1). ಇತ್ತೀಚೆಗೆ ಬಿಡುಗಡೆಯಾದ ದೇಶದ ಮೊದಲ 'ಗ್ರಾಹಕ ನ್ಯಾಯ 2026' (Consumer Justice 2026) ಸಮೀಕ್ಷಾ ವರದಿಯಲ್ಲಿ ಕರ್ನಾಟಕ ರಾಜ್ಯವು ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?
ಉತ್ತರ: 4ನೇ ಸ್ಥಾನ
[ವಿವರಣೆ : ವರದಿಯ ಹೆಸರು ದೇಶದ ಪ್ರಥಮ 'ಗ್ರಾಹಕ ನ್ಯಾಯ 2026' (Consumer Justice 2026) ವರದಿ.
ಈ ಸಮೀಕ್ಷಾ ವರದಿಯಲ್ಲಿ ಕರ್ನಾಟಕ ರಾಜ್ಯವು ಗಮನಾರ್ಹ ಸಾಧನೆ ಮಾಡಿದ್ದು, ರಾಷ್ಟ್ರಮಟ್ಟದಲ್ಲಿ 4ನೇ ಶ್ರೇಯಾಂಕವನ್ನು (Rank) ಪಡೆದುಕೊಂಡಿದೆ.]
----------------------------------------------------------------------------------------------------------------------------
2). ಇತ್ತೀಚೆಗೆ ಇರಾನ್ ಬೆಂಬಲಿತ ಗುಂಪುಗಳು ದಾಳಿ ನಡೆಸಿದ 'ಡಿಯಾಗೋ ಗಾರ್ಸಿಯಾ' (Diego Garcia) ದ್ವೀಪವು ಯಾವ ಮಹಾಸಾಗರದಲ್ಲಿದೆ ಮತ್ತು ಈ ನೆಲೆಯು ಯಾರ ನಿಯಂತ್ರಣದಲ್ಲಿದೆ?
ಉತ್ತರ: ಹಿಂದೂ ಮಹಾಸಾಗರ - ಬ್ರಿಟನ್ ನಿಯಂತ್ರಣ (ಅಮೆರಿಕದ ಬಳಕೆ)
[ವಿವರಣೆ : ಸ್ಥಳ ಮತ್ತು ಹಿನ್ನೆಲೆ: ಡಿಯಾಗೋ ಗಾರ್ಸಿಯಾ ದ್ವೀಪವು ಹಿಂದೂ ಮಹಾಸಾಗರದಲ್ಲಿರುವ (Indian Ocean) ಚಾಗೋಸ್ ದ್ವೀಪಸಮೂಹದ ಭಾಗವಾಗಿದೆ. ಇದು 1814 ರಿಂದ ಬ್ರಿಟನ್ ದೇಶದ ನಿಯಂತ್ರಣದಲ್ಲಿದೆ.
ಈ ದ್ವೀಪವು ಬ್ರಿಟಿಷ್ ಒಡೆತನದಲ್ಲಿದ್ದರೂ, ಇಲ್ಲಿ ಅಮೆರಿಕದ ಸುಮಾರು 2,500 ಸೇನಾ ಸಿಬ್ಬಂದಿಗಳು ನೆಲೆಸಿದ್ದಾರೆ. ಇದು ಅಮೆರಿಕದ ಅತ್ಯಂತ ಪ್ರಮುಖ ಮತ್ತು ಆಯಕಟ್ಟಿನ ಮಿಲಿಟರಿ ತಾಣಗಳಲ್ಲಿ ಒಂದಾಗಿದೆ.]
----------------------------------------------------------------------------------------------------------------------------
3). ಅಮೆರಿಕದ ಫಿಲಡೆಲ್ಫಿಯಾದಲ್ಲಿ ನಡೆಯಲಿರುವ 'ಅಕ್ಕ' (AKKA) ರಜತ ಮಹೋತ್ಸವ ಸಮಾರಂಭಕ್ಕೆ ಯಾರನ್ನು 'ಸಾಂಸ್ಕೃತಿಕ ರಾಯಭಾರಿ'ಯನ್ನಾಗಿ (Cultural Ambassador) ಆಯ್ಕೆ ಮಾಡಲಾಗಿದೆ?
ಉತ್ತರ: ರಿಷಬ್ ಶೆಟ್ಟಿ
[ವಿವರಣೆ : ಸಂಘಟನೆ: 'ಅಕ್ಕ' ಎಂದರೆ ಅಮೆರಿಕ ಕನ್ನಡ ಕೂಟಗಳ ಅಗ್ರವ (Association of Kannada Kootas of America). ಇದು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಒಕ್ಕೂಟವಾಗಿದೆ.
ಈ ಸಂಘಟನೆಯು ತನ್ನ ಸ್ಥಾಪನೆಯ 25ನೇ ವರ್ಷದ ಅಂಗವಾಗಿ 'ರಜತ ಮಹೋತ್ಸವ'ವನ್ನು (Silver Jubilee) ಆಚರಿಸುತ್ತಿದೆ.]
-----------------------------------------------------------------------------------------------------------------------------
4). ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸುರಕ್ಷತೆ ಮತ್ತು ನಿರ್ವಹಣೆಯ ಮೇಲೆ ನಿಗಾ ವಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಜಾರಿಗೆ ತರುತ್ತಿರುವ ಹೊಸ ತಂತ್ರಜ್ಞಾನ ಆಧಾರಿತ ಸೇವೆಯ ಹೆಸರೇನು?
ಉತ್ತರ: ಡ್ಯಾಶ್ ಕ್ಯಾಮ್ ಅನಾಲಿಟಿಕ್ಸ್ ಸರ್ವಿಸಸ್ (DAS)
[ವಿವರಣೆ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹೆದ್ದಾರಿಗಳ ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ (Artificial Intelligence - AI) ಆಧಾರಿತ ಎಚ್‌ಡಿ (HD) ಡ್ಯಾಶ್ ಕ್ಯಾಮ್‌ಗಳನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಈ ಕ್ಯಾಮ್‌ಗಳನ್ನು ಹೆದ್ದಾರಿ ಪ್ರಾಧಿಕಾರದ ಗಸ್ತು (Patrolling) ವಾಹನಗಳಿಗೆ ಅಳವಡಿಸಲಾಗುತ್ತದೆ. ಇವು ವಾರಕ್ಕೊಮ್ಮೆ ನಿಗದಿಪಡಿಸಿದ ಹೆದ್ದಾರಿ ವ್ಯಾಪ್ತಿಯಲ್ಲಿ ಸಂಚರಿಸಿ ರಸ್ತೆಯ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸುತ್ತವೆ.]
----------------------------------------------------------------------------------------------------------------------------
5). ಇತ್ತೀಚೆಗೆ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿರುವ ಅತ್ಯಾಧುನಿಕ ಸ್ವದೇಶಿ ನಿರ್ಮಿತ ಸುಧಾರಿತ ಯುದ್ಧನೌಕೆಯ ಹೆಸರೇನು?
ಉತ್ತರ: ತಾರಾಗಿರಿ (Taragiri)
[ವಿವರಣೆ : ಸೇರ್ಪಡೆ ದಿನಾಂಕ: ಏಪ್ರಿಲ್ 3 ರಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ನೌಕೆಯನ್ನು ಅಧಿಕೃತವಾಗಿ ನೌಕಾಪಡೆಗೆ ಲೋಕಾರ್ಪಣೆ ಮಾಡಲಿದ್ದಾರೆ.
ತಯಾರಿಕೆ: ಇದನ್ನು ಮುಂಬೈನ 'ಮಜುಗಾಂವ್ ಡಾಕ್ ಶಿಪ್ಪಿಂಗ್ ಲಿಮಿಟೆಡ್' (MDL) ನಿರ್ಮಿಸಿದೆ. ಇದು 'ಪ್ರಾಜೆಕ್ಟ್ 17A' ಅಡಿಯಲ್ಲಿ ನಿರ್ಮಾಣವಾದ ಮೂರನೇ ಬೃಹತ್ ಯುದ್ಧನೌಕೆಯಾಗಿದೆ.
ಈ ನೌಕೆಯು ಸುಮಾರು 6,670 ಟನ್ ತೂಕವನ್ನು ಹೊಂದಿದೆ.]
----------------------------------------------------------------------------------------------------------------------------
6). ಇತ್ತೀಚೆಗೆ ಸಿಡ್ನಿಯಲ್ಲಿ ನಡೆದ 'ಎಎಫ್‌ಸಿ ಮಹಿಳಾ ಏಷ್ಯನ್ ಕಪ್' (AFC Women's Asian Cup) ಫುಟ್‌ಬಾಲ್ ಟೂರ್ನಿಯಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಚಾಂಪಿಯನ್ ಪಟ್ಟ ಗೆದ್ದ ತಂಡ ಯಾವುದು?
ಉತ್ತರ: ಜಪಾನ್
[ವಿವರಣೆ : ಫೈನಲ್ ಪಂದ್ಯ ಸಿಡ್ನಿಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಪಾನ್ ಮಹಿಳಾ ತಂಡವು ಆತಿಥೇಯ ಆಸ್ಟ್ರೇಲಿಯಾ ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.]
---------------------------------------------------------------------------------------------------------------------------
7). ಮರಣಾನಂತರ ದೇಹದಾನ ಮಾಡುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಹಾಗೂ 'ದೇಹದಾನಿಗಳ ಗ್ರಾಮ' ಎಂದೇ ಖ್ಯಾತಿ ಪಡೆದಿರುವ ಗ್ರಾಮ ಯಾವುದು?
ಉತ್ತರ: ಶೇಗುಣಸಿ
[ವಿವರಣೆ : ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶೇಗುಣಸಿ ಗ್ರಾಮದ ಜನರು ಮರಣಾನಂತರ ತಮ್ಮ ದೇಹವನ್ನು ವೈದ್ಯಕೀಯ ಸಂಶೋಧನೆ ಮತ್ತು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ದಾನ ಮಾಡುವ ಮೂಲಕ ವಿಶಿಷ್ಟ ಚಳವಳಿ ಆರಂಭಿಸಿದ್ದಾರೆ.]
---------------------------------------------------------------------------------------------------------------------------
8). ವಿಶ್ವ ಹವಾಮಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರ: ಮಾರ್ಚ್ 23ರಂದು ಆಚರಿಸಲಾಗುತ್ತದೆ.
[ವಿವರಣೆ : ವಿಶ್ವ ಹವಾಮಾನ ದಿನವನ್ನು World Meteorological Organization (WMO) ಸ್ಥಾಪನೆಯ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಈ ಸಂಸ್ಥೆ 1950ರಲ್ಲಿ ಸ್ಥಾಪನೆಯಾಯಿತು.]
--------------------------------------------------------------------------------------------------------------------------
ರಾಜ್ಯ ಸುದ್ದಿಗಳು :
- ಅಮೆರಿಕದ ಫಿಲಡೆಲ್ಫಿಯಾದಲ್ಲಿ ಸೆಪ್ಟೆಂಬರ್ 4ರಿಂದ 6ರವರೆಗೆ ನಡೆಯಲಿರುವ ಅಮೆರಿಕ ಕನ್ನಡ ಕೂಟಗಳ ಅಗ್ರಮೌತ (ಅಕ್ಕ) ಸಂಸ್ಥೆಯ ರಜತ ಮಹೋತ್ಸವ ಸಮಾರಂಭಕ್ಕೆ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ವಿಶ್ವದಾದ್ಯಂತ ಇರುವ ಕನ್ನಡಿಗರ ಏಕತೆಯ ಪ್ರತೀಕವಾಗಿರುವ ಈ ಮೂರು ದಿನಗಳ ಸಮ್ಮೇಳನದಲ್ಲಿ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಕನ್ನಡಾಭಿಮಾನಿಗಳು ಭಾಗವಹಿಸಲಿದ್ದಾರೆ ಹಾಗೂ ಈ ಸಂದರ್ಭದಲ್ಲಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯಮಿಗಳ ಸಮಾವೇಶ, ಚಲನಚಿತ್ರ ಮತ್ತು ನಾಟಕಗಳ ಪ್ರದರ್ಶನಗಳು ನಡೆಯಲಿವೆ ಎಂದು ಅಕ್ಕ ಸಂಸ್ಥೆಯ ಅಧ್ಯಕ್ಷ ಮುದ್ದು ರಂಗಯ್ಯ ತಿಳಿಸಿದ್ದಾರೆ.
- ವನ್ಯಜೀವಿ ಸಂರಕ್ಷಣೆ: Bandipur Tiger Reserve ನಲ್ಲಿ ಬೇಸಿಗೆಯ ಹಿನ್ನೆಲೆಯಲ್ಲಿ ಕಾಳ್ಗಿಚ್ಚು ತಡೆಗಟ್ಟಲು ‘ಫೈರ್ ಲೈನ್’ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಬಂಡೀಪುರದಲ್ಲಿ ಫೈರ್ ಲೈನ್‌ಗಳನ್ನು ನಿರ್ಮಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಕೆಲವು ವರದಿಗಳ ಪ್ರಕಾರ, ಸುಮಾರು 2,800 ಕಿಮೀ ಮಟ್ಟದ ಫೈರ್ ಲೈನ್ ನಿರ್ಮಾಣ ಗುರಿ ಇತ್ತು ಮತ್ತು ಬಹುಪಾಲು ಕೆಲಸ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Kannada Sahitya Parishat ಆಯೋಜಿಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2026 ಅನ್ನು ಮಂಡ್ಯದಲ್ಲಿ ನಡೆಸಲು ಯೋಜಿಸಲಾಗಿದೆ. ಸಮ್ಮೇಳನದ ಪೂರ್ವಸಿದ್ಧತೆಗಳಲ್ಲಿ ಭಾಗವಾಗಿ ಆಮಂತ್ರಣ ಪತ್ರಿಕೆ ಸಿದ್ಧತೆ ,ಅದರ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡುವುದು ಇತ್ಯಾದಿ ಕಾರ್ಯಕ್ರಮಗಳು ಆರಂಭಗೊಂಡಿವೆ.
----------------------------------------------------------------------------------------------------------------------------
ರಾಷ್ಟ್ರೀಯ ಸುದ್ದಿಗಳು :
- ಇಂದು (ಮಾರ್ಚ್ 23) ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಬಲಿದಾನದ ನೆನಪಿಗಾಗಿ ದೇಶಾದ್ಯಂತ ಗೌರವ ಸಲ್ಲಿಸಲಾಗುತ್ತಿದೆ.
- ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ದೇಶಾದ್ಯಂತ ಸುಮಾರು 40 ಸಾವಿರ ಕಿ.ಮೀ ಹೆದ್ದಾರಿಯ ಸುರಕ್ಷತೆ ಮತ್ತು ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು 'ಡ್ಯಾಶ್ ಕ್ಯಾಮ್ ಅನಾಲಿಟಿಕ್ಸ್ ಸರ್ವಿಸಸ್' (DAS) ಯೋಜನೆಯಡಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಡ್ಯಾಶ್‌ಕ್ಯಾಮ್‌ಗಳನ್ನು ಬಳಸಿ ರಸ್ತೆ ಗುಂಡಿ, ಒತ್ತುವರಿ ಹಾಗೂ ಬೀದಿ ದೀಪಗಳ ವೈಫಲ್ಯ ಸೇರಿದಂತೆ 30ಕ್ಕೂ ಹೆಚ್ಚು ಲೋಪಗಳನ್ನು ಪತ್ತೆಹಚ್ಚುವ ಸುಧಾರಿತ ಕ್ರಮಕ್ಕೆ ಮುಂದಾಗಿದೆ.
- ದೇಶದಲ್ಲಿ ಎಲ್‌ಪಿಜಿ ಉತ್ಪಾದನೆ ಹೆಚ್ಚಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಾಣಿಜ್ಯ ಬಳಕೆಯ ಎಲ್‌ಪಿಜಿಯನ್ನು ಹೆಚ್ಚುವರಿಯಾಗಿ ಶೇ 20ರಷ್ಟು ಹಂಚಿಕೆ ಮಾಡಲು ಒಪ್ಪಿಗೆ ನೀಡಿದ್ದು, ಇದರಿಂದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಂತಹ ಆದ್ಯತಾ ವಲಯಗಳಿಗೆ ಪೂರೈಕೆಯಾಗುವ ಒಟ್ಟು ಪ್ರಮಾಣವು ಶೇ 50ಕ್ಕೆ ಏರಿಕೆಯಾಗಲಿದೆ.
- ಟ್ರಾನ್ಸ್ ಯೂನಿಯನ್ ಸಿಬಿಲ್ (CIBIL) ವರದಿಯ ಪ್ರಕಾರ, ಭಾರತದಲ್ಲಿ ಸಾಲದ ಕುರಿತಾದ ಜಾಗೃತಿ ಹೆಚ್ಚಾಗಿದ್ದು, ವಿಶೇಷವಾಗಿ ಮಹಾನಗರಗಳ ಆಚೆಗಿನ ನಿವಾಸಿಗಳು, ಜೆನ್ ಝೀ (Gen Z) ತಲೆಮಾರಿನವರು ಮತ್ತು ಪುರುಷರಿಗಿಂತ ಉತ್ತಮ ಕ್ರೆಡಿಟ್ ಸ್ಕೋರ್ (731ಕ್ಕೂ ಹೆಚ್ಚು) ಹೊಂದಿರುವ ಮಹಿಳೆಯರು ಆರ್ಥಿಕ ಶಿಸ್ತಿನಲ್ಲಿ ಮುಂಚೂಣಿಯಲ್ಲಿದ್ದಾರೆ
-----------------------------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು :
- ಹಿಂದೂ ಮಹಾಸಾಗರದಲ್ಲಿರುವ ಬ್ರಿಟಿಷ್ ನಿಯಂತ್ರಣದ ಚಾಗೋಸ್ ದ್ವೀಪ ಸಮೂಹದ 'ಡೀಗೊ ಗಾರ್ಸಿಯಾ' ವಾಯುನೆಲೆಯನ್ನು ಅಮೆರಿಕದ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಪ್ರತಿಯಾಗಿ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಬ್ರಿಟನ್ ತೀವ್ರವಾಗಿ ಖಂಡಿಸಿದ್ದು, ಇದು ಹೋರ್ಮುಜ್ ಜಲಸಂಧಿಯ ಭದ್ರತೆ ಹಾಗೂ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಿದೆ.
- ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಜೆರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದ್ದರೆ, ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕವು ಇರಾನ್‌ನ ಕಚ್ಚಾ ತೈಲ ರಫ್ತಿನ ಮೇಲಿನ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದೆ ಮತ್ತು ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿರಿಸಲು 22 ರಾಷ್ಟ್ರಗಳು ಒಗ್ಗೂಡಿ ಒತ್ತಾಯಿಸಿವೆ.
-----------------------------------------------------------------------------------------------------------------------------



No comments:
Post a Comment