1). ಕರ್ನಾಟಕ ಬಜೆಟ್ 2026-27ರ ಪ್ರಕಾರ, ಎಷ್ಟು ವರ್ಷದೊಳಗಿನ ವಯೋಮಾನದವರಿಗೆ ಸಾಮಾಜಿಕ ಮಾಧ್ಯಮ (Social Media) ಬಳಕೆಯನ್ನು ನಿಷೇಧಿಸಲು ಸರ್ಕಾರ ಉದ್ದೇಶಿಸಿದೆ?
ಉತ್ತರ: 16 ವರ್ಷ
2). ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭಾರತದ ಮೊದಲ 'ರಿಂಗ್ ಮೆಟ್ರೋ' (Ring Metro) ಅನ್ನು ಎಲ್ಲಿ ಉದ್ಘಾಟಿಸಿದರು?
ಉತ್ತರ: ದೆಹಲಿ
3). ಶರಾವತಿ ಪಂಪ್ಡ್ ಸ್ಟೋರೇಜ್ ಜಲವಿದ್ಯುತ್ ಯೋಜನೆ (Pumped storage Hydroelectric Project) ಯಾವ ಎರಡು ಅಣೆಕಟ್ಟುಗಳ ನಡುವೆ ನಿರ್ಮಿಸಲು ಉದ್ದೇಶಿಸಲಾಗಿದೆ?
ಉತ್ತರ: ತಲಕಳಲೆ ಮತ್ತು ಗೇರುಸೊಪ್ಪ
[ವಿವರಣೆ: ಇತ್ತೀಚೆಗೆ ಈ ಯೋಜನೆ ಸುದ್ದಿಯಲ್ಲಿದ್ದು, ನೀರನ್ನು ಮರುಬಳಕೆ ಮಾಡಿ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.]
4) ಕರ್ನಾಟಕ ಬಜೆಟ್ 2026 ರಲ್ಲಿ ಘೋಷಿಸಲಾದ ‘ರೋಹಿತ್ ವೇಮುಲ ಕಾಯ್ದೆ’ ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಶೈಕ್ಷಣಿಕ ಸಂಸ್ಥೆಗಳಲ್ಲಿ ತಾರತಮ್ಯ ತಡೆ.
[ವಿವರಣೆ: ಈ ಕಾಯ್ದೆಯು ಉನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಭೇದಭಾವವನ್ನು ತಡೆಯಲು ಮತ್ತು ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದೆ.]
5) ಭಾರತೀಯ ನೌಕಾಪಡೆಯು ಇತ್ತೀಚೆಗೆ ಯಾವ ದ್ವೀಪದಲ್ಲಿ ತನ್ನ ಹೊಸ ನೆಲೆಯಾದ ‘ಐ ಎನ್ ಎಸ್ ಜಟಾಯು’ (INS Jatayu) ಅನ್ನು ಕಾರ್ಯಾರಂಭ ಮಾಡಿದೆ?
ಉತ್ತರ: ಮಿನಿಕಾಯ್ ದ್ವೀಪ (ಲಕ್ಷದ್ವೀಪ).
[ವಿವರಣೆ: ಇದು ಲಕ್ಷದ್ವೀಪದಲ್ಲಿನ 2ನೇ ನೌಕಾ ನೆಲೆ. (ಮೊದಲನೆಯದು: INS Dweeprakshak - ಕವರತ್ತಿ).]
6) 2026ರ ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ವರದಿಯ ಪ್ರಕಾರ, ನವೀಕರಿಸಬಹುದಾದ ಇಂಧನ ಬಳಕೆಯಲ್ಲಿ ಭಾರತದ ಯಾವ ರಾಜ್ಯವು ಮೊದಲ ಸ್ಥಾನದಲ್ಲಿದೆ?
ಉತ್ತರ: ಕರ್ನಾಟಕ.
[ವಿವರಣೆ: ಸೌರ ಮತ್ತು ಜಲವಿದ್ಯುತ್ ಯೋಜನೆಗಳ ಯಶಸ್ವಿ ಅನುಷ್ಠಾನದಿಂದ ಕರ್ನಾಟಕವು ನವೀಕರಿಸಬಹುದಾದ ಇಂಧನದಲ್ಲಿ ದೇಶದಲ್ಲೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ.]
7). ಇತ್ತೀಚೆಗೆ ಸುದ್ದಿಯಲ್ಲಿದ್ದ ‘ಅಗ್ನಿ-5’ (Agni-5) ಕ್ಷಿಪಣಿಯು ಯಾವ ತಂತ್ರಜ್ಞಾನವನ್ನು ಒಳಗೊಂಡಿದೆ?
ಉತ್ತರ: MIRV ತಂತ್ರಜ್ಞಾನ.
[ವಿವರಣೆ: MIRV - Multiple Independently Targetable Re-entry Vehicle. ಈ ತಂತ್ರಜ್ಞಾನವು ಒಂದೇ ಕ್ಷಿಪಣಿಯಿಂದ ಹಲವು ಗುರಿಗಳನ್ನು ನಾಶಪಡಿಸಲು ಸಹಾಯ ಮಾಡುತ್ತದೆ.]
8). ಇತ್ತೀಚೆಗೆ ಭಾರತದ ಕಾರ್ಯಚರಣೆಯಲ್ಲಿರುವ ಪರಮಾಣು ವಿದ್ಯುತ್ ಸ್ಥಾವರವೊಂದರ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಮಹಿಳೆ ಯಾರು?
ಉತ್ತರ: ಆರ್. ಎಂ. ನಾಚಮ್ಮೈ.
[ವಿವರಣೆ: ಇವರು ಕರ್ನಾಟಕದ ಕೈಗಾ ಸ್ಥಾವರಕ್ಕೆ ನೇಮಕಗೊಂಡಿದ್ದಾರೆ.]
9). 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್ (ICC Men's T20 World Cup) ಫೈನಲ್ ಪಂದ್ಯದಲ್ಲಿ ಭಾರತವು ಯಾವ ದೇಶವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತು?
ಉತ್ತರ: ನ್ಯೂಜಿಲೆಂಡ್
[ವಿವರಣೆ: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಭಾರತ 96 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸಂಜು ಸ್ಯಾಮ್ಸನ್ ಅವರು ಪಂದ್ಯದ ಶ್ರೇಷ್ಠ ಪ್ರಶಸ್ತಿ ಪಡೆದರು.]


No comments:
Post a Comment