1) ಭಾರತ ಯಾವ ದೇಶದೊಂದಿಗೆ 100 ವರ್ಷಗಳ ಕ್ರೀಡಾ ಸಂಬಂಧದ ಕಾರ್ಯಕ್ರಮ ಆರಂಭಿಸಲು ಯೋಜಿಸಿದೆ?
ಉತ್ತರ: New Zealand (ನ್ಯೂಜಿಲೆಂಡ್)
ವಿವರಣೆ: 1926 ರಿಂದ ಆರಂಭವಾದ ಕ್ರೀಡಾ ಸಂಬಂಧದ 100 ವರ್ಷಗಳನ್ನು ಆಚರಿಸಲು ವಿಶೇಷ ಕ್ರೀಡಾ ಸಹಕಾರ ಕಾರ್ಯಕ್ರಮ ಆರಂಭಿಸಲು ಯೋಜಿಸಲಾಗಿದೆ.
2) 2026ರ META ಜೀವಮಾನ ಸಾಧನೆ ಪ್ರಶಸ್ತಿ ಯಾರಿಗೆ ಸಂದಿದೆ?
ಉತ್ತರ: ಅಮೋಲ್ ಪಾಲೇಕರ್.
ವಿವರಣೆ: ಹಿರಿಯ ನಟ 'ಅಮೋಲ್ ಪಾಲೇಕರ್' ಅವರಿಗೆ ರಂಗಕರ್ಮಿ ವಿಭಾಗದಲ್ಲಿ ಈ ಗೌರವ ನೀಡಲಾಗಿದೆ.
3) 'ಮೂನ್ ಶಾಟ್' (Moonshot) ಬ್ರೈನ್ ಪ್ರಾಜೆಕ್ಟ್ ಆರಂಭಿಸಿದ ಸಂಸ್ಥೆ ಯಾವುದು?
ಉತ್ತರ: IISc ಬೆಂಗಳೂರು.
ವಿವರಣೆ: ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುವ 'ಬ್ರೈನ್ ಕೋ-ಪ್ರೊಸೆಸರ್' ಅಭಿವೃದ್ಧಿ ಇದರ ಗುರಿ.
4) ಅಂತರಾಷ್ಟ್ರೀಯ ಮಲೇರಿಯಾ ಸಮ್ಮೇಳನ 2026 ಎಲ್ಲಿ ನಡೆಯಿತು?
ಉತ್ತರ: ನವದೆಹಲಿ.
ವಿವರಣೆ: ಮಲೇರಿಯಾ ನಿರ್ಮೂಲನೆಯ ಗುರಿಯೊಂದಿಗೆ ಈ ಜಾಗತಿಕ ಸಮ್ಮೇಳನ ನಡೆದಿದೆ.
5) ಇತ್ತೀಚೆಗೆ ಸುದ್ದಿಯಲ್ಲಿದ್ದ 'National Climate Stack Innovation Challenge' ಅನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
ಉತ್ತರ: NABARD (ನಬಾರ್ಡ್).
ವಿವರಣೆ: ಇದರ ಮುಖ್ಯ ಉದ್ದೇಶ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಹವಾಮಾನ ಮಾಹಿತಿ (Climate Intelligence) ವ್ಯವಸ್ಥೆಯನ್ನು ನಿರ್ಮಿಸುವುದು ಹಾಗೂ ಹವಾಮಾನ ಅಪಾಯಗಳ ಮುನ್ಸೂಚನೆ ನೀಡುವ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುವುದು.
6).ಇತ್ತೀಚೆಗೆ ಸುದ್ದಿಯಲ್ಲಿದ್ದ ‘Proba-3’ ಮಿಷನ್ ಯಾವ ದೇಶದ್ದು?
ಉತ್ತರ: European Space Agency (ESA) - ಯುರೋಪಿನ ಅಂತರಿಕ್ಷ ಸಂಸ್ಥೆಯ ಮಿಷನ್.
ವಿವರಣೆ: ‘Proba-3’ ಒಂದು ಸೌರ ಅಧ್ಯಯನ (Sun Observation) ಮಿಷನ್ ಆಗಿದ್ದು, ಎರಡು ಉಪಗ್ರಹಗಳನ್ನು ಬಳಸಿ ಸೂರ್ಯಗ್ರಹಣ (Artificial Solar Eclipse) ಸೃಷ್ಟಿಸಿ ಸೂರ್ಯನ ಕೊರೋನಾ ಅಧ್ಯಯನ ಮಾಡುವುದು ಇದರ ಉದ್ದೇಶವಾಗಿತ್ತು. ಆದರೆ ಇದರ ಒಂದು ಉಪಗ್ರಹದಲ್ಲಿ ತಾಂತ್ರಿಕ ದೋಷ ಉಂಟಾಗಿ ಸಂಪರ್ಕ ಕಳೆದುಕೊಂಡು ಇತ್ತೀಚೆಗೆ ಇದು ಸುದ್ದಿಯಲ್ಲಿದೆ.
7) ಇತ್ತೀಚೆಗೆ ಬೆಂಗಳೂರಿನಲ್ಲಿ ಯಾವ ಜಾಗತಿಕ ಕಂಪನಿ ಸೈಬರ್ ಸೆಕ್ಯೂರಿಟಿ ಸೌಲಭ್ಯವನ್ನು ಉದ್ಘಾಟಿಸಿದೆ?
ಉತ್ತರ: Deloitte (ಡೆಲಾಯ್ಟ್).
ವಿವರಣೆ: Deloitte ಕಂಪನಿ "Connect Safe" ಎಂಬ ಸೈಬರ್ ಸೆಕ್ಯೂರಿಟಿ ಸೌಲಭ್ಯವನ್ನು ಉದ್ಘಾಟಿಸಿದೆ.
ಪ್ರಮುಖ ಸುದ್ದಿಗಳು:
* ಬೆಂಗಳೂರು ಮೂಲದ ಸ್ಟಾರ್ಟ್-ಅಪ್ ‘ನ್ಯೂ ಸ್ಪೇಸ್ ರಿಸರ್ಚ್’ ಅಭಿವೃದ್ಧಿಪಡಿಸಿರುವ ‘ಶೇಷನಾಗ್-150’ (Sheshnaag-150) ಎಂಬ ಸೌರಶಕ್ತಿ ಚಾಲಿತ ಡ್ರೋನ್ ಪರೀಕ್ಷಾರ್ಥ ಹಂತದಲ್ಲಿದೆ.
* ರಾಜ್ಯ ಬಜೆಟ್ 2026 ರಲ್ಲಿ ಬೆಂಗಳೂರು & ಕಲಬುರಗಿಯಲ್ಲಿ ತಲಾ ₹ 1 ಕೋಟಿ ವೆಚ್ಚದಲ್ಲಿ IVF (ಸಂತಾನೋತ್ಪತ್ತಿ ಕೇಂದ್ರ) ಸ್ಥಾಪಿಸಲು ಅನುಮೋದನೆ ನೀಡಲಾಗಿದೆ.
* ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿ ಧಾಮ ಇತ್ತೀಚೆಗೆ ಸುದ್ದಿಯಲ್ಲಿದ್ದು, ಇಲ್ಲಿ ಅಪರೂಪದ ಔಷಧೀಯ ಸಸ್ಯಗಳು ಕಂಡು ಬರುತ್ತವೆ.
* ದೆಹಲಿಯಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ 2೦೦೦ ಕ್ಕೂ ಹೆಚ್ಚು ಚಿತ್ರಗಳು ಸಲ್ಲಿಕೆಯಾದವು.
* ಗಲ್ಫ್ ದೇಶಗಳಲ್ಲಿ ಭಾರತೀಯರ ಸುರಕ್ಷತೆಗಾಗಿ ಸಂಸದರು ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಕ್ರಮ ಕೋರಿದ್ದಾರೆ.
* ಪಶ್ಚಿಮ ಏಷ್ಯಾ ಯುದ್ಧದಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಏರಿಳಿತ ಕಂಡುಬಂದಿದೆ.
* ಇರಾನ್-ಇಸ್ರೇಲ್ ನಡುವಿನ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.
* ಅಮೆರಿಕದಲ್ಲಿ ಇರಾನ್ ಸಂಘರ್ಷದ ಪ್ರಭಾವದಿಂದ ಭದ್ರತಾ ತಂತ್ರದ ಕುರಿತು ಒತ್ತಡ ಹೆಚ್ಚಿದೆ.
* ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಯುದ್ಧ ಪರಿಣಾಮದಿಂದ ಅಸ್ಥಿರತೆ ಕಂಡುಬಂದಿದೆ.


No comments:
Post a Comment