋಜನೆಗೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ.

---------------------------------------------------------------------------------------------------------------------------

​ರಾಷ್ಟ್ರೀಯ ವಿದ್ಯಮಾನಗಳು (National)

  • ​ಪ್ರಧಾನಿ ಅಸ್ಸಾಂ ಭೇಟಿ: ಪ್ರಧಾನಿ ಮೋದಿ ಅಸ್ಸಾಂನಲ್ಲಿ 47,800 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ (ಅಸ್ಸಾಂ ಮಾಲಾ 3.0 ಸೇರಿದಂತೆ) ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.
  • ​ರಾಷ್ಟ್ರೀಯ ಲೋಕ್ ಅದಾಲತ್: 2026ರ ಮೊದಲ 'ರಾಷ್ಟ್ರೀಯ ಲೋಕ್ ಅದಾಲತ್' ಇಂದು (ಮಾರ್ಚ್ 14) ದೇಶಾದ್ಯಂತ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆಯೋಜಿಸಲಾಗಿದೆ.
  • ​ಪಶ್ಚಿಮ ಬಂಗಾಳ ಯೋಜನೆಗಳು: ಪಶ್ಚಿಮ ಬಂಗಾಳದಲ್ಲಿ 18,680 ಕೋಟಿ ರೂ. ಮೊತ್ತದ ರಸ್ತೆ, ರೈಲ್ವೆ ಮತ್ತು ಬಂದರು ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ಚಾಲನೆ.
  • ​LPG ಪೂರೈಕೆ ಹೆಚ್ಚಳ: ದೇಶದಲ್ಲಿ ಎಲ್‌ಪಿಜಿ ಕೊರತೆ ನೀಗಿಸಲು ತುರ್ತು ಕ್ರಮವಾಗಿ ಉತ್ಪಾದನೆಯನ್ನು 25% ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರದ ನಿರ್ಧಾರ.
  • ​ಹೊಸ ಪಠ್ಯಪುಸ್ತಕ: NCERT 9ನೇ ತರಗತಿಗೆ 'ಕಾವೇರಿ' ಎಂಬ ಹೊಸ ಇಂಗ್ಲಿಷ್ ಪಠ್ಯಪುಸ್ತಕವನ್ನು ಪರಿಚಯಿಸಿದೆ.

-----------------------------------------------------------------------------------------------------------------------

​ಅಂತರಾಷ್ಟ್ರೀಯ ವಿದ್ಯಮಾನಗಳು (International)

  • ​ಗಲ್ಫ್ ಸಂಘರ್ಷ: ಗಲ್ಫ್ ದೇಶಗಳ ಮೇಲೆ ಇರಾನ್ ನಡೆಸಿದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಭಾರತ ಸಹ-ಪ್ರಾಯೋಜಕತ್ವ ನೀಡಿದೆ.
  • ಹಾರ್ಮುಜ್ ಜಲಸಂಧಿ ವಿನಾಯಿತಿ: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಭಾರತದ ತೈಲ ಹಡಗುಗಳ (Indian-flagged vessels) ಮುಕ್ತ ಸಂಚಾರಕ್ಕೆ ಇರಾನ್ ಅನುಮತಿ ನೀಡಿದ್ದು, ಭಾರತದ ಇಂಧನ ಭದ್ರತೆಗೆ ದೊಡ್ಡ ರಿಲೀಫ್ ಸಿಕ್ಕಿದೆ.
  • UNSC ನಿರ್ಣಯಕ್ಕೆ ಭಾರತ ಸಾಥ್: ಗಲ್ಫ್ ರಾಷ್ಟ್ರಗಳು ಮತ್ತು ಜೋರ್ಡಾನ್ ಮೇಲೆ ಇರಾನ್ ನಡೆಸಿದ ದಾಳಿಯನ್ನು ಖಂಡಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಭಾರತ 'ಸಹ-ಪ್ರಾಯೋಜಕತ್ವ' (Co-sponsor) ನೀಡಿದೆ.
  • ಭಾರತ-ಸೀಶೆಲ್ಸ್ ಸಮರ ಅಭ್ಯಾಸ: ಭಾರತ ಮತ್ತು ಸೀಶೆಲ್ಸ್ ನಡುವಿನ ಜಂಟಿ ಮಿಲಿಟರಿ ತಾಲೀಮು 'ಲಮಿಟಿಯೆ-2026' (Exercise LAMITIYE-2026) ಇಂದೂ ಸಹ ಸೀಶೆಲ್ಸ್‌ನಲ್ಲಿ ಮುಂದುವರಿದಿದ್ದು, ಹಿಂದೂ ಮಹಾಸಾಗರದ ಭದ್ರತೆಯ ಮೇಲೆ ಗಮನಹರಿಸಲಾಗಿದೆ..
  • ಚಿಲಿ ಅಧ್ಯಕ್ಷರಿಗೆ ಅಭಿನಂದನೆ: ಚಿಲಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜೋಸ್ ಆಂಟೋನಿಯೊ ಕ್ಯಾಸ್ಟ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

No comments:

Post a Comment