1) ಐಪಿಎಲ್ (IPL) ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ವಿದೇಶಿ ಆಟಗಾರ (Most Capped Overseas Player) ಎಂಬ ಹೊಸ ದಾಖಲೆಯನ್ನು ಇತ್ತೀಚೆಗೆ ಯಾರು ನಿರ್ಮಿಸಿದ್ದಾರೆ?
ಉತ್ತರ: ಸುನಿಲ್ ನರೈನ್ (Sunil Narine - ವೆಸ್ಟ್ ಇಂಡೀಸ್).
[ವಿವರಣೆ : ದಾಖಲೆ : ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸ್ಟಾರ್ ಆಲ್-ರೌಂಡರ್ ಸುನಿಲ್ ನರೈನ್, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ವಿದೇಶಿ ಆಟಗಾರ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮಾರ್ಚ್ 29, 2026 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ನಡೆದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ದಾಖಲೆ ಬರೆದರು.
ಯಾರ ದಾಖಲೆ ಬ್ರೇಕ್ : ಇವರು ವೆಸ್ಟ್ ಇಂಡೀಸ್‌ನವರೇ ಆದ ಕೀರನ್ ಪೊಲಾರ್ಡ್ (Kieron Pollard) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. (ಪೊಲಾರ್ಡ್ 189 ಪಂದ್ಯಗಳನ್ನು ಆಡಿದ್ದರು, ನರೈನ್ ಈ ಪಂದ್ಯದ ಮೂಲಕ 190ನೇ ಪಂದ್ಯವನ್ನು ಪೂರೈಸಿದರು).
ವಿಶೇಷತೆ: ಸುನಿಲ್ ನರೈನ್ ಅವರು 2012 ರಿಂದಲೂ ಕೇವಲ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪರವಾಗಿಯೇ ಆಡುತ್ತಿರುವುದು ವಿಶೇಷ.]
---------------------------------------------------------------------------------------------------------------------------
2) ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಬಿಡುಗಡೆ ಮಾಡಿದ 'ಪಾವತಿಗಳ ವಿಷನ್ 2028' (Payments Vision 2028) ದಾಖಲೆಯಲ್ಲಿ ಗ್ರಾಹಕರಿಗಾಗಿ ಘೋಷಿಸಿರುವ ಕ್ರಾಂತಿಕಾರಿ ಬದಲಾವಣೆ ಯಾವುದು?
ಉತ್ತರ: ಬ್ಯಾಂಕ್ ಖಾತೆ ಪೋರ್ಟಬಿಲಿಟಿ (Bank Account Portability). ಇದರ ಅಡಿಯಲ್ಲಿ ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಬದಲಾಯಿಸದೆಯೇ ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಸುಲಭವಾಗಿ ಬದಲಾಗಬಹುದು.
[ವಿವರಣೆ : ಏನಿದು ಬ್ಯಾಂಕ್ ಖಾತೆ ಪೋರ್ಟಬಿಲಿಟಿ? : ನಾವೆಲ್ಲರೂ ಹೇಗೆ ನಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಒಂದು ಕಂಪನಿಯಿಂದ (ಉದಾಹರಣೆಗೆ Airtel) ಇನ್ನೊಂದು ಕಂಪನಿಗೆ (Jio) ಬದಲಾಯಿಸುತ್ತೇವೆಯೋ (Mobile Number Portability), ಅದೇ ಮಾದರಿಯಲ್ಲಿ ನಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹಾಗೆಯೇ ಉಳಿಸಿಕೊಂಡು ಬ್ಯಾಂಕನ್ನು ಬದಲಾಯಿಸುವ ವ್ಯವಸ್ಥೆಯೇ 'ಬ್ಯಾಂಕ್ ಖಾತೆ ಪೋರ್ಟಬಿಲಿಟಿ'.
ಪ್ರಸ್ತುತ ವ್ಯವಸ್ಥೆ ಮತ್ತು ತೊಂದರೆ : ಈಗ ನೀವು ಒಂದು ಬ್ಯಾಂಕಿನಿಂದ ಇನ್ನೊಂದು ಬ್ಯಾಂಕಿಗೆ ಹೋಗಬೇಕೆಂದರೆ, ಹಳೆಯ ಬ್ಯಾಂಕಿನ ಖಾತೆಯನ್ನು ಮುಚ್ಚಿ ಹೊಸ ಬ್ಯಾಂಕಿನಲ್ಲಿ ಹೊಸ ಖಾತೆ ತೆರೆಯಬೇಕು. ಆಗ ಹೊಸ ಖಾತೆ ಸಂಖ್ಯೆ ಸಿಗುತ್ತದೆ. ಇದರಿಂದಾಗಿ ನಿಮ್ಮ ಹಳೆಯ ಖಾತೆಗೆ ಲಿಂಕ್ ಆಗರುವ ಸಂಬಳ, EMI ಗಳು, ಗ್ಯಾಸ್ ಸಬ್ಸಿಡಿ ಅಥವಾ ಇತರ ಆಟೋ-ಡೆಬಿಟ್ ಸೌಲಭ್ಯಗಳನ್ನು ಮತ್ತೆ ಹೊಸದಾಗಿ ಅಪ್‌ಡೇಟ್ ಮಾಡಬೇಕಾದ ತೊಂದರೆ ಇರುತ್ತದೆ.
ಹೊಸ ವ್ಯವಸ್ಥೆಯ ಲಾಭಗಳು: ಖಾತೆ ಸಂಖ್ಯೆ ಬದಲಾಗುವುದಿಲ್ಲ: ನಿಮ್ಮ ಹಳೆಯ ಖಾತೆ ಸಂಖ್ಯೆಯೇ ಮುಂದುವರಿಯುತ್ತದೆ. ಕೇವಲ ಸೇವೆ ನೀಡುವ ಬ್ಯಾಂಕ್ ಮಾತ್ರ ಬದಲಾಗುತ್ತದೆ.
ಪಾವತಿಗಳ ವರ್ಗಾವಣೆ ಸುಲಭ : 'ಪೇಮೆಂಟ್ಸ್ ಸ್ವಿಚಿಂಗ್ ಸರ್ವಿಸ್' (PaSS) ಮೂಲಕ ನಿಮ್ಮ ಎಲ್ಲಾ EMI ಗಳು ಮತ್ತು ಸ್ಟ್ಯಾಂಡಿಂಗ್ ಇನ್ಸ್ಟ್ರಕ್ಷನ್‌ಗಳನ್ನು (Standing Instructions) ಹಳೆಯ ಬ್ಯಾಂಕಿನಿಂದ ಹೊಸ ಬ್ಯಾಂಕಿಗೆ ಸುಲಭವಾಗಿ ವರ್ಗಾಯಿಸಬಹುದು.
ಗ್ರಾಹಕರ ಸಬಲೀಕರಣ : ಬ್ಯಾಂಕ್ ಸರಿಯಾದ ಸೇವೆ ನೀಡದಿದ್ದರೆ, ಗ್ರಾಹಕರು ಯಾವುದೇ ತಲೆನೋವಿಲ್ಲದೆ ಬೇರೆ ಬ್ಯಾಂಕಿಗೆ ವಲಸೆ ಹೋಗಬಹುದು. ಇದು ಬ್ಯಾಂಕುಗಳ ನಡುವೆ ಉತ್ತಮ ಸ್ಪರ್ಧೆ ಮತ್ತು ಗುಣಮಟ್ಟದ ಸೇವೆಗೆ ದಾರಿಯಾಗುತ್ತದೆ.
ಹಿನ್ನೆಲೆ : RBI ಈ ಯೋಜನೆಯನ್ನು 'ಪಾವತಿಗಳ ವಿಷನ್ 2028' ರ ಭಾಗವಾಗಿ ಹಮ್ಮಿಕೊಂಡಿದೆ. ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೆಚ್ಚು ಸರಳ, ಸುರಕ್ಷಿತ ಮತ್ತು ಗ್ರಾಹಕ ಸ್ನೇಹಿಯಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.]
-----------------------------------------------------------------------------------------------------------------------------
3) ಭಾರತದ ಮೊದಲ ಕ್ವಾಂಟಮ್ ಕಂಪ್ಯೂಟರ್ ಅನ್ನು ಎಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ?
ಉತ್ತರ: ಅಮರಾವತಿ, ಆಂಧ್ರಪ್ರದೇಶ.
[ವಿವರಣೆ: ಏಪ್ರಿಲ್ 14, 2026 ರಂದು ಆಂಧ್ರಪ್ರದೇಶದ ಅಮರಾವತಿಯಲ್ಲಿ ಭಾರತದ ಮೊಟ್ಟಮೊದಲ ಕ್ವಾಂಟಮ್ ಕಂಪ್ಯೂಟರ್ ಅನ್ನು ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ.]
-----------------------------------------------------------------------------------------------------------------------------
4) ಭಾರತದಲ್ಲಿ ಹೊಸ ಆದಾಯ ತೆರಿಗೆ ನಿಯಮಗಳು ಯಾವ ದಿನಾಂಕದಿಂದ ಜಾರಿಗೆ ಬರುತ್ತವೆ?
ಉತ್ತರ : ಏಪ್ರಿಲ್ 1 (ಪ್ರತಿ ಹಣಕಾಸು ವರ್ಷದ ಆರಂಭದಿಂದ).
[ವಿವರಣೆ : ಭಾರತದಲ್ಲಿ ಹಣಕಾಸು ವರ್ಷವು ಏಪ್ರಿಲ್ 1 ರಿಂದ ಮುಂದಿನ ವರ್ಷದ ಮಾರ್ಚ್ 31ರವರೆಗೆ ಇರುತ್ತದೆ. ಪ್ರತಿ ವರ್ಷ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಆದಾಯ ತೆರಿಗೆ ಸಂಬಂಧಿತ ಬದಲಾವಣೆಗಳು ಸಾಮಾನ್ಯವಾಗಿ ಇದೇ ದಿನಾಂಕದಿಂದ ಜಾರಿಗೆ ಬರುತ್ತವೆ. ಆದ್ದರಿಂದ, ಹೊಸ ತೆರಿಗೆ ನಿಯಮಗಳು ಸಾಮಾನ್ಯವಾಗಿ ಏಪ್ರಿಲ್ 1ರಿಂದಲೇ ಅನ್ವಯವಾಗುತ್ತವೆ.]
-----------------------------------------------------------------------------------------------------------------------------
5) ಇತ್ತೀಚೆಗೆ ಪ್ರಧಾನಿ ಮೋದಿ ಅವರು ಜೈನ ಪರಂಪರೆಗೆ ಸಮರ್ಪಿತವಾದ 'ಸಮ್ರಾಟ್ ಸಂಪ್ರತಿ ಮ್ಯೂಸಿಯಂ' ಅನ್ನು ಎಲ್ಲಿ ಉದ್ಘಾಟಿಸಿದರು?
ಉತ್ತರ : ಗಾಂಧಿನಗರ — ಮಾರ್ಚ್ 31, 2026.
[ವಿವರಣೆ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೈನ ಧರ್ಮದ ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ‘ಸಮ್ರಾಟ್ ಸಂಪ್ರತಿ ಮ್ಯೂಸಿಯಂ’ ಅನ್ನು ಗುಜರಾತ್‌ನ ಗಾಂಧಿನಗರದ ಕೋಬಾ ತೀರ್ಥದಲ್ಲಿ 2026 ಮಾರ್ಚ್ 31ರಂದು, ಮಹಾವೀರ ಜಯಂತಿ ಸಂದರ್ಭದಲ್ಲಿ ಉದ್ಘಾಟಿಸಿದರು. ಈ ಮ್ಯೂಸಿಯಂ ಜೈನ ಸಂಸ್ಕೃತಿ, ಅಹಿಂಸೆ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಿರ್ಮಿಸಲಾಗಿದೆ.]
----------------------------------------------------------------------------------------------------------------------------
6) ಯಾವ ನಗರವನ್ನು ಆಂಧ್ರಪ್ರದೇಶದ ಏಕೈಕ ರಾಜಧಾನಿಯನ್ನಾಗಿ ಘೋಷಿಸುವ ವಿಧೇಯಕವನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾಗಿದೆ?
ಉತ್ತರ: ಅಮರಾವತಿ.
[ವಿವರಣೆ: ಆಂಧ್ರಪ್ರದೇಶದ ರಾಜಧಾನಿ ಗೊಂದಲಕ್ಕೆ ತೆರೆ ಎಳೆಯಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಅಮರಾವತಿಯನ್ನು ಅಧಿಕೃತವಾಗಿ ಅಭಿವೃದ್ಧಿಪಡಿಸುವ ಪ್ರಕ್ರಿಯೆ ಚುರುಕುಗೊಂಡಿದೆ.]
-----------------------------------------------------------------------------------------------------------------------------
7) ಭಾರತದಲ್ಲಿ ಪ್ರತಿ ವರ್ಷ ಯಾವ ದಿನಾಂಕದಂದು ವಾಣಿಜ್ಯ ಬ್ಯಾಂಕ್‌ಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯಕ್ಕಾಗಿ ಸಾರ್ವಜನಿಕ ವ್ಯವಹಾರ ಇರುವುದಿಲ್ಲ?
ಉತ್ತರ: ಏಪ್ರಿಲ್ 1.
[ವಿವರಣೆ: ಏಪ್ರಿಲ್ 1 ಹಣಕಾಸು ವರ್ಷದ ಆರಂಭದ ದಿನವಾಗಿದ್ದು, ಬ್ಯಾಂಕ್‌ಗಳು ತಮ್ಮ ಹಿಂದಿನ ವರ್ಷದ ಲೆಕ್ಕಪತ್ರಗಳನ್ನು ಪೂರ್ಣಗೊಳಿಸಲು ರಜೆ ಘೋಷಿಸುತ್ತವೆ.ಈ ದಿನವನ್ನು “Annual Closing Day” ಎಂದು ಕರೆಯಲಾಗುತ್ತದೆ.
ಈ ಕಾರಣದಿಂದ ಸಾರ್ವಜನಿಕರಿಗೆ ಬ್ಯಾಂಕ್ ಸೇವೆಗಳು ಲಭ್ಯವಿರುವುದಿಲ್ಲ.
ಇದು ಸಾಮಾನ್ಯ ಸಾರ್ವಜನಿಕ ರಜೆಯಲ್ಲ, ಆದರೆ ಬ್ಯಾಂಕ್‌ಗಳ ಆಂತರಿಕ ಕಾರ್ಯಗಳಿಗಾಗಿ ಮಾತ್ರ ಮೀಸಲಾಗಿರುವ ದಿನ]
----------------------------------------------------------------------------------------------------------------------------
8) ಭಾರತ ಸರ್ಕಾರವು ಯಾವ ಉದ್ದೇಶಕ್ಕಾಗಿ ಏಪ್ರಿಲ್ 2026 ರಿಂದ ಚೀನಾ ಮೂಲದ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ನಿಷೇಧಿಸಲು ನಿರ್ಧರಿಸಿದೆ?
ಉತ್ತರ: ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಸುರಕ್ಷತೆಯನ್ನು (Data Security) ಕಾಪಾಡಲು.
[ವಿವರಣೆ : ಹೊಸ ನಿಯಮ: ಇನ್ನು ಮುಂದೆ ಸರ್ಕಾರಿ ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೇವಲ 'ವಿಶ್ವಾಸಾರ್ಹ ಮೂಲಗಳಿಂದ' (Trusted Sources) ಮಾತ್ರ ಕ್ಯಾಮೆರಾಗಳನ್ನು ಖರೀದಿಸಬೇಕು.
ಮಾನದಂಡ: ಪ್ರತಿಯೊಂದು ಕ್ಯಾಮೆರಾ STQC ಪ್ರಮಾಣೀಕರಣ ಹೊಂದಿರಬೇಕು ಮತ್ತು ಅದರಲ್ಲಿ ಬಳಸುವ ಚಿಪ್ ಅಥವಾ ಸಾಫ್ಟ್‌ವೇರ್ ಸುರಕ್ಷಿತವಾಗಿರಬೇಕು.
ಸಚಿವಾಲಯ: ಇದನ್ನು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಜಾರಿಗೆ ತಂದಿದೆ.]
-----------------------------------------------------------------------------------------------------------------------------
ರಾಜ್ಯ ಸುದ್ದಿಗಳು :
- ಆಸ್ತಿ ಮಾರ್ಗಸೂಚಿ ದರ ಏರಿಕೆ: ಇಂದಿನಿಂದ (ಏಪ್ರಿಲ್ 1) ರಾಜ್ಯಾದ್ಯಂತ ಆಸ್ತಿಗಳ ಮಾರ್ಗಸೂಚಿ ದರ (Guidance Value) ಸುಮಾರು ಶೇ. 10 ರಿಂದ 20 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ, ಇದರಿಂದ ಮನೆ ಮತ್ತು ನಿವೇಶನ ಖರೀದಿ ದುಬಾರಿಯಾಗಲಿದೆ.
----------------------------------------------------------------------------------------------------------------------------
ರಾಷ್ಟ್ರೀಯ ಸುದ್ದಿಗಳು :
- ದಶಕಗಳಿಂದ ದೇಶದ ಆಂತರಿಕ ಭದ್ರತೆಗೆ ಸವಾಲಾಗಿದ್ದ ನಕ್ಸಲಿಸಂ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ನಿಗದಿತ ಸಮಯಕ್ಕಿಂತ ಮೊದಲೇ ಸಾಧಿಸಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2026ರ ಮಾರ್ಚ್ 30ರಂದು ಸಂಸತ್ತಿನಲ್ಲಿ "ಭಾರತವು ಈಗ ಅಧಿಕೃತವಾಗಿ ನಕ್ಸಲ್ ಮುಕ್ತ ದೇಶ" ಎಂದು ಐತಿಹಾಸಿಕ ಘೋಷಣೆ ಮಾಡಿದ್ದಾರೆ.
- ಒಡಿಶಾ ಸಂಸ್ಥಾಪನಾ ದಿನ (ಉತ್ಕಲ ದಿವಸ) : ಏಪ್ರಿಲ್ 1, 1936 ರಂದು ಭಾಷೆಯ ಆಧಾರದ ಮೇಲೆ ರಚನೆಯಾದ ಭಾರತದ ಮೊದಲ ಪ್ರಾಂತ್ಯ ಎಂಬ ಹೆಗ್ಗಳಿಕೆಯ ಒಡಿಶಾದ ಇತಿಹಾಸ, ಸಂಸ್ಕೃತಿ, ಜಗನ್ನಾಥ ದೇವಾಲಯದಂತಹ ಪ್ರೇಕ್ಷಣೀಯ ಸ್ಥಳಗಳು ಮತ್ತು ಅಶೋಕ ಚಕ್ರವರ್ತಿಯ ಜೀವನವನ್ನೇ ಬದಲಿಸಿದ ಕಳಿಂಗ ಯುದ್ಧದಂತಹ ಮಹತ್ವದ ಐತಿಹಾಸಿಕ ಘಟನೆಗಳನ್ನು ಈ ಲೇಖನವು ವಿವರಿಸುತ್ತದೆ.
- ರಾಷ್ಟ್ರೀಯ ಜನಗಣತಿ 2027: ಡಿಜಿಟಲ್ ಜನಗಣತಿ ಮತ್ತು ಸ್ವಯಂ ಗಣತಿಗೆ ಅವಕಾಶ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಜನಗಣತಿಯು ಏಪ್ರಿಲ್ 1 ರಿಂದ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಆರಂಭವಾಗುತ್ತಿದ್ದು, ಏಪ್ರಿಲ್ 1 ರಿಂದ 15 ರವರೆಗೆ ಸಾರ್ವಜನಿಕರು se.census.gov.in ಪೋರ್ಟಲ್ ಮೂಲಕ ಮನೆಯಲ್ಲೇ ಕುಳಿತು ತಮ್ಮ ಮಾಹಿತಿ ದಾಖಲಿಸಲು (ಸ್ವಯಂ ಗಣತಿ) ಅವಕಾಶ ಕಲ್ಪಿಸಲಾಗಿದೆ; ನಂತರ ಏಪ್ರಿಲ್ 16 ರಿಂದ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಈ ಮಾಹಿತಿಯನ್ನು ದೃಢೀಕರಿಸಲಿದ್ದಾರೆ.
-----------------------------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು :
- ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಸರಿದೂಗಿಸಲು ಮತ್ತು ಸಾರ್ವಜನಿಕರ ಅಡುಗೆ ಹಾಗೂ ಬೆಳಕಿನ ಅಗತ್ಯಗಳನ್ನು ಪೂರೈಸಲು, ಈ ಹಿಂದೆ 'ಸೀಮೆಎಣ್ಣೆ ಮುಕ್ತ' ಎಂದು ಘೋಷಿಸಲಾಗಿದ್ದ ರಾಜ್ಯಗಳು ಸೇರಿದಂತೆ ಒಟ್ಟು 21 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಂದಿನ 60 ದಿನಗಳ ಕಾಲ ಪಡಿತರ ವ್ಯವಸ್ಥೆಯಡಿ (PDS) ತಾತ್ಕಾಲಿಕವಾಗಿ ಸೀಮೆಎಣ್ಣೆ ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
-----------------------------------------------------------------------------------------------------------------------------


No comments:
Post a Comment