1) ಇತ್ತೀಚೆಗೆ ಸುದ್ದಿಯಲ್ಲಿದ್ದ 'ಭಾರತಿ' (BHARATI) ಉಪಕ್ರಮವು ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ಕೃಷಿ ಮತ್ತು ಆಹಾರ ಉತ್ಪನ್ನಗಳ ರಫ್ತು.
ವಿವರಣೆ: APEDA ಸಂಸ್ಥೆಯು 2030 ರ ವೇಳೆಗೆ ಕೃಷಿ ರಫ್ತನ್ನು $50 ಬಿಲಿಯನ್‌ಗೆ ಹೆಚ್ಚಿಸಲು ಈ ಯೋಜನೆಯನ್ನು ರೂಪಿಸಿದೆ.
2) ಒಂದು ಗಂಟೆಯಲ್ಲಿ 2.5 ಲಕ್ಷ ಸಸಿಗಳನ್ನು ನೆಡುವ ಮೂಲಕ 'ಗಿನಿಸ್ ವಿಶ್ವ ದಾಖಲೆ' ನಿರ್ಮಿಸಿದ ಭಾರತದ ನಗರ ಯಾವುದು?
ಉತ್ತರ: ವಾರಣಾಸಿ.
ವಿವರಣೆ: ಪ್ರಧಾನಿ ಕ್ಷೇತ್ರವಾದ ವಾರಣಾಸಿಯಲ್ಲಿ ಈ ದಾಖಲೆಯನ್ನು ಬರೆಯಲಾಗಿದೆ.
3) ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ 'ಕ್ಲೀನ್ ರೂಮ್' ಸೌಲಭ್ಯವನ್ನು ಮೈಕ್ರಾನ್ ಟೆಕ್ನಾಲಜಿ ಎಲ್ಲಿ ಪ್ರಾರಂಭಿಸಿದೆ?
ಉತ್ತರ: ಗುಜರಾತ್.
ವಿವರಣೆ: ಗುಜರಾತಿನ ಸಾನಂದ್‌ನಲ್ಲಿ ಸ್ಥಾಪಿಸಲಾಗಿದೆ.
4) DRDO ಇತ್ತೀಚೆಗೆ ಪರೀಕ್ಷಿಸಿದ 'VSHORADS' ಯಾವುದಕ್ಕೆ ಸಂಬಂಧಿಸಿದೆ?
ಉತ್ತರ: ವಾಯು ರಕ್ಷಣಾ ವ್ಯವಸ್ಥೆ (Air Defense System).
ವಿವರಣೆ: ಇದು ಶತ್ರು ವಿಮಾನ ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸುವ 'ವೆರಿ ಶಾರ್ಟ್ ರೇಂಜ್' ವಾಯು ರಕ್ಷಣಾ ವ್ಯವಸ್ಥೆಯಾಗಿದೆ.
5) ಕರ್ನಾಟಕ ಸರ್ಕಾರವು ಇತ್ತೀಚೆಗೆ 'ಕಲಾವರ್ಸ್' (Kala verse) ಮೂಲಕ ಯಾವ ಕ್ಷೇತ್ರವನ್ನು ಡಿಜಿಟಲೀಕರಣಗೊಳಿಸುತ್ತದೆ?
ಉತ್ತರ: ಜಾನಪದ ಕಲೆ & ಸಂಸ್ಕೃತಿ.
ವಿವರಣೆ: ಕರ್ನಾಟಕದ ಶ್ರೀಮಂತ ಜಾನಪದ ಕಲೆಗಳನ್ನು ಆಧುನಿಕ ಮೆಟಾವರ್ಸ್ ತಂತ್ರಜ್ಞಾನದೊಂದಿಗೆ ಜೋಡಿಸುವ ಪ್ರಯತ್ನವಿದು.

No comments:
Post a Comment