Pra-gk-daily, ದಿನನಿತ್ಯದ ಪ್ರಚಲಿತ ವಿದ್ಯಮಾನಗಳು, daily current affairs, General Studies for KAS PSI PC FDA SDA SSC-GD RRB-NTPC & RRB GROUP D EXAMS, Current affairs in kannada, the news of the day is told in short

ದಿನನಿತ್ಯದ ಪ್ರಚಲಿತ ವಿದ್ಯಮಾನಗಳು

https://youtube.com/@praveensindhoor?si=E2Bz_69H3ZmTwNA4

Breaking

Search

Friday, 6 March 2026

07 March 2026 Current Affairs and Karnataka Budget 2026-27


 1) ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಂಡಿಸಿದ್ದು ಅವರ ಎಷ್ಟನೇ ಬಜೆಟ್?

ಉತ್ತರ:- 17ನೇ ಬಜೆಟ್

ವಿವರಣೆ:- ಇದು ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ಮಂಡಿಸಿದ ಅತಿ ಹೆಚ್ಚು ಬಜೆಟ್‌ಗಳ ದಾಖಲೆಯಾಗಿದೆ.


2) ಕರ್ನಾಟಕ ಬಜೆಟ್ 2026 ರಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಯಾವುದನ್ನು ನಿಷೇಧಿಸಲು ಪ್ರಸ್ತಾಪಿಸಲಾಗಿದೆ?

ಉತ್ತರ:- ಸಾಮಾಜಿಕ ಜಾಲತಾಣಗಳು (Social Media)

ವಿವರಣೆ:- ಮಕ್ಕಳ ಮಾನಸಿಕ ಆರೋಗ್ಯ ಮತ್ತು ಕಲಿಕೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮ ತಡೆಯಲು ಈ ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದೆ


3) ‘ಸ್ವಚ್ಛ ವಾಯು ಸಮೀಕ್ಷೆ 2025’ ರಲ್ಲಿ ಮಿಲಿಯನ್ ಪ್ಲಸ್ ನಗರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದ ನಗರ ಯಾವುದು?

ಉತ್ತರ :- ಇಂದೋರ್

ವಿವರಣೆ :- ವಾಯು ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಸಂರಕ್ಷಣೆಯಲ್ಲಿ ಇಂದೋರ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ.


4) ಆಂಧ್ರ ಪ್ರದೇಶ ಸರ್ಕಾರವು 2ನೇ ಮಗು ಪಡೆಯುವ ದಂಪತಿಗೆ ಎಷ್ಟು ಪ್ರೋತ್ಸಾಹಧನ ಘೋಷಿಸಿದೆ?

ಉತ್ತರ :- ₹ 25,000

ವಿವರಣೆ :- ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರು ‘ರಾಜ್ಯದಲ್ಲಿ ಪ್ರಸ್ತುತ ಒಟ್ಟು ಫಲವಂತಿಕೆ ದರ 1.5 ರಷ್ಟಿದೆ. ಇದು ನಿಗದಿತ ಮಟ್ಟಕ್ಕಿಂತ ಕಡಿಮೆಯಿದೆ. ಇದನ್ನು 2.1 ಕ್ಕೆ ಏರಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.


5) ಇತ್ತೀಚೆಗೆ ಹೈಕೋರ್ಟ್ ಆದೇಶದಂತೆ ಯಾವ ಮೀಸಲು ಅರಣ್ಯವನ್ನು ಸಂಪೂರ್ಣವಾಗಿ ಅಭಯಾರಣ್ಯವನ್ನಾಗಿ ಮಾಡಲಾಗುತ್ತಿದೆ?

ಉತ್ತರ: ಕಪ್ಪತ್ತಗುಡ್ಡ (ಗದಗ ಜಿಲ್ಲೆ)

ವಿವರಣೆ: ಹಸಿರಿನ ಸಂರಕ್ಷಣೆಗಾಗಿ ಇಡೀ ಮೀಸಲು ಅರಣ್ಯವನ್ನು ಅಭಯಾರಣ್ಯ ವ್ಯಾಪ್ತಿಗೆ ತರಲು ಸೂಚಿಸಲಾಗಿದೆ.


6) IBM ಸಂಸ್ಥೆಯು ತನ್ನ ಮೊದಲ 'ಸಾಫ್ಟ್‌ವೇರ್ ಇನ್ಫ್ರಾಸ್ಟ್ರಕ್ಚರ್ ಇನ್ನೋವೇಶನ್ ಸೆಂಟರ್' ಅನ್ನು ಎಲ್ಲಿ ಪ್ರಾರಂಭಿಸಿದೆ?

ಉತ್ತರ: ಬೆಂಗಳೂರು

ವಿವರಣೆ: ಇದು ಭಾರತದಲ್ಲಿ ಎಐ (AI) ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲಿದೆ.


7) ಕರ್ನಾಟಕ ಸರ್ಕಾರದ 2026-27ರ ಬಜೆಟ್‌ನ ಗಾತ್ರ ಎಷ್ಟು?

ಉತ್ತರ: ₹ 4,48,004 ಕೋಟಿ.



8) ನೀತಿ ಆಯೋಗದ (NITI Aayog) ನೂತನ ಸಿಇಒ (CEO) ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡವರು ಯಾರು?

ಉತ್ತರ: ನಿಧಿ ಚಿಬ್ಬರ್ (Nidhi Chhibber)

ವಿವರಣೆ: BVR ಸುಬ್ರಹ್ಮಣ್ಯಂ ಅವರ ಅಧಿಕಾರಾವಧಿ ಮುಗಿದ ನಂತರ ಇವರು ನೇಮಕಗೊಂಡಿದ್ದಾರೆ.


9) ಇತ್ತೀಚೆಗೆ ಯಾವ ನಗರದಲ್ಲಿ ಚರಂಡಿ ಸ್ವಚ್ಛಗೊಳಿಸಲು 'G-SPIDER' ಎಂಬ AI ರೋಬೋಟ್ ನಿಯೋಜಿಸಲಾಗಿದೆ?

​ಉತ್ತರ: ತಿರುವನಂತಪುರಂ

​ವಿವರಣೆ: ಇದು ಮ್ಯಾನ್‌ಹೋಲ್ ಚರಂಡಿ ಸ್ವಚ್ಛತೆಯನ್ನು ತಪ್ಪಿಸುವ ಸ್ವಚ್ಛ ಭಾರತ ಮಿಷನ್ ಭಾಗವಾಗಿದೆ.


​10) 'ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2026' ರ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?

​ಉತ್ತರ: ಮುಖೇಶ್ ಅಂಬಾನಿ

​ವಿವರಣೆ: ₹ 9.8 ಲಕ್ಷ ಕೋಟಿ ಆಸ್ತಿಯೊಂದಿಗೆ ಅವರು ಅಗ್ರಸ್ಥಾನದಲ್ಲಿದ್ದಾರೆ.


​11) ಇತ್ತೀಚಿನ ರಾಜ್ಯಪಾಲರ ಬದಲಾವಣೆಯಲ್ಲಿ ತಮಿಳುನಾಡಿನ ಹೆಚ್ಚುವರಿ ಉಸ್ತುವಾರಿ ಪಡೆದವರು ಯಾರು?

​ಉತ್ತರ: ರಾಜೇಂದ್ರ ವಿಶ್ವನಾಥ್ (ಕೇರಳ ರಾಜ್ಯಪಾಲರು)


​12) ದೆಹಲಿಯ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಯಾರು ನೇಮಕಗೊಂಡಿದ್ದಾರೆ?

​ಉತ್ತರ: ತರಂಜಿತ್ ಸಿಂಗ್ ಸಂಧು



ಕರ್ನಾಟಕ ಬಜೆಟ್ 2026-27 ರ ಬಗ್ಗೆ ಮಾಹಿತಿ :

ಮಂಡಿಸಿದವರು: ಸಿ ಎಂ ಸಿದ್ದರಾಮಯ್ಯ (ಇದು ಇವರ 17ನೇ ದಾಖಲೆಯ ಬಜೆಟ್ ಆಗಿದೆ).

ಒಟ್ಟು ಬಜೆಟ್ ಗಾತ್ರ: ₹ 4,48,004 ಕೋಟಿ.

[ವಿಶೇಷ ಟಿಪ್ಪಣಿ: ಕಳೆದ ವರ್ಷದ ಬಜೆಟ್ ಗಾತ್ರ ₹ 4,09,549 ಇತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು ₹ 38,455 ಕೋಟಿ ಹೆಚ್ಚಾಗಿದೆ (ಶೇಕಡಾವಾರು ಸುಮಾರು 9% ಬಜೆಟ್ ಹೆಚ್ಚಳವಾಗಿದೆ).]


ವೆಚ್ಚದ ವಿಭಾಗ (Expenditure Breakdown):

ವಿಭಾಗ (Category)                                       ಮೊತ್ತ (₹ ಕೋಟಿಗಳಲ್ಲಿ) ಶೇಕಡಾವಾರು (%)

Revenue Expenditure (ಆದಾಯ ವೆಚ್ಚ)         3,38,007                                  75%

Capital Expenditure (ಬಂಡವಾಳ ವೆಚ್ಚ)        74,682                                     17%

Loan Repayment (ಸಾಲ ಮರುಪಾವತಿ)           35,316                                     8%

ಒಟ್ಟು ವೆಚ್ಚ (Total Expenditure)                   4,48,004                                   100%


ವಿವರಣೆಗಳು:

Revenue Expenditure (ಆದಾಯ ವೆಚ್ಚ): ಸರ್ಕಾರ ನಡೆಸಲು, ವೇತನ, ಪೆನ್ಷನ್, ಕಲ್ಯಾಣ ಯೋಜನೆಗಳು ಮತ್ತು ಬಡತನ ನಿವಾರಣೆ ಇತ್ಯಾದಿಗಳಿಗೆ ಬಳಸುವ ವೆಚ್ಚ.

Capital Expenditure (ಬಂಡವಾಳ ವೆಚ್ಚ): ರಸ್ತೆ, ಕಟ್ಟಡ, ಸೇತುವೆ, ನೀರಾವರಿ ಮತ್ತು IT/AI ಮೂಲಸೌಕರ್ಯಗಳ (Infrastructure) ಅಭಿವೃದ್ಧಿಗಾಗಿ ಬಳಸುವ ವೆಚ್ಚ.

Loan Repayment (ಸಾಲ ಮರುಪಾವತಿ): ಮಾಡಿರೋ ಹಳೆ ಸಾಲಕ್ಕೆ ಕೊಟ್ಟಿರೋ ಹಣ.



2026-27 ಕರ್ನಾಟಕ ಬಜೆಟ್ - ಕ್ಷೇತ್ರವಾರು ಹಂಚಿಕೆ:

​1. ಶಿಕ್ಷಣ ಕ್ಷೇತ್ರ (Education):

* ​ಶಿಕ್ಷಣಕ್ಕೆ ಒಟ್ಟಾರೆ (Education, Higher Education, Teachers, Infrastructure) ಗುಣಮಟ್ಟ ಸುಧಾರಣೆ, ಖಾಲಿ ಹುದ್ದೆಗಳ ಭರ್ತಿ, ಹೊಸ ಶಾಲೆಗಳನ್ನು ಒಳಗೊಂಡಂತೆ ಸುಮಾರು ₹ 47,224 ಕೋಟಿ ಹಂಚಿಕೆ ಮಾಡಲಾಗಿದೆ.

* ​ಶಿಕ್ಷಣ ಕ್ಷೇತ್ರಕ್ಕೆ ಗರಿಷ್ಠ ಮೊತ್ತ ನೀಡಲಾಗಿದೆ.

​2. ಆರೋಗ್ಯ ಇಲಾಖೆ (Health):

​* ಆರೋಗ್ಯ ಇಲಾಖೆಗೆ ಸುಮಾರು ₹ 17,817 ಕೋಟಿ ನೀಡಲಾಗಿದೆ.

* ​ಆಸ್ಪತ್ರೆಗಳು, ವೈದ್ಯಕೀಯ ಸಲಕರಣೆ ಮತ್ತು ಜನರ ಆರೋಗ್ಯ ಸೇವೆಗಳಿಗಾಗಿ ಈ ಮೊತ್ತ ಮೀಸಲಿಡಲಾಗಿದೆ.

​3. ಮಹಿಳಾ ಮತ್ತು ಮಕ್ಕಳ ಕಲ್ಯಾಣ (Women and Child Welfare):

* ​ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ₹ 34,929 ಕೋಟಿ ಹಂಚಿಕೆ ಮಾಡಲಾಗಿದೆ.

* ​ಮಹಿಳಾ ಆಧಾರಿತ ಯೋಜನೆಗಳು, ಮಕ್ಕಳ ಪೋಷಣೆ, 'ಗೃಹಲಕ್ಷ್ಮಿ' ಮತ್ತು 'ಶಕ್ತಿ' ಯೋಜನೆಗಳನ್ನು ಇದು ಒಳಗೊಂಡಿದೆ.

​4. ಇಂಧನ (Energy):

* ​ಇಂಧನ ಇಲಾಖೆಗೆ ₹ 29,947 ಕೋಟಿ ನೀಡಲಾಗಿದೆ.

​* ವಿದ್ಯುತ್ ಉತ್ಪಾದನೆ, ವಿತರಣಾ ವ್ಯವಸ್ಥೆ ಮತ್ತು ಶಕ್ತಿ ಸಂಪರ್ಕ ಯೋಜನೆಗಳಿಗಾಗಿ ಈ ಹಂಚಿಕೆ ಮಾಡಲಾಗಿದೆ.

​5. ಗ್ರಾಮೀಣಾಭಿವೃದ್ಧಿ (Rural Development);

* ​ಗ್ರಾಮೀಣಾಭಿವೃದ್ಧಿಗೆ ₹ 26,559 ಕೋಟಿ ಮೀಸಲಿರಿಸಲಾಗಿದೆ.

​* ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಉದ್ಯೋಗ ಮತ್ತು ಮೂಲಸೌಕರ್ಯಕ್ಕಾಗಿ ಈ ಮೊತ್ತ ಬಳಸಲಾಗುವುದು.

6. ಸಾರ್ವಜನಿಕ ಕಾರ್ಯ ಮತ್ತು ಸಾರಿಗೆ (Public Works & Transport):

* ಈ ಕ್ಷೇತ್ರಕ್ಕೆ ₹ 23,100 ಕೋಟಿ ಹಂಚಿಕೆ ಮಾಡಲಾಗಿದೆ.

* ರಸ್ತೆ ನಿರ್ಮಾಣ, ಸೇತುವೆಗಳು ಮತ್ತು ಸಾರಿಗೆ ಮೂಲಸೌಕರ್ಯಕ್ಕಾಗಿ ಈ ಮೊತ್ತ ಮೀಸಲಿದೆ.

7. ನೀರಾವರಿ (Irrigation / Water Resources):

* ನೀರಾವರಿ ಕ್ಷೇತ್ರಕ್ಕೆ ₹ 22,436 ಕೋಟಿ ನೀಡಲಾಗಿದೆ.

* ಕೃಷಿ ನೀರಾವರಿ, ತೋಟಗಾರಿಕೆ ನೀರಿನ ವ್ಯವಸ್ಥೆ ಮತ್ತು ಬಲವಾದ ಕೃಷಿ ಬೆಂಬಲಕ್ಕಾಗಿ ಈ ಹಣ ಬಳಕೆಯಾಗಲಿದೆ.

8. ನಗರಾಭಿವೃದ್ಧಿ ಮತ್ತು ವಸತಿ (Urban Development & Housing):

* ಈ ವಿಭಾಗಕ್ಕೆ ₹ 22,203 ಕೋಟಿ ಹಂಚಿಕೆ ಮಾಡಲಾಗಿದೆ.

* ನಗರ ಯೋಜನೆಗಳು, ಗೃಹ ಯೋಜನೆ ಮತ್ತು ನಗರದ ಮೂಲಸೌಕರ್ಯ ಅಭಿವೃದ್ಧಿ ಇದರ ಉದ್ದೇಶವಾಗಿದೆ.

9. ಕಂದಾಯ ಇಲಾಖೆ (Revenue Department):

* ಕಂದಾಯ ಇಲಾಖೆಗೆ ₹ 19,843 ಕೋಟಿ ನೀಡಲಾಗಿದೆ.

* ಆಡಳಿತಾತ್ಮಕ ವೆಚ್ಚ, ತೆರಿಗೆ ಸಂಗ್ರಹ ಮತ್ತು ಆಡಳಿತ ವ್ಯವಸ್ಥೆಯ ನಿರ್ವಹಣೆಗೆ ಈ ಮೊತ್ತ ಬಳಕೆಯಾಗಲಿದೆ.

10. ಸಮಾಜ ಕಲ್ಯಾಣ (Social Welfare):

* ಸಮಾಜ ಕಲ್ಯಾಣ ಇಲಾಖೆಗೆ ₹ 18,612 ಕೋಟಿ ಹಂಚಿಕೆ ಮಾಡಲಾಗಿದೆ.

* ಹಿಂದುಳಿದ ವರ್ಗಗಳ ಹಿತದೃಷ್ಟಿಯ ಯೋಜನೆಗಳು, ಸಬ್ಸಿಡಿ ಮತ್ತು ನೇರ ನೆರವು ನೀಡಲು ಈ ಮೊತ್ತ ಮೀಸಲಿದೆ.

11. ಕೃಷಿ ಮತ್ತು ತೋಟಗಾರಿಕೆ (Agriculture & Horticulture):

* ​₹ 8,373 ಕೋಟಿ

* ​ಕೃಷಿ ಬೆಂಬಲ, ತೋಟಗಾರಿಕೆ, ಕೃಷಿ ಪೂರಕ ಯೋಜನೆಗಳು.

1​2. ಆಹಾರ ಮತ್ತು ನಾಗರಿಕ ಸರಬರಾಜು (Food & Civil Supplies):

​* ₹ 7,942 ಕೋಟಿ

* ​ಆಹಾರ ಭದ್ರತೆ, ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ (PDS).

​13. ಪಶುಸಂಗೋಪನೆ ಮತ್ತು ಮೀನುಗಾರಿಕೆ (Animal Husbandry & Fisheries):

* ​₹ 4,084 ಕೋಟಿ

* ​ಪಶುಚಿಕಿತ್ಸೆ, ಮೀನುಗಾರಿಕೆ ಅಭಿವೃದ್ಧಿ.

​14. ಗೃಹ ಇಲಾಖೆ (Home Department):

​₹ 11,424 ಕೋಟಿ

​ಪೊಲೀಸ್, ಕಾನೂನು-ಸುವ್ಯವಸ್ಥೆ, ಸಾರ್ವಜನಿಕ ಭದ್ರತೆ

15. ಇತ್ಯಾದಿ


ಗ್ಯಾರಂಟಿ ಯೋಜನೆಗಳ ಬಜೆಟ್ ಹಂಚಿಕೆ ಮಾಹಿತಿ:

1. ಗೃಹಲಕ್ಷ್ಮಿ ಯೋಜನೆ (Gruha Lakshmi):

* ಈ ವರ್ಷದ ಬಜೆಟ್‌ನಲ್ಲಿ ಇದಕ್ಕೆ ₹ 28,608 ಕೋಟಿ ಮೀಸಲಿಡಲಾಗಿದೆ. * [ನಿಯಮ: ಮೃತ ಫಲಾನುಭವಿಗಳ ಹೆಸರಿನಲ್ಲಿ ಹಣ ದುರುಪಯೋಗವಾಗುವುದನ್ನು ತಡೆಯಲು ಈಗ 'ಜೀವಿತ ಪ್ರಮಾಣಪತ್ರ' (Life Certificate) ಕಡ್ಡಾಯಗೊಳಿಸಲಾಗಿದೆ.] * ಇದು ಸರ್ಕಾರದ ಅತಿ ದೊಡ್ಡ ಆರ್ಥಿಕ ಹೊರೆಯಾಗಿದೆ.

2. ಗೃಹ ಜ್ಯೋತಿ ಯೋಜನೆ (Gruha Jyothi): * ಇದಕ್ಕೆ 10,578 ಕೋಟಿ ಮೀಸಲಿಡಲಾಗಿದೆ. [ಗಮನಿಸಿ: ಇದು ಕೇವಲ ಮನೆ ಬಳಕೆಗಾಗಿ ಮಾತ್ರ ಅನ್ವಯಿಸುತ್ತದೆ, ವಾಣಿಜ್ಯ ಉದ್ದೇಶಕ್ಕಲ್ಲ.]

3. ಶಕ್ತಿ ಯೋಜನೆ (Shakti Scheme): *ಇದು ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಇರುವ ಯೋಜನೆ. *ಇದಕ್ಕೆ 5,300 ಕೋಟಿ ಮೀಸಲಿಡಲಾಗಿದೆ.

4. ಅನ್ನ ಭಾಗ್ಯ ಯೋಜನೆ ​* ಹಸಿವು ಮುಕ್ತ ಕರ್ನಾಟಕಕ್ಕಾಗಿ ಜಾರಿಗೆ ತಂದ ಯೋಜನೆ. ​* ಇದಕ್ಕೆ ₹ 6200 ಕೋಟಿ ಅನುದಾನ ನೀಡಲಾಗಿದೆ. * ​ಈ ವರ್ಷದಿಂದ ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ ಹಣದ ಬದಲಿಗೆ 'ಇಂದಿರಾ ಆಹಾರ ಕಿಟ್' (Indira Food Kit) ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಕಿಟ್‌ನಲ್ಲಿ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಇರುತ್ತದೆ. ​

ಯುವ ನಿಧಿ (Yuva Nidhi) ಬಗ್ಗೆ ಯಾವುದೇ ಮಾಹಿತಿ ಇಲ್ಲ


ಹಣಕಾಸು ನಿರ್ವಹಣೆ ಕುರಿತು ಕೆಲವು ಪ್ರಶ್ನೆಗಳು:

​ಪ್ರಶ್ನೆ 1: ಕರ್ನಾಟಕ ಬಜೆಟ್ 2026-27ರ ಅನ್ವಯ, ರಾಜ್ಯದ ಹಣಕಾಸು ಕೊರತೆಯು (Fiscal Deficit) GSDP ಯ ಶೇಕಡಾ ಎಷ್ಟಿದೆ? ​ಉತ್ತರ: 2.95%

[ವಿವರಣೆ: ಇದು KFR ಕಾಯ್ದೆಯಡಿ ನಿಗದಿಪಡಿಸಿದ 3% ಮಿತಿಯ ಒಳಗಿದೆ. ಅಂದರೆ ಸರ್ಕಾರವು ನಿಯಮದ ಚೌಕಟ್ಟಿನಲ್ಲೇ ಸಾಲವನ್ನು ನಿರ್ವಹಿಸುತ್ತಿದೆ.]


​ಪ್ರಶ್ನೆ 2: ರಾಜ್ಯದ ಒಟ್ಟು ಬಾಕಿ ಇರುವ ಸಾಲವು (Total Outstanding Debt) GSDP ಯ ಎಷ್ಟಿದೆ? ​ಉತ್ತರ: 22.09%

​[ವಿವರಣೆ: ಶಾಸನಬದ್ಧ ಮಿತಿಯು 25% ರಷ್ಟಿದೆ. ಪ್ರಸ್ತುತ 22.09% ಇರುವುದು ರಾಜ್ಯವು ಸಾಲದ ಸುಳಿಗೆ ಸಿಲುಕಿಲ್ಲ ಎಂಬುದನ್ನು ತೋರಿಸುತ್ತದೆ, ಆದರೆ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಪ್ರಮಾಣ ಏರುತ್ತಿದೆ].


​ಪ್ರಶ್ನೆ 3: 'ರಾಜಸ್ವ ಉಳಿಕೆ' (Revenue Surplus) ಮತ್ತು 'ರಾಜಸ್ವ ಕೊರತೆ' (Revenue Deficit) ನಡುವಿನ ವ್ಯತ್ಯಾಸವೇನು? ​ಉತ್ತರ: ಆದಾಯವು ವೆಚ್ಚಕ್ಕಿಂತ ಹೆಚ್ಚಿದ್ದರೆ ಅದು 'ಉಳಿಕೆ'. ವೆಚ್ಚವು ಆದಾಯಕ್ಕಿಂತ ಹೆಚ್ಚಿದ್ದರೆ ಅದು 'ಕೊರತೆ'.

​[ವಿವರಣೆ: ಕರ್ನಾಟಕವು ಈ ಹಿಂದೆ ರಾಜಸ್ವ ಉಳಿಕೆ ಹೊಂದಿದ್ದ ರಾಜ್ಯವಾಗಿತ್ತು. ಆದರೆ ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಪ್ರಸ್ತುತ ₹22,957 ಕೋಟಿ ರಾಜಸ್ವ ಕೊರತೆಯನ್ನು ಅನುಭವಿಸುತ್ತಿದೆ.]


​ಪ್ರಶ್ನೆ 4: ರಾಜ್ಯದ ಸ್ವಂತ ತೆರಿಗೆ ಆದಾಯದಲ್ಲಿ (SOTR) ಸಿಂಹಪಾಲು ಯಾವುದರದ್ದಾಗಿದೆ? ​ಉತ್ತರ: ವಾಣಿಜ್ಯ ತೆರಿಗೆಗಳು (GST ಸೇರಿದಂತೆ). ​

[ವಿವರಣೆ: ರಾಜ್ಯದ ಆರ್ಥಿಕತೆಗೆ GST ಅತಿ ದೊಡ್ಡ ಶಕ್ತಿಯಾಗಿದೆ. ಇದರ ನಂತರದ ಸ್ಥಾನದಲ್ಲಿ ಅಬಕಾರಿ ಸುಂಕ (Excise) ಮತ್ತು ಮೋಟಾರು ವಾಹನ ತೆರಿಗೆಗಳಿವೆ.]


​ಪ್ರಶ್ನೆ 5 :ಬಜೆಟ್‌ನಲ್ಲಿ 'ಐದು ಗ್ಯಾರಂಟಿ' ಯೋಜನೆಗಳಿಗಾಗಿ ಒಟ್ಟು ಎಷ್ಟು ಹಣವನ್ನು ಮೀಸಲಿಡಲಾಗಿದೆ? ಉತ್ತರ: ₹50,686 ಕೋಟಿ.

[ವಿವರಣೆ: ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ ಮತ್ತು ಅನ್ನಭಾಗ್ಯ ಯೋಜನೆಗಳ ಸತತ ಅನುಷ್ಠಾನಕ್ಕಾಗಿ ಈ ಮೊತ್ತ ಮೀಸಲಿದೆ.]


ಪ್ರಶ್ನೆ 6: ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲಾಗಿ ನೀಡಲು ಉದ್ದೇಶಿಸಿರುವ ಹೊಸ ಕಿಟ್ ಯಾವುದು? ಉತ್ತರ: 'ಇಂದಿರಾ ಕಿಟ್' (Indira Food Kit).

[ವಿವರಣೆ: ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಅವಶ್ಯಕ ಆಹಾರ ಪದಾರ್ಥಗಳನ್ನು ಒಳಗೊಂಡ ಕಿಟ್ ನೀಡಲು ಸರ್ಕಾರ ನಿರ್ಧರಿಸಿದೆ.]


ಪ್ರಶ್ನೆ 7: ರಾಜ್ಯದ ಹಣಕಾಸು ಕೊರತೆಯು (Fiscal Deficit) ಜಿ.ಎಸ್.ಡಿ.ಪಿ (GSDP) ಯ ಎಷ್ಟಿದೆ? ಉತ್ತರ: 2.95%. [ವಿವರಣೆ: ಇದು ಕರ್ನಾಟಕ ಹಣಕಾಸು ಹೊಣೆಗಾರಿಕೆ ಕಾಯ್ದೆಯ (KFR Act) 3% ಮಿತಿಯ ಒಳಗಿದೆ.]


ಪ್ರಶ್ನೆ 8: ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗಾಗಿ ಘೋಷಿಸಲಾದ ವಿಶೇಷ ಯೋಜನೆಯ ಹೆಸರೇನು? ಉತ್ತರ: 'ಬ್ರ್ಯಾಂಡ್ ಬೆಂಗಳೂರು' (Brand Bengaluru). [ವಿವರಣೆ: ನಗರದ ರಸ್ತೆಗಳು, ಕಸ ನಿರ್ವಹಣೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ₹7,000 ಕೋಟಿ ಅನುದಾನ ನೀಡಲಾಗಿದೆ.]

ಪ್ರಶ್ನೆ 9: ರಾಜ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಯಾವ ವಿಷಯದ ಮೇಲೆ ನಿಷೇಧ ಹೇರಲು ಕಾನೂನು ತರಲು ಉದ್ದೇಶಿಸಿದೆ? ಉತ್ತರ: ಸಾಮಾಜಿಕ ಜಾಲತಾಣಗಳ (Social Media) ಬಳಕೆ. [ವಿವರಣೆ: ಮಕ್ಕಳ ಮಾನಸಿಕ ಆರೋಗ್ಯ ಮತ್ತು ಶಿಕ್ಷಣದ ಹಿತದೃಷ್ಟಿಯಿಂದ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.]


ಪ್ರಶ್ನೆ 10: ಕೃಷಿ ಕ್ಷೇತ್ರದಲ್ಲಿ ಸೌರಶಕ್ತಿ ಪಂಪ್‌ಸೆಟ್‌ಗಳನ್ನು ಉತ್ತೇಜಿಸಲು ಜಾರಿಗೆ ತಂದ ಯೋಜನೆಯ ಹೆಸರೇನು? ಉತ್ತರ: 'ಮುಖ್ಯಮಂತ್ರಿ ಸೌರ ಕೃಷಿ ಯೋಜನೆ'. [ವಿವರಣೆ: ರೈತರಿಗೆ ಹಗಲು ಹೊತ್ತಿನಲ್ಲಿ ನಿರಂತರ ವಿದ್ಯುತ್ ಒದಗಿಸಲು ಸೌರಶಕ್ತಿ ಆಧಾರಿತ ಪಂಪ್‌ಸೆಟ್‌ಗಳಿಗೆ ಆದ್ಯತೆ ನೀಡಲಾಗಿದೆ.]


ಪ್ರಶ್ನೆ 11: ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಷ್ಟು ಶಾಲೆಗಳನ್ನು 'ಕರ್ನಾಟಕ ಪಬ್ಲಿಕ್ ಸ್ಕೂಲ್' (KPS) ಆಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ? ಉತ್ತರ: 800 ಶಾಲೆಗಳು. [ವಿವರಣೆ: ₹3,900 ಕೋಟಿ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.]


ಪ್ರಶ್ನೆ 12: ರಾಜ್ಯದ ಸ್ವಂತ ತೆರಿಗೆ ಆದಾಯದ (SOTR) ಅತಿ ದೊಡ್ಡ ಮೂಲ ಯಾವುದು? ಉತ್ತರ: ವಾಣಿಜ್ಯ ತೆರಿಗೆಗಳು (GST ಸೇರಿದಂತೆ). [ವಿವರಣೆ: ಇದರ ನಂತರ ಅಬಕಾರಿ (Excise) ಮತ್ತು ಮುದ್ರಾಂಕ ಶುಲ್ಕಗಳು (Stamps & Registration) ಅತಿ ಹೆಚ್ಚು ಆದಾಯ ತರುತ್ತವೆ.]


ಪ್ರಶ್ನೆ 13: ಯಾವ ನಗರವನ್ನು ರಾಜ್ಯದ ಎರಡನೇ ಐಟಿ (IT) ಹಬ್ ಆಗಿ ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ? ಉತ್ತರ: ಮೈಸೂರು. [ವಿವರಣೆ: ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಮೈಸೂರನ್ನು ಪ್ರಮುಖ ತಂತ್ರಜ್ಞಾನ ಕೇಂದ್ರವನ್ನಾಗಿ ಬೆಳೆಸಲಾಗುತ್ತಿದೆ.]


​ಪ್ರಶ್ನೆ 14: ಬಜೆಟ್ ಗಾತ್ರ ₹4,48,004 ಕೋಟಿ ಎಂದರೆ ಅದರ ಅರ್ಥವೇನು? ​ಉತ್ತರ: ಇದು ಒಂದು ವರ್ಷದಲ್ಲಿ ಸರ್ಕಾರವು ವಿವಿಧ ಮೂಲಗಳಿಂದ ಸಂಗ್ರಹಿಸಿ, ವಿವಿಧ ಕ್ಷೇತ್ರಗಳಿಗೆ ಖರ್ಚು ಮಾಡಲು ಅಂದಾಜಿಸಿರುವ ಒಟ್ಟು ಮೊತ್ತ.



ಭಾರತದ ಸಂವಿಧಾನದಲ್ಲಿ 'ಬಜೆಟ್' (Budget) ಎಂಬ ಪದವನ್ನು ನೇರವಾಗಿ ಬಳಸಲಾಗಿಲ್ಲ. ಬದಲಾಗಿ, ಇದನ್ನು "ವಾರ್ಷಿಕ ಹಣಕಾಸು ವರದಿ" (Annual Financial Statement) ಎಂದು ಕರೆಯಲಾಗುತ್ತದೆ.

​ಬಜೆಟ್‌ಗೆ ಸಂಬಂಧಿಸಿದ ಕೆಲವು ಪ್ರಮುಖ ಸಂವಿಧಾನಿಕ ವಿಧಿಗಳು ಇಲ್ಲಿವೆ:

​1. ವಿಧಿ 112: ವಾರ್ಷಿಕ ಹಣಕಾಸು ವರದಿ (Annual Financial Statement)

​ಇದು ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಪ್ರಮುಖ ವಿಧಿಯಾಗಿದೆ. ಇದರ ಪ್ರಕಾರ:

​ಪ್ರತಿ ಹಣಕಾಸು ವರ್ಷದಲ್ಲಿ ಸರ್ಕಾರದ ಅಂದಾಜು ಆದಾಯ ಮತ್ತು ವೆಚ್ಚಗಳ ಪಟ್ಟಿಯನ್ನು ರಾಷ್ಟ್ರಪತಿಯವರು ಸಂಸತ್ತಿನ ಮುಂದೆ ಮಂಡಿಸುವಂತೆ ಮಾಡಬೇಕು.

​ಇದು ಏಪ್ರಿಲ್ 1 ರಿಂದ ಮಾರ್ಚ್ 31 ರವರೆಗಿನ ಅವಧಿಗೆ ಅನ್ವಯಿಸುತ್ತದೆ.


​2. ವಿಧಿ 202: ರಾಜ್ಯ ಬಜೆಟ್

​ಕೇಂದ್ರಕ್ಕೆ ವಿಧಿ 112 ಹೇಗೋ, ರಾಜ್ಯ ಸರ್ಕಾರಗಳಿಗೆ ವಿಧಿ 202 ಹಾಗೆ.

​ರಾಜ್ಯದ ರಾಜ್ಯಪಾಲರು ಪ್ರತಿ ವರ್ಷ ರಾಜ್ಯದ ಅಂದಾಜು ಆದಾಯ ಮತ್ತು ವೆಚ್ಚದ ವರದಿಯನ್ನು (ರಾಜ್ಯ ಬಜೆಟ್) ವಿಧಾನಸಭೆಯ ಮುಂದೆ ಮಂಡಿಸುವಂತೆ ಮಾಡಬೇಕು.


​3. ವಿಧಿ 114: ವಿನಿಯೋಗ ವಿಧೇಯಕ (Appropriation Bill)

​ಬಜೆಟ್ ಮಂಡನೆಯಾದ ನಂತರ, ಸಂಚಿತ ನಿಧಿಯಿಂದ (Consolidated Fund) ಹಣವನ್ನು ಹಿಂಪಡೆಯಲು ಈ ವಿಧೇಯಕದ ಅನುಮೋದನೆ ಅಗತ್ಯ.

​ಸಂಸತ್ತಿನಲ್ಲಿ ಈ ವಿಧೇಯಕ ಅಂಗೀಕಾರವಾಗುವವರೆಗೆ ಸರ್ಕಾರವು ಹಣವನ್ನು ಖರ್ಚು ಮಾಡುವಂತಿಲ್ಲ.


​4. ವಿಧಿ 110: ಹಣಕಾಸು ವಿಧೇಯಕ (Money Bill)

​ಹೊಸ ತೆರಿಗೆಗಳನ್ನು ವಿಧಿಸುವುದು, ಚಾಲ್ತಿಯಲ್ಲಿರುವ ತೆರಿಗೆಗಳಲ್ಲಿ ಬದಲಾವಣೆ ಮಾಡುವುದು ಅಥವಾ ಸಾಲ ಪಡೆಯುವುದಕ್ಕೆ ಸಂಬಂಧಿಸಿದ ವಿಷಯಗಳು ಇದರಲ್ಲಿರುತ್ತವೆ.

​ಒಂದು ವಿಧೇಯಕವು 'ಹಣಕಾಸು ವಿಧೇಯಕ'ವೇ ಅಥವಾ ಅಲ್ಲವೇ ಎಂದು ನಿರ್ಧರಿಸುವ ಅಂತಿಮ ಅಧಿಕಾರ ಲೋಕಸಭೆಯ ಸ್ಪೀಕರ್ ಅವರಿಗೆ ಇರುತ್ತದೆ.


​5. ವಿಧಿ 266: ಸಂಚಿತ ನಿಧಿ (Consolidated Fund of India)

​ಸರ್ಕಾರಕ್ಕೆ ಬರುವ ಎಲ್ಲಾ ಆದಾಯ (ತೆರಿಗೆಗಳು, ಸಾಲ ಮರುಪಾವತಿ ಇತ್ಯಾದಿ) ಈ ನಿಧಿಗೆ ಜಮೆಯಾಗುತ್ತದೆ.

​ಸಂಸತ್ತಿನ ಅನುಮತಿ ಇಲ್ಲದೆ ಈ ನಿಧಿಯಿಂದ ಒಂದು ರೂಪಾಯಿಯನ್ನೂ ಖರ್ಚು ಮಾಡುವಂತಿಲ್ಲ.

No comments:

Post a Comment